ಒಳ್ಳೆ ಪ್ರಶ್ನೆ ಕೇಳಿದ್ಯ; ಆದರೆ ನಾನು ರಬ್ಬರ್ ಸ್ಟ್ಯಾಂಪ್ ಆಗಲ್ಲ -ಬೊಮ್ಮಾಯಿ ಭರವಸೆ

ಒಳ್ಳೆ ಪ್ರಶ್ನೆ ಕೇಳಿದ್ಯ; ಆದರೆ ನಾನು ರಬ್ಬರ್ ಸ್ಟ್ಯಾಂಪ್ ಆಗಲ್ಲ -ಬೊಮ್ಮಾಯಿ ಭರವಸೆ

ಬೆಂಗಳೂರು: ನನ್ನ ಆಡಳಿತ ಜನಪರವಾಗಿರುವ ಒಂದು ಒಳ್ಳೆ ಸ್ಟ್ಯಾಂಪ್​ ಅನ್ನ ಕರ್ನಾಟಕ ಇತಿಹಾಸದಲ್ಲಿ ಮೂಡಿಸುತ್ತೇನೆ ಅಂತಾ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಭರಸವೆಯನ್ನ ನೀಡಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವರಾಜ್ ಬೊಮ್ಮಾಯಿ ಕರ್ನಾಟಕ ಇತಿಹಾಸದಲ್ಲೇ ನನ್ನ ಆಡಳಿತ ಜನಪರವಾಗಿರಲಿದೆ ಎಂದಿದ್ದಾರೆ. ಈ ವೇಳೆ ಮಾಧ್ಯಮಗಳು ಬೊಮ್ಮಾಯಿ ಅವರಿಗೆ ಒಂದಿಷ್ಟು ಪ್ರಶ್ನೆಗಳನ್ನ ಕೇಳಿದ್ದವು. ಇಂದು ತೆಗೆದುಕೊಂಡಿರುವ ನಿಮ್ಮ ನಿರ್ಣಯಗಳು ಒಂದಿಷ್ಟು ಆಶಾಭಾವನೆಗಳು ಮೂಡಿಸಿವೆ. ಆದರೆ ‘ಸೆಂಟ್ರಲ್ ಪವರ್​’ ಅನ್ನೋ ವಿಚಾರ ಚರ್ಚೆಯಾಗುತ್ತಿರುವಾಗ, ನೀವು ಕೇವಲ ರಬ್ಬರ್ ಸ್ಟ್ಯಾಪ್ ಆಗಲ್ವಾ ಅಂತಾ ಮಾಧ್ಯಮಗಳು ಬೊಮ್ಮಾಯಿ ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರಿಸಿದ ಬೊಮ್ಮಾಯಿ.. ಒಳ್ಳೆ ಪ್ರಶ್ನೆ ಕೇಳಿದ್ಯ..! ಜನಪರವಾಗಿರುವ ಒಂದು ಒಳ್ಳೆ ಸ್ಟ್ಯಾಂಪ್​ ಅನ್ನ ಕರ್ನಾಟಕ ಇತಿಹಾಸದಲ್ಲಿ ಮೂಡಿಸುತ್ತೇನೆ ಅನ್ನೋ ಭರವಸೆಯನ್ನ ನೀಡಿದ್ದೇನೆ ಎಂದರು. ಇದೇ ವೇಳೆ ಸಿಎಂ ಅವರು ರೈತರ ಮಕ್ಕಳಿಗಾಗಿ ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡಲು.. ಹೊಸ ಶಿಷ್ಯ ವೇತನ ಜಾರಿ. ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 1000 ರೂ. ದಿಂದ 1200 ರೂ.ಗೆ ಹೆಚ್ಚಳ. ವಿಧವಾ ವೇತನ 600 ರೂ. ಬದಲು 800 ರೂ.ಗೆ ಏರಿಕೆ.. ಶೇ.45-75 ಅಂಗವಿಕಲರ ವೇತನ ಯೋಜನೆಯಡಿಯಲ್ಲಿ 600 ರೂ. ಬದಲು 800 ರೂ.ಗೆ ಏರಿಕೆ ಹೀಗೆ ಹಲವು ಯೋಜನೆಗಳನ್ನು ಘೋಷಿಸಿದರು.

The post ಒಳ್ಳೆ ಪ್ರಶ್ನೆ ಕೇಳಿದ್ಯ; ಆದರೆ ನಾನು ರಬ್ಬರ್ ಸ್ಟ್ಯಾಂಪ್ ಆಗಲ್ಲ -ಬೊಮ್ಮಾಯಿ ಭರವಸೆ appeared first on News First Kannada.

Source: newsfirstlive.com

Source link