ಕೋವಿಡ್​ಗೆ ಔಷಧಿ ಸಂಶೋಧಿಸಲು ಕೋರ್ಟ್ ನಿರ್ದೇಶನ ನೀಡೋದು ಅಸಾಧ್ಯ-ಹೈಕೋರ್ಟ್

ಕೋವಿಡ್​ಗೆ ಔಷಧಿ ಸಂಶೋಧಿಸಲು ಕೋರ್ಟ್ ನಿರ್ದೇಶನ ನೀಡೋದು ಅಸಾಧ್ಯ-ಹೈಕೋರ್ಟ್

ಬೆಂಗಳೂರು: ಕೋವಿಡ್ ಗೆ ಔಷಧಿ ಸಂಶೋಧಿಸಲು ಕೋರ್ಟ್ ನಿರ್ದೇಶನ ನೀಡುವುದು ಅಸಾಧ್ಯ.. ಇದು ನ್ಯಾಯಾಲಯದ ವ್ಯಾಪ್ತಿಯ ಹೊರಗೆ ಬರುತ್ತದೆ.. ಇದನ್ನು‌ ತಜ್ಞರು ನಿರ್ಧಾರ ಮಾಡಬೇಕಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ನಿರ್ದಿಷ್ಟ ಔಷಧಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವಂತೆ ನಿರ್ದೇಶಿಸಲು ಕೋರಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು.. ನಿರ್ದಿಷ್ಟ ಔಷಧಿಯು ಕೋವಿಡ್ ನಿವಾರಿಸುವ ಅಂಶಗಳನ್ನು ಹೊಂದಿದೆ.. ಈ ಸಂಬಂಧ ಹೆಚ್ಚಿನ ತನಿಖೆ ನಡೆಸುವ ಅವಶ್ಯಕತೆ ಇದೆ. ಸಂಶೋಧನೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಈ ಅರ್ಜಿಯಲ್ಲಿ ಕೋರಲಾಗಿತ್ತು. ಹೈಕೋರ್ಟ್ ಸಿಜೆ ಎ.ಎಸ್ ಓಕಾ ನ್ಯಾ. ಎನ್‌ ಎಸ್‌ ಸಂಜಯ್‌ ಗೌಡ ರ ಮುಖ್ಯ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆದಿದ್ದು ಕೋವಿಡ್‌ಗೆ ಯಾವ ಟ್ರೀಟ್ಮೆಂಟ್ ನೀಡಬೇಕು ಎಂದು ನಿರ್ಧರಿಸುವ ವಿಚಾರವು ತಜ್ಞರಿಗೆ ಬಿಟ್ಟದ್ದಾಗಿದೆ.

ಸದರಿ ಕೋರಿಕೆಯು ನ್ಯಾಯಾಲಯದ ವ್ಯಾಪ್ತಿಯ ಹೊರಗಿದ್ದಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಇತರರಿಗೆ ನ್ಯಾಯಾಲಯ ನಿರ್ದೇಶನ ನೀಡಲಾಗದು. ಈ ಮನವಿಗೆ ಯಾವುದೇ ಪರಿಹಾರ ಕಲ್ಪಿಸಲಾಗದು ಎಂದು ಹೇಳಿ ವಿಭಾಗೀಯ ಪೀಠ ಅರ್ಜಿಯನ್ನು ವಜಾ ಮಾಡಿದೆ.

The post ಕೋವಿಡ್​ಗೆ ಔಷಧಿ ಸಂಶೋಧಿಸಲು ಕೋರ್ಟ್ ನಿರ್ದೇಶನ ನೀಡೋದು ಅಸಾಧ್ಯ-ಹೈಕೋರ್ಟ್ appeared first on News First Kannada.

Source: newsfirstlive.com

Source link