ಮಾಜಿ ಸಿಎಂ ಪುತ್ರನಿಗೆ ಪಟ್ಟ ಕಟ್ಟಿದ್ದೇಕೆ ಬಿಜೆಪಿ? ಕೇಸರಿ ಹೈಕಮಾಂಡ್ ನೀಡಿದ ಸಂದೇಶ ಏನು?

ಮಾಜಿ ಸಿಎಂ ಪುತ್ರನಿಗೆ ಪಟ್ಟ ಕಟ್ಟಿದ್ದೇಕೆ ಬಿಜೆಪಿ? ಕೇಸರಿ ಹೈಕಮಾಂಡ್ ನೀಡಿದ ಸಂದೇಶ ಏನು?

ಬೆಂಗಳೂರು: ಸಿಎಂ ಪಟ್ಟಕ್ಕಾಗಿ ಲಾಬಿ ನಡೆಸದ, ಯಾರ ಪರ-ವಿರುದ್ಧವೂ ಮಾತಾಡದ ಬಸವರಾಜ ಬೊಮ್ಮಾಯಿಗೆ ಹೈಕಮಾಂಡ್ ಸಿಎಂ ಪಟ್ಟ ಕಟ್ಟಿದೆ. ಇದು ಅಚ್ಚರಿಗೂ ಕಾರಣವಾಗಿದೆ. ಯಾಕಂದ್ರೆ ಬೊಮ್ಮಾಯಿಯನ್ನು ಸಿಎಂ ಮಾಡಿರುವ ಹೈಕಮಾಂಡ್​​​​, ರಾಜ್ಯ ಬಿಜೆಪಿ ನಾಯಕರಿಗೆ ಮಹತ್ವದ ಸಂದೇಶ ರವಾನಿಸಿದೆ.

blank

ಅಚ್ಚರಿಯಂತೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು ಹೇಗೆ?
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಸಿಎಂ ಪಟ್ಟಕ್ಕಾಗಿ ದೊಡ್ಡ ಲಾಬಿಯೇ ಆರಂಭವಾಗಿತ್ತು. ದೆಹಲಿ ಯಾತ್ರೆ ಕೈಗೊಂಡ ನಾಯಕರು ಸಿಎಂ ರೇಸ್​​​​​ನಲ್ಲಿ ಗುರುತಿಸಿಕೊಂಡಿದ್ರು. ಇನ್ನಿಲ್ಲದ ಕಸರತ್ತನ್ನೂ ಮಾಡಿದ್ರು. ಆದ್ರೆ ಅಂತಿಮವಾಗಿ ಹೈಕಮಾಂಡ್​ ಮಾತ್ರ ಅಚ್ಚರಿಯೆಂಬಂತೆ ಬಸವರಾಜ ಬೊಮ್ಮಾಯಿಗೆ ಸಿಎಂ ಪಟ್ಟ ಕಟ್ಟಿದೆ.

blank

ಇದನ್ನೂ ಓದಿ: ಸಿಎಂ ಆದ ಬಳಿಕ ಬೊಮ್ಮಾಯಿ ಮೊದಲ ನಿರ್ಣಯ; ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ 

ಬೊಮ್ಮಾಯಿ ಆಯ್ಕೆ ಹೇಗೆ?
ಬಸವರಾಜ ಬೊಮ್ಮಾಯಿ ಯಾರ ಪರ, ವಿರುದ್ಧವೂ ಮಾತನಾಡದ ಶಾಂತ ವ್ಯಕ್ತಿ. ಕಳಂಕ ರಹಿತ ಹಾಗೂ ವಿವಾದಗಳಿಂದ ದೂರವಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಸದ್ಯ ರಾಜ್ಯ ಕಮಲ ಮನೆಯಲ್ಲಿರುವ ಎಲ್ಲಾ ಬಣಗಳ ವಿಶ್ವಾಸದ ವ್ಯಕ್ತಿ ಕೂಡ ಆಗಿದ್ದಾರೆ. ಪ್ರಮುಖವಾಗಿ ಬೊಮ್ಮಾಯಿ ಲಾಬಿ ಪ್ರಭಾವಗಳಿಂದ ದೂರ ಉಳಿದಿದ್ದಾರೆ.

blank

ಹೀಗಾಗಿ ಬಸವರಾಜ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಿರುವ ಹೈಕಮಾಂಡ್ ಆ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿದೆ. ಪಕ್ಷ ಅಂದ್ರೆ ಏನು? ನಾಯಕನಾದವನು ಹೇಗಿರಬೇಕು ಎಂಬ ನಾಯಕತ್ವದ ಪಾಠವನ್ನೂ ಮಾಡಿದೆ.
ಹೈಕಮಾಂಡ್​​ನಿಂದ ನಾಯಕತ್ವ ಪಾಠ!

 1. ಪಕ್ಷ ವಿರೋಧಿ ಚಟುವಟಿಕೆಯನ್ನ ಹೈಕಮಾಂಡ್​ ಸಹಿಸಲ್ಲ
 2. ಬರೀ ಮಾತೆ ಕೆಲಸ ಆಗಬಾರದು, ಕೆಲಸ ಮಾತಾಗಬೇಕು
 3. ಬಿಜೆಪಿಯಲ್ಲಿ ಲಾಬಿ, ಪ್ರಭಾವಗಳಿಗೆ ಯಾವುದೇ ಬೆಲೆ ಇಲ್ಲ
 4. ಎಲ್ಲರ ಜೊತೆ ವಿಶ್ವಾಸದಿಂದ ಇರುವವನು ನಿಜ ನಾಯಕ
 5. ನಾಯಕನಿಗೆ ಯಾವುದೇ ವಿವಾದ, ಕಳಂಕಗಳು ಇರಬಾರದು
 6. ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಅವಶ್ಯ
 7. ನಾಯಕನಿಗೆ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆ ಇರಬೇಕು
 8. ಹಿರಿಯ ನಾಯಕರ ಜೊತೆ ಉತ್ತಮ ಬಾಂಧವ್ಯ ಒಂದು ಶಕ್ತಿ
 9. ರಾಜ್ಯ ಮುನ್ನಡೆಸಲು ರಾಜಕೀಯ ನಿಪುಣತೆ ಒಂದು ಸಾಧನೆ
 10. ಎಂಥ ಸಂದರ್ಭದಲ್ಲೂ ಪಕ್ಷದ ವರ್ಚಸ್ಸು ಹೆಚ್ಚಿಸಬೇಕು
 11. ಗೊಂದಲ, ಭಿನ್ನಾಭಿಪ್ರಾಯಗಳಿಂದ ಏನೂ ಸಾಧಿಸಲಾಗದು ಅನ್ನೋದು ಹೈಕಮಾಂಡ್​​​​​​ ಪಾಠವಾಗಿದೆ.

ಇದನ್ನೂ ಓದಿ: ಒಂದು ಸುತ್ತು ಉರುಳಿದ ಕಾಲಚಕ್ರ; ಸ್ಥಾನಪಲ್ಲಟಗೊಂಡ ಬಿಎಸ್​ವೈ-ಬೊಮ್ಮಾಯಿ ಸಂಬಂಧ 

blank

ಈ ಎಲ್ಲಾ ಕಾರಣಗಳಿಂದ ಬಸವರಾಜ ಬೊಮ್ಮಾಯಿಯನ್ನು ಸಿಎಂ ಆಗಿ ಆಯ್ಕೆ ಮಾಡುವ ಮೂಲಕ ಹೈಕಮಾಂಡ್ ರಾಜ್ಯ ನಾಯಕರಿಗೆ ನಾಯಕತ್ವದ ಪಾಠ ಮಾಡಿದೆ. ಆದ್ರೆ ಅದನ್ನ ರಾಜ್ಯ ನಾಯಕರು ಯಾವ ರೀತಿಯಾಗಿ ತೆಗೆದುಕೊಳ್ತಾರೆ ಅನ್ನೋದು ಒಂದು ಪ್ರಶ್ನೆಯಾದ್ರೆ? ಹೈಕಮಾಂಡ್​​​ ಅಂದುಕೊಂಡಂತೆ ಬೊಮ್ಮಾಯಿ ಪರ್ವದಲ್ಲಿ ಬಿಜೆಪಿಯ ವರ್ಚಸ್ಸು ಹೆಚ್ಚುತ್ತಾ ಅನ್ನೋದು ಮತ್ತೊಂದು ಪ್ರಶ್ನೆಯಾಗಿದೆ.

ವಿಶೇಷ ಬರಹ: ಶಿವಪ್ರಸಾದ್​​​​​, ಪೊಲಿಟಿಕಲ್ ಬ್ಯೂರೋ ನ್ಯೂಸ್​​ಫಸ್ಟ್​

The post ಮಾಜಿ ಸಿಎಂ ಪುತ್ರನಿಗೆ ಪಟ್ಟ ಕಟ್ಟಿದ್ದೇಕೆ ಬಿಜೆಪಿ? ಕೇಸರಿ ಹೈಕಮಾಂಡ್ ನೀಡಿದ ಸಂದೇಶ ಏನು? appeared first on News First Kannada.

Source: newsfirstlive.com

Source link