ಸುದೀಪ್​​ ಫ್ಯಾನ್ಸ್​ಗೆ ಗುಡ್​ನ್ಯೂಸ್​​​; ವಿಕ್ರಾಂತ್ ರೋಣದ ಜಾಕ್ವೆಲಿನ್ ಫರ್ನಾಂಡಿಸ್ ಫಸ್ಟ್ ಲುಕ್ ರಿಲೀಸ್

ಸುದೀಪ್​​ ಫ್ಯಾನ್ಸ್​ಗೆ ಗುಡ್​ನ್ಯೂಸ್​​​; ವಿಕ್ರಾಂತ್ ರೋಣದ ಜಾಕ್ವೆಲಿನ್ ಫರ್ನಾಂಡಿಸ್ ಫಸ್ಟ್ ಲುಕ್ ರಿಲೀಸ್

ವಿಕ್ರಾಂತ್ ರೋಣನಿಂದ ಈ ತಿಂಗಳು 31ನೇ ತಾರೀಕು ಒಂದು ಸ್ಪೆಷಲ್ ಗಿಫ್ಟ್ ಸಿಗಲಿದೆ. ಅದೇನು ಅನ್ನೋದ್ರ ಜೊತೆಗೆ ವಿಕ್ರಾಂತ್ ರೋಣ ಸಿನಿಮಾ ಒಂದು ಸಾಧನೆಯನ್ನ ಮಾಡಿದೆ. ಒಂದು ಸಿನಿಮಾ ರಿಲೀಸ್​​ಗೂ ಮೊದಲು ಸೌಂಡ್ ಮಾಡಬೇಕು, ಆ ಸಿನಿಮಾವನ್ನ ನೋಡ್ಲೇ ಬೇಕು ಅಂತ ಜನಮನಕ್ಕೆ ಅನ್ನಿಸಬೇಕು. ಆ ರೀತಿಯ ಪ್ರಚಾರದ ಕಹಳೆಯನ್ನೇ ಊದಬೇಕು.. ಆಗ್ಲೇ ಒಂದು ಹಿಟ್ ಆಗೋದು ಅಭಿಮಾನಿಗಳು ಥಿಯೇಟರ್ ಅಂಗಳಕ್ಕೆ ಓಡೋಡಿ ಬರೋದು.. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಪ್ರಚಾರದ ವಿಚಾರದಲ್ಲಿ ಕುತೂಹಲ ಕೆರಳಿಸುವ ವಿಚಾರದಲ್ಲಿ ಮುಂಚೂಣಯಲ್ಲಿದೆ. ಅದ್ಯಾವಾಗ ಬರುತ್ತಪ್ಪ ವಿಕ್ರಾಂತ್ ರೋಣ, ಅದ್ಯಾವಾಗ ನೋಡ್ತಿವಪ್ಪ ಸಿನಿಮಾವನ್ನಾ ಸುದೀಪಿಯನ್ಸ್ ಕಾದು ಕುಳಿತಿರುವಂತೆ ಮಾಡುತ್ತಿದೆ ವಿಕ್ರಾಂತ್ ರೋಣ.

blank

ಈ ತಿಂಗಳ ಕಳೆದ 10ನೇ ತಾರೀಖ್ ಶ್ರೀಲಂಕನ್ ಚಿಂಗಾರಿ , ಬಾಲಿವುಡ್ ಸುಂದ್ರಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನ ಕರೆಸಿ ಕುಣಿಸಿ ಒಂದು ಪಾತ್ರವನ್ನ ಮಾಡಿಸಿ ಸುದ್ದಿಯಾಗಿತ್ತು. ವಿಕ್ರಾಂತ್ ರೋಣ ಫಿಲ್ಮ್ ಟೀಮ್. ಈಗ ಇದೇ ಜಾಕ್ಲಿ ವಿಚಾರದಲ್ಲಿ ಜಾಕ್ ಮಂಜು ನಿರ್ಮಾಣದ ವಿ.ಆರ್ ಸಿನಿಮಾ ಸದ್ದು ಮಾಡಲಿದೆ. ಒಂದು ಹಾಡು ಮತ್ತು ವಿಶೇಷ ಪಾತ್ರ ಮಾಡಿರುವ ಜಾಕ್ಲಿನ್ ಪಾತ್ರದ ಕಿಕ್ ಕೊಡೋ ಲುಕ್ ಅನ್ನ ಬಿಡುಗಡೆ ಮಾಡುತ್ತಿದೆ ಅನುಪ್ ಭಂಡಾರಿ ಸಾರಥ್ಯದ ವಿಕ್ರಾಂತ್ ರೋಣ ಫಿಲ್ಮ್ ಟೀಮ್.

blank

ಜಾಕ್ಲಿ ಝಗಮಗ ಸುದ್ದಿಯ ಜೊತೆಗೆ ಮತ್ತೊಂದು ವಿಕ್ರಾಂತ್ ರೋಣನ ಹೆಮ್ಮೆಯ ವಿಚಾರವೊಂದು ಹೊರ ಬಂದಿದೆ. ಈಗಾಗಲೇ ಈ ಸಿನಿಮಾದಲ್ಲಿ ನಟಿಸಿ ನರ್ತಿಸಿದ ಪ್ರತಿಯೊಬ್ಬರು ವಿಕ್ರಾಂತ್ ರೋಣ ಸಿನಿಮಾದ ಭವಿಷ್ಯವನ್ನ ವಾಣಿಯನ್ನ ನುಡಿದಿದ್ದಾರೆ. ಅವರೆಲ್ಲ ಮಾತಿಗೆ ಪುಷ್ಠಿ ಕುತೂಹಲದ ದೃಷ್ಟಿ ನೀಡುವಂತ ಸಮಾಚಾರ ಕೇಳಿ. ಪ್ರತಿಷ್ಠಿತ ಐಎಂಡಿಬಿ ಪ್ರಕಟಿಸಿರುವ most anticipated indian movie ಪಟ್ಟಿಯಲ್ಲಿ ವಿಕ್ರಾಂತ್ ರೋಣ ಸಿನಿಮಾ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ.

blank

Internet Movie Database ವೆಬ್ಸೈಟ್ ಪ್ರಕಟಿಸಿರುವ ಭಾರತೀಯ ಚಿತ್ರರಂಗದ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಶೇ.54.0 ಪಡೆದು ವಿಕ್ರಾಂತ್ ರೋಣ ಮೊದಲ ಸ್ಥಾನ ಅಲಂಕರಿಸಿದೆ. ಕೆಜಿಎಫ್ ಚಾಪ್ಟರ್ 2 ಶೇ.18.3 ಇದೆ. ಇನ್ನು ಉಳಿದ ಸಾಲಿನಲ್ಲಿ ನವರಸ, ರಾಧೆ ಶ್ಯಾಮ್, ಪುಷ್ಪ ಸೇರಿದಂತೆ ಅನೇಕ ಸಿನಿಮಾಗಳು ಸ್ಥಾನ ಪಡೆದಿದೆ. ಆದ್ರೆ ಈ ಬಹುನಿರೀಕ್ಷಿತ ಇಂಡಿಯನ್ ಸಿನಿಮಾ ಪಟ್ಟಿಯಲ್ಲಿ ಥ್ರಿಬಲ್ ಆರ್ ಸ್ಥಾನ ಪಡೆಯದೇ ಇರೋದು ಅಚ್ಚರಿ ಮೂಡಿಸಿದೆ.

ಒಟ್ಟಿನಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾಕ್ಕೆ ಅನೂಪ್ ಭಂಡಾರಿ ಓಂಕಾರ ಹಾಕಿದಾಗಿಂದಲೂ ಏನಾದ್ರೊಂದು ಧಮಾಕೆಧಾರ್ ಸಮಾಚಾರಗಳಿಂದ ಸುದೀಪ್ ಸೌಂಡ್ ಮಾಡ್ತಾನೇ ಇದೆ.. ಈ ವರ್ಷದ ಕೊನೆಯಲ್ಲಿ ಥ್ರಿಡಿ ರೂಪದಲ್ಲಿ ಬಹುಭಾಷೆಗಳಲ್ಲಿ ವಿಶ್ವಮಟ್ಟದಲ್ಲಿ ತೆರೆಕಾಣೋ ಸಾಧ್ಯತೆ ಇದೆ.

The post ಸುದೀಪ್​​ ಫ್ಯಾನ್ಸ್​ಗೆ ಗುಡ್​ನ್ಯೂಸ್​​​; ವಿಕ್ರಾಂತ್ ರೋಣದ ಜಾಕ್ವೆಲಿನ್ ಫರ್ನಾಂಡಿಸ್ ಫಸ್ಟ್ ಲುಕ್ ರಿಲೀಸ್ appeared first on News First Kannada.

Source: newsfirstlive.com

Source link