ಅವಾಚ್ಯ ಬೈಗುಳಕ್ಕೆ ಶುರುವಾದ ಜಗಳ – ಅತ್ತೆಯನ್ನೇ ಕೊಂದ ಸೊಸೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಕಾಪುರ ಗ್ರಾಮದಲ್ಲಿ ಅತ್ತೆ ಸೊಸೆಯನ್ನ ಒಣಕೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.

ಮೀನಾಕ್ಷಿ (50) ಕೊಲೆಯಾದ ಮಹಿಳೆ. ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಅಧಿಕ ರಕ್ತಸ್ರಾವವಾಗಿ ಮಹಿಳೆ ಮೃತಪಟ್ಟಿದ್ದಾಳೆ. ಮೃತಳ ಮಗ ನೀಡಿದ ದೂರಿನನ್ವಯ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿ ಸೊಸೆಯನ್ನ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಟೈಲರಿಂಗ್ ಕೆಲಸದಿಂದ ಬಂದ ಹಣಕ್ಕಾಗಿ ಅತ್ತೆ-ಸೊಸೆ ನಡುವೆ ಜಗಳವಾಗಿದೆ. ಅತ್ತೆ ಅವಾಚ್ಯ ಶಬ್ದಗಳಿಂದ ಬೈದ ಹಿನ್ನೆಲೆಯಲ್ಲಿ ಸೊಸೆ ಮನೆಯಲ್ಲಿದ್ದ ಒಣಕೆಯಿಂದ ಬಲವಾಗಿ ಹೊಡೆದಿದ್ದಾಳೆ. ಇದರಿಂದ ಅತ್ತೆ ಮೀನಾಕ್ಷಿ ಸಾವನ್ನಪ್ಪಿದ್ದಾಳೆ.

ಘಟನೆ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಅವಾಚ್ಯ ಬೈಗುಳಕ್ಕೆ ಶುರುವಾದ ಜಗಳ – ಅತ್ತೆಯನ್ನೇ ಕೊಂದ ಸೊಸೆ appeared first on Public TV.

Source: publictv.in

Source link