ಆಘಾತಕಾರಿ ವರದಿ.. BBMP ಹೊರತುಪಡಿಸಿ ಶಾಲೆಯಿಂದ ಹೊರಗುಳಿದ 1.68 ಲಕ್ಷ ಮಕ್ಕಳು

ಆಘಾತಕಾರಿ ವರದಿ.. BBMP ಹೊರತುಪಡಿಸಿ ಶಾಲೆಯಿಂದ ಹೊರಗುಳಿದ 1.68 ಲಕ್ಷ ಮಕ್ಕಳು

ಬೆಂಗಳೂರು: ಶಾಲೆಯಿಂದ ಹೊರಗುಳಿದ ಮಕ್ಕಳ ಮರಳಿ ಶಾಲೆಗೆ ಕರೆತರುವ ವಿಚಾರವಾಗಿ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸುಮೋಟೋ‌ ಪಿಐಎಲ್ ವಿಚಾರಣೆ ನಡೆಯಿತು. ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರ್ಟ್ ಅರ್ಜಿ ದಾಖಲಿಸಿಕೊಂಡಿತ್ತು.

ಹೈಕೋರ್ಟ್​ಗೆ ಅಮಿಕಸ್ ಕ್ಯೂರಿ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಮನೆ ಮನೆ ಸಮೀಕ್ಷೆ ವರದಿ ಸಲ್ಲಿಕೆ ಮಾಡಿದ್ದಾರೆ. ಹೈಕೋರ್ಟ್ ನಿರ್ದೇಶನದಂತೆ ಈ ಮನೆ ಮನೆ ಸಮೀಕ್ಷೆ ನಡೆಸಲಾಗಿದೆ.

ವರದಿಯಲ್ಲೇನು ಹೇಳಿದೆ?
ಗ್ರಾಮೀಣ ಭಾಗಗಳಲ್ಲಿ 3-6 ವರ್ಷ ಒಳಗೆ 1,26,245 ಮಕ್ಕಳು, 6 -18 ವರ್ಷದೊಳಗಿನ 33,344 ಮಕ್ಕಳು, ನಗರ ಪ್ರದೇಶಗಳಲ್ಲಿ 6-18 ವರ್ಷದ ಒಳಗಿನ 8,718 ಮಕ್ಕಳು ಸದ್ಯ ಶಾಲೆಯಿಂದ ಹೊರಗುಳಿದಿದ್ದಾರೆ ಅನ್ನೋ ಅಂಶಗಳನ್ನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು‌ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆಯನ್ನೇ ನಡೆಸಲಾಗಿಲ್ಲ ಎನ್ನಲಾಗಿದೆ.

ಈ ದಾಖಲೆ ಅಂಶಗಳ ದಾಖಲಿಸಿಕೊಂಡ ಹೈಕೋರ್ಟ್.. ಈ ವೇಳೆ ಬಿಬಿಎಂಪಿಗೆ ನೋಟಿಸ್ ನೀಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ 18 ವರ್ಷದವರೆಗಿನ ಮಕ್ಕಳ ಮನೆ ಮನೆ ಸಮೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿ ಅರ್ಜಿ ವಿಚಾರಣೆಯನ್ನ ಮುಂದಿನ ವಾರಕ್ಕೆ ಮುಂದೂಡಿದೆ.

The post ಆಘಾತಕಾರಿ ವರದಿ.. BBMP ಹೊರತುಪಡಿಸಿ ಶಾಲೆಯಿಂದ ಹೊರಗುಳಿದ 1.68 ಲಕ್ಷ ಮಕ್ಕಳು appeared first on News First Kannada.

Source: newsfirstlive.com

Source link