ಬೊಮ್ಮಾಯಿ CM ಆಗಿರೋದಕ್ಕೆ ಬೇಸರವಿಲ್ಲ.. ಆದರೆ ಸಂಪುಟಕ್ಕೆ ಸೇರಲ್ಲ -ಜಗದೀಶ್ ಶೇಟ್ಟರ್

ಬೊಮ್ಮಾಯಿ CM ಆಗಿರೋದಕ್ಕೆ ಬೇಸರವಿಲ್ಲ.. ಆದರೆ ಸಂಪುಟಕ್ಕೆ ಸೇರಲ್ಲ -ಜಗದೀಶ್ ಶೇಟ್ಟರ್

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟಕ್ಕೆ ಸೇರದಿರಲು ನಿರ್ಧರಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್​.. ಸಿಎಂ ಬಸವರಾಜ್ ಬೊಮ್ಮಾಯಿಯ ನೇತೃತ್ವದ ಹೊಸ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವೆ. ಸಂಪುಟ ರಚನೆ ಸಂದರ್ಭದಲ್ಲಿ ನಾನು ಸಂಪುಟ ಸೇರದಿರಲು ನಿರ್ಧರಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ಆಗಿದ್ದು, ಮುಜುಗರ ಬೇಡ ಎಂಬ ಕಾರಣಕ್ಕೆ ನಾನು ಸಂಪುಟ ಸೇರಲ್ಲ ಎಂದಿದ್ದಾರೆ.

ಈ ಬಗ್ಗೆ ವರಿಷ್ಠರಿಗೂ ಮಾಹಿತಿ ನೀಡಿದ್ದೇನೆ. ಪಕ್ಷ ವಹಿಸುವ ಕಾರ್ಯ ನಿರ್ವಹಿಸುವೆ. ಪಕ್ಷ ಸಂಘಟನೆಗೆ ಒತ್ತು ನೀಡಲಿದ್ದೇನೆ. ನಾನು ಸ್ಪೀಕರ್, ರಾಜ್ಯಪಾಲನೂ ಆಗಲ್ಲ. ಬೊಮ್ಮಾಯಿ CM ಆಗಿರುವ ಬಗ್ಗೆ ಬೇಸರ ಇಲ್ಲ. ಕಳೆದ ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಪಕ್ಷದ ನಿರ್ಧಾರವೇ ಫೈನಲ್. ತೃಪ್ತಿ, ಅತೃಪ್ತಿ ಎಂಬ ಮಾತು ಬರಲ್ಲ. ಪಕ್ಷದ ಆದೇಶಕ್ಕೆ ಬದ್ಧರಾಗಿರ್ತೀನಿ ಎಂದಿದ್ದಾರೆ.

The post ಬೊಮ್ಮಾಯಿ CM ಆಗಿರೋದಕ್ಕೆ ಬೇಸರವಿಲ್ಲ.. ಆದರೆ ಸಂಪುಟಕ್ಕೆ ಸೇರಲ್ಲ -ಜಗದೀಶ್ ಶೇಟ್ಟರ್ appeared first on News First Kannada.

Source: newsfirstlive.com

Source link