ಶಿವಣ್ಣ ಚಿತ್ರದಿಂದ ಖುಲಾಯಿಸಿದ ಲಕ್; ತಮಿಳು ಸ್ಟಾರ್​​​ ಡೈರೆಕ್ಟರ್​​​​​ ಸಿನಿಮಾದಲ್ಲಿ ಡಾಲಿ ಧನಂಜಯ್​​​​

ಶಿವಣ್ಣ ಚಿತ್ರದಿಂದ ಖುಲಾಯಿಸಿದ ಲಕ್; ತಮಿಳು ಸ್ಟಾರ್​​​ ಡೈರೆಕ್ಟರ್​​​​​ ಸಿನಿಮಾದಲ್ಲಿ ಡಾಲಿ ಧನಂಜಯ್​​​​

ಶಿವಣ್ಣ, ಡಾಲಿ ಧನಂಜಯ್​​ಗೆ ನಿಜಕ್ಕೂ ಲಕ್ಕಿ.. ಯಾಕೆಂದ್ರೆ ಡಾ.ಶಿವರಾಜ್ ಕುಮಾರ್ ನಟನೆಯ ಬೈರಾಗಿ ಸಿನಿಮಾದಿಂದ ಡಾಲಿ ಧನಂಜಯ್​​ಗೆ ತಮಿಳು ಸಿನಿ ರಂಗಕ್ಕೆ ಕಾಲಿಡೋ ಅವಕಾಶ ಫಸ್ಟ್ ಟೈಮ್ ಸಿಕ್ತಿದೆ. ಡಾಲಿ ಜೊತೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್ಗೆ ಚೆನ್ನೈಗೆ ಟಿಕೆಟ್​​ ಸಿಕ್ತಿದೆ.

blank

ಕೆಲ ದಿನಗಳ ಹಿಂದೆ ಶಿವಪ್ಪ ಈಗ ಬೈರಾಗಿ.. ಪೊಸ್ಟರ್ಸ್, ಟೀಸರ್, ಶೂಟಿಂಗ್ ಸ್ಟಿಲ್​​​ಗಳಿಂದ ಘಮ ಗಮನ ಸೆಳೆಯುತ್ತಿದೆ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅಭಿನಯದ ಬೈರಾಗಿ ಸಿನಿಮಾ.. ಟಗರು ಸಿನಿಮಾದ ನಂತರ ಮತ್ತೊಮ್ಮೆ ಡಾಲಿ ಧನಂಜಯ್ ಶಿವಣ್ಣ ಸಿನಿಮಾದಲ್ಲಿ ಕ್ಯಾಮೆರಾ ಫೇಸ್ ಮಾಡ್ತಿದ್ದಾರೆ. ಡಾಲಿ ಪಾಲಿಗೆ ಶಿವಣ್ಣನ ಸಿನಿಮಾ ಒಂಥರ ಲಕ್ಕಿ.. ಟಗರು ಸಿನಿಮಾದಿಂದ ಸಕ್ಸಸ್ ಟ್ರ್ಯಾಕ್​ ಕಂಡುಕೊಂಡು ಧನಂಜಯ್ ಆಗಿದ್ದ ನಟ ಈಗ ಡಾಲಿ ಧನಂಜಯ್ ಆಗಿ ಸಕ್ಸಸ್ ಫುಲ್ ಹೀರೋ ಕಮ್ ವಿಲನ್ ಆಗಿ ಮಿಂಚುತ್ತಿದ್ದಾರೆ ಅರಸೀಕೆರೆಯ ಪೋರ.

ಶಿವಣ್ಣನ ಸಿನಿಮಾ ಡಾಲಿಗ್ಯಾಕೆ ಲಕ್ಕಿ ಅಂದ್ರೆ ಟಗರು ಸಿನಿಮಾದಿಂದ ಸಕ್ಸಸ್ ಸ್ಟಾರ್ ಆದ ಡಾಲಿಗೆ ಈಗ ಶಿವಣ್ಣ ಸಿನಿಮಾದಿಂದಲೇ ಕಾಲಿವುಡ್ ಚಿತ್ರರಂಗಕ್ಕೆ ಟಿಕೆಟ್​ ಪಡೆದಿದ್ದಾರೆ.. ಹೌದು ಚಿತ್ರಪ್ರೇಮಿಗಳೇ; ಫಸ್ಟ್ ಟೈಮ್ ತಮಿಳು ಸಿನಿಮಾವೊಂದಕ್ಕೆ ಡಾಲಿ ಧನಂಜಯ್ ಫಿಕ್ಸ್ ಆಗಿದ್ದಾರೆ.

blank

ಭೈರವಗೀತಾ ಸಿನಿಮಾದ ಮೂಲಕ ತೆಲುಗು ಸಿನಿ ಅಂಗಳಕ್ಕೆ ಹೋದ್ರು ಡಾಲಿ.. ತದ ನಂತರ ಈಗ ಬಹುನಿರೀಕ್ಷಿತ ಪುಷ್ಪ ಸಿನ್ಮಾ ಸೇರಿದಂತೆ ಒಂದೆರಡು ಟಾಲಿವುಡ್ ಸಿನಿಮಾದಲ್ಲಿ ಡಾಲಿ ದಾಗುಂಡಿ ಇಟ್ಟಾಗಿದೆ.. ಈಗ ತಮಿಳು ಸಿನಿಮಾ ಸರದಿ.. ಶಿವಣ್ಣ ಟಗರು ಸಿನಿಮಾದಲ್ಲಿ ಡಾಲಿ ಫರ್ಫಾಮೆನ್ಸ್ ನೋಡಿ ರಾಮ್ ಗೋಪಾಲ್ ವರ್ಮ ತನ್ನ ತೆಲುಗು ಸಿನಿಮಾಕ್ಕೆ ಅವಕಾಶ ಕೊಟ್ರು.. ಈಗ ಇದೇ ಶಿವಣ್ಣನ ಬೈರಾಗಿ ಸಿನಿಮಾದಲ್ಲಿ ಡಾಲಿ ಅಭಿನಯ ಕಲೆಯನ್ನ ಕಂಡು ಕಾಲಿವುಡ್​​ಗೆ ಕರೆದುಕೊಂಡು ಹೋಗ್ತಿದ್ದಾರೆ ಆ ನಿರ್ದೇಶಕ.. ಹಾಗಾದ್ರೆ ಯಾರು ಆ ನಿರ್ದೇಶಕ ಅನ್ನೋ ಪ್ರಶ್ನೆಗೆ ಉತ್ತರ ವಿಜಯ್ ಮಿಲ್ಟನ್.

ವಿಜಯ್ ಮಿಲ್ಟನ್ ಕ್ಯಾಮೆರಾ ಮ್ಯಾನ್ ಡೈರೆಕ್ಟರ್.. ಶಿವಣ್ಣನ ಬೈರಾಗಿ ಸಿನಿಮಾ ಸೂತ್ರಧಾರ ಇವ್ರು.. ಈ ಬೈರಾಗಿ ಸಿನಿಮಾದಲ್ಲಿ ಡಾಲಿ ಧನಂಜಯ್ ಕೂಡ ನಟಿಸುತ್ತಿದ್ದಾರೆ.. ಡೈರೆಕ್ಟರ್ ಸ್ಪೆಷಲ್ ನಾಯಕನ ಸ್ಪೆಷಲ್ ನಟನೆಯನ್ನ ಕಂಡು ವಿಜಯ್ ಮಿಲ್ಟನ್ ತನ್ನ ಮುಂದಿನ ತಮಿಳು ಸಿನಿಮಾಕ್ಕೆ ಅವಕಾಶ ಕೊಡ್ತಿದ್ದಾರೆ.. ಒಂದು ತೆಗೊಂಡ್ರೆ ಮತ್ತೊಂದು ಫ್ರೀ ಅಂಥಾರಲ್ಲ ಹಂಗೆ ಡಾಲಿ ಜೊತೆ ದಿಯಾ ಖ್ಯಾತಿಯ ಬೈರಾಗಿ ಸಿನಿಮಾ ಮತ್ತೊಮ್ಮ ಯುವ ನಟ ಪೃಥ್ವಿ ಅಂಬರ್ ಕೂಡ ತಮಿಳು ರಂಗಕ್ಕೆ ಹೊಗೋ ಚಾನ್ಸ್ ಗಿಟ್ಟಿಸಿಕೊಳ್ತಿದ್ದಾರೆ.

blank

ವಿಜಯ್ ಮಿಲ್ಟನ್ ನಿರ್ದೇಶನ ಮಾಡ್ತಿರೋ ಡಾಲಿ ನಟಿಸಲಿರೋ ತಮಿಳು ಸಿನಿಮಾದ ಹೆಸರು ‘ಮಜಾಹೈ ಪಿಡಿಕಧಾ ಮನಿಧನ್’ ಅಂತ.. ಅಷ್ಟಕ್ಕು ಈ ಸಿನಿಮಾ ನಾಯಕ ವಿಜಯ್ ಆಂಟನಿ.. ವಿಜಯ್ ಆಂಟನಿ ತನ್ನದೆಯಾ ಪ್ರತಿಭೆಯಿಂದ ತಮಿಳು ಸಿನಿರಂಗದಲ್ಲಿ ಹೆಸರು ಮಾಡಿರೋರು.. ಮುಂದಿನ್ ತಿಂಗಳ 12ನೇ ತಾರೀಕ್​​ನಿಂದ ಡಾಲಿ ನಟಿಸಲ್ಲೊಪ್ಪಿರೊ ಹೊಸ ಸಿನಿಮಾ ಶೂಟಿಂಗ್ ಕಾರ್ಯ ಶುರುವಾಗಲಿದೆಯಂತೆ.. ಒಟ್ಟಿನಲ್ಲಿ ಶಿವಣ್ಣನ ಸಿನಿಮಾ ಡಾಲಿಗೆ ಅದೃಷ್ಟದ ಅವಕಾಶ ಅಂದ್ರೆ ತಪ್ಪಾಗಲ್ಲ.

blank

The post ಶಿವಣ್ಣ ಚಿತ್ರದಿಂದ ಖುಲಾಯಿಸಿದ ಲಕ್; ತಮಿಳು ಸ್ಟಾರ್​​​ ಡೈರೆಕ್ಟರ್​​​​​ ಸಿನಿಮಾದಲ್ಲಿ ಡಾಲಿ ಧನಂಜಯ್​​​​ appeared first on News First Kannada.

Source: newsfirstlive.com

Source link