ಸಂಪುಟ ವಿಸ್ತರಣೆ ಟೆನ್ಶನ್; ಬಿಜೆಪಿಯಲ್ಲಿ ಒಂದಲ್ಲಾ.. ಎರಡಲ್ಲಾ.. 5 ಲಿಸ್ಟ್ ರೆಡಿ..!

ಸಂಪುಟ ವಿಸ್ತರಣೆ ಟೆನ್ಶನ್; ಬಿಜೆಪಿಯಲ್ಲಿ ಒಂದಲ್ಲಾ.. ಎರಡಲ್ಲಾ.. 5 ಲಿಸ್ಟ್ ರೆಡಿ..!

ಬೆಂಗಳೂರು: ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಇದೀಗ ಸಂಪುಟ ವಿಸ್ತರಣ ತಲೆನೋವು ಪ್ರಾರಂಭವಾಗಿದೆ. ಬಿಜೆಪಿಯಲ್ಲಿ ಸಂಪುಟ ವಿಸ್ತರಣೆಗಾಗಿ 5 ಪಟ್ಟಿ ತಯಾರಾಗಿವೆ ಎನ್ನಲಾಗಿದೆ.

ಲಾಬಿ ಮಾಡೋರಿಗೆ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟ ವಿಸ್ತರಣೆಯನ್ನ ಹೈಕಮಾಂಡ್ ಮಾಡುತ್ತದೆ ಎಂದು ಸೂಚನೆ ನೀಡಿದ್ದಾರಂತೆ. ಹಲವು ಸಚಿವಾಕಾಂಕ್ಷಿಗಳಿಂದ ಬೊಮ್ಮಾಯಿ ಮೇಲೆ ಈಗಾಗಲೇ ಒತ್ತಡ ಶುರುವಾಗಿದ್ದು.. ಹಲವು ಮಾಜಿ ಸಚಿವರು ನೂತನ ಸಿಎಂ ಬೆನ್ನು ಬಿಡದೇ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರಂತೆ.

ಇದನ್ನೂ ಓದಿ: ಕರ್ನಾಟಕ ಇತಿಹಾಸದಲ್ಲೇ ನನ್ನ ಆಡಳಿತ ಜನಪರವಾಗಿರಲಿದೆ- ಸಿಎಂ ಬೊಮ್ಮಾಯಿ

ಶೀಘ್ರವೇ ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಲಿದ್ದು ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಸಂಘಟನಾ ಕಾರ್ಯದರ್ಶಿ ಸಂತೋಷ್, ಹಾಗೂ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ನಡ್ಡಾರನ್ನ ಭೇಟಿ ಮಾಡಲಿದ್ದಾರೆ. ಈ ವೇಳೆ ಸಂಪುಟ ವಿಸ್ತರಣೆ ದಿನಾಂಕ ಹಾಗೂ ಸ್ಥಾನಮಾನ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿಎಂ ಆದ ಬಳಿಕ ಬೊಮ್ಮಾಯಿ ಮೊದಲ ನಿರ್ಣಯ; ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ

ಬಿಜೆಪಿಯಲ್ಲಿ ಒಂದಲ್ಲ ಎರಡಲ್ಲ ಒಟ್ಟು 5 ಲಿಸ್ಟ್​ಗಳು ರೆಡಿ

1. ಬಿ.ಎಸ್​. ಯಡಿಯೂರಪ್ಪನವರ ಲಿಸ್ಟ್
2. ಬಸವರಾಜ ಬೊಮ್ಮಾಯಿಯವರ ಲಿಸ್ಟ್
3. ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ದ ಲಿಸ್ಟ್
4. ಬಿಜೆಪಿ ಹೈಕಮಾಂಡ್ ಲಿಸ್ಟ್
5. ಮಿತ್ರ ಮಂಡಳಿ ಲಿಸ್ಟ್
ಈ ಐದು ಲಿಸ್ಟ್​ಗಳ ಮೂಲಕ ದೆಹಲಿಯಲ್ಲಿ ಸಂಪುಟ ವಿಸ್ತರಣೆ ಚರ್ಚೆ ನಡೆಯಲಿದ್ದು.. ಸಚಿವ ಸ್ಥಾನ ಯಾರಿಗೆ ಸಿಗತ್ತೆ ಎಂಬೋದೇ ಇದೀಗ ಬಹು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

The post ಸಂಪುಟ ವಿಸ್ತರಣೆ ಟೆನ್ಶನ್; ಬಿಜೆಪಿಯಲ್ಲಿ ಒಂದಲ್ಲಾ.. ಎರಡಲ್ಲಾ.. 5 ಲಿಸ್ಟ್ ರೆಡಿ..! appeared first on News First Kannada.

Source: newsfirstlive.com

Source link