ಜೋಗಿ ಪ್ರೇಮ್​​​ ಹೊಸ ಸಿನಿಮಾಗೆ ಕಿಕ್ಕೇರಿಸುವ ಸಾಂಗ್​​ ಹಾಡಿದ ಮಂಗ್ಲಿ!

ಜೋಗಿ ಪ್ರೇಮ್​​​ ಹೊಸ ಸಿನಿಮಾಗೆ ಕಿಕ್ಕೇರಿಸುವ ಸಾಂಗ್​​ ಹಾಡಿದ ಮಂಗ್ಲಿ!

ರಾಬರ್ಟ್​​ಗೆ ಕಣ್ಣು ಹೊಡೆದು, ಕರಿಯಾ ಐ ಲವ್ ಯೂ ಎಂದಿದ್ದ ಸತ್ಯವತಿ ಮಂಗ್ಲಿ ಈಗ ಜೋಗಿ ಪ್ರೇಮ್ ಅಡ್ಡದಲ್ಲಿ ಜನ್ಯ ಮ್ಯೂಸಿಕ್ ಅಲೆಯಲ್ಲಿ ನಿಂತಿದ್ದಾರೆ.

ಯಾರಿಗೆ ಯಾವಾಗ ಸ್ಟಾರ್ ತಿರುಗುತ್ತೆ ಅನ್ನೋದನ್ನೇ ಹೇಳೋಕಾಗಲ್ಲ.. ಒಂದು ಟೈಮ್​​ನಲ್ಲಿ ತೆಲುಗು ಜಾನಪದ ಲೋಕದಲ್ಲಿ ಹಾಡುತ್ತಾ ಕುಣಿಯುತ್ತಾ ಅಲ್ಲಿ ಇಲ್ಲಿ ಆ್ಯಂಕರಿಂಗ್ ಮಾಡುತ್ತಿದ್ದ ಗಾಯಕಿ ಮಂಗ್ಲಿ ಇವತ್ತು ಸ್ಟಾರ್ ಸಿಂಗರ್ ಪಟ್ಟಕ್ಕೆ ಏರುತ್ತಿದ್ದಾರೆ.. ಬರಿ ಸಿಂಗರ್​​ ಅಲ್ಲ ಸ್ಟಾರ್ ಸಿಂಗರಮ್ಮನ ಪಟ್ಟಕ್ಕೆ ಏರುತ್ತಿದ್ದಾರೆ. ರಾಬರ್ಟ್ ಸಿನಿಮಾದ ಒಂದೇ ಒಂದು ಹಾಡು ಆಕೆಯ ನಸೀಬನ್ನೇ ಬದಲಾಯಿಸಿದೆ. ತೆಲುಗು ಮತ್ತು ಕನ್ನಡ ಎರಡು ಸಿನಿ ರಂಗ ಮ್ಯೂಸಿಕ್​​​​ ಲೋಕದಲ್ಲಿ ಈಗ ಮಂಗ್ಲಿ ಸಿಂಗಿಂಗ್​ ಸೌಂಡ್ ಗುಃಯಿಗುಡುತ್ತಿದೆ.

blank

ಸತ್ಯವತಿ ಮಂಗ್ಲಿ.. ಈಕೆಯೂ ಚೆಂದ.. ಈಕೆಯ ಹಾಡು ಅಂದವೋ ಅಂದ. ಆಂಧ್ರ, ತೆಲಂಗಾಣ ಹಾಗೂ ನಮ್ಮ ಕರ್ನಾಟಕದಲ್ಲಿ ಮಂಗ್ಲಿ ಗಾಯನಕ್ಕೆ ಫಿದಾ ಆಗಿದ್ದಾರೆ. ಮಂಗ್ಲಿ ಗಾಯನದಲ್ಲೊಂದು ಜಾನಪದ ಸೋಗಡಿದೆ, ಆ ಸೋಗಡಿನ ಧ್ವನಿಯನ್ನ ಕೇಳಿದ ಪ್ರತಿಯೊಬ್ಬರಿಗೆ ಈಕೆ ನಮ್ಮೂರ ಗಾಯಕಿ ಎಂದು ಒಪ್ಪಿಕೊಳ್ಳೋ ಕ್ರೇಜ್ ಉದ್ಭವಾಗಿದೆ.

blank

ಎಲ್ಲಿಯ ಮಂಗ್ಲಿ ಎಲ್ಲಿಯ ಮಸ್ಕಿ. ರಾಬರ್ಟ್ ಸಿನಿಮಾದ ‘ಕಣ್ಣೆ ಅದಿರುಂದಿ’ ಎಂದು ಹಾಡಿದ್ದ ಮೋಡಿಗೆ ರಾಯಚೂರಿನ ಮಸ್ಕಿ ವಿಧಾನಸಭಾ ಉಪ ಚುನಾವಣೆಗೆ ಬಂದು ಪ್ರಚಾರ ಮಾಡೋಷ್ಟರ ಮಟ್ಟಿಗೆ ಮಂಗ್ಲಿ ಮೇನಿಯ ಕರ್ನಾಟಕದಲ್ಲಿದೆ. ಇಂತಹ ವಿಚಾರವನ್ನ ಡೈರೆಕ್ಟರ್​​​ ಜೋಗಿ ಪ್ರೇಮ್ ಎನ್​​​​​​​ ಕ್ಯಾಶ್ ಮಾಡಿಕೊಳದೆ ಇರ್ತಾರ ಹೇಳಿ. ಪ್ರೇಮ್ ತನ್ನ ಯಾವುದೇ ಸಿನಿಮಾವಾಗಲಿ ಪ್ರಚಾರಕ್ಕೆ ಗಗನ ಏಣಿಹಾಕೋ ಶೋಮ್ಯಾನ್​​​​​​​ ಡೈರೆಕ್ಟರ್ ಅವ್ರು. ಈಗ ಏಕ್ ಲವ್​ ಯಾ ಸಿನಿಮಾ ಹಾಡೊಂದಕ್ಕೆ ಸತ್ಯವತಿ ಮಂಗ್ಲಿ ಅವರನ್ನ ಕರಸಿ ಹಾಡಿಸಿ ಗೆದ್ದಿದ್ದಾರೆ ಜೋಗಿ ಪ್ರೇಮ್​​​​.

‘ಏಕ್ ಲವ್​​​ ಯಾ’ನ ಎಣ್ಣೆ ಪಾರ್ಟಿಗೆ ಕಿಕ್​​ ಏರಿಸಿದ ಮಂಗ್ಲಿ..!
ಜನ್ಯ ಮ್ಯೂಸಿಕ್​​​ನಲ್ಲಿ 2ನೇ ಬಾರಿಗೆ ಮಂಗ್ಲಿ ಸಿಂಗಿಂಗ್..!

ಮಂಗ್ಲಿ ಮೇನಿಯಾ ಸ್ಯಾಂಡಲ್​​ವುಡ್​​ನಲ್ಲಿ ಭರ್ಜರಿಯಾಗಿ ಮುಂದುವರೆಯುತ್ತಿದೆ. ರಾಬರ್ಟ್ ನಂತರ ಕರಿಯಾ ಐ ಲವ್ ಯೂ ಅನ್ನೋ ಸಿನಿಮಾದಲ್ಲಿ ಮಂಗ್ಲಿ ಹಾಡಿದ್ದಾರೆ. ಜೊತೆಗೆ ಶಿವಣ್ಣ 124ನೇ ಸಿನಿಮಾದಲ್ಲೂ ಪಾತ್ರವೊಂದನ್ನ ಮಾಡ್ತಿದ್ದಾರೆ. ಈಗ ಹಾಡುಗಳನ್ನ ಜನರಿಗೆ ಮುಟ್ಟಿಸೋದ್ರಲ್ಲಿ ಸಿದ್ದ ಹಸ್ತರಾಗಿರೋ ಬೆಸಗರ ಹಳ್ಳಿ ಪ್ರತಿಭೆ ಪ್ರೇಮ್ ಏಕ್​ ಲವ್ ಯಾ ಸಿನಿಮಾದ ಹಾಡೊಂದನ್ನ ಹಾಡಿಸಿದ್ದಾರೆ. ಚಿತ್ರಪ್ರೇಮಿಗಳೇ ತಂಡಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಎಣ್ಣೆ ಸಾಂಗ್ ಒಂದನ್ನ ಹಾಡಿಸಿದ್ದಾರಂತೆ. ಒಟ್ಟಿನಲ್ಲಿ ಸತ್ಯವತಿ ಮಂಗ್ಲಿ ಮೇನಿಯಾ ಸ್ಯಾಂಡಲ್​ವುಡ್​ನಲ್ಲಿ ಭರ್ಜರಿಯಾಗಿ ಮುಂದುವರೆಯುತ್ತಿದೆ.

blank

The post ಜೋಗಿ ಪ್ರೇಮ್​​​ ಹೊಸ ಸಿನಿಮಾಗೆ ಕಿಕ್ಕೇರಿಸುವ ಸಾಂಗ್​​ ಹಾಡಿದ ಮಂಗ್ಲಿ! appeared first on News First Kannada.

Source: newsfirstlive.com

Source link