ಹಲವು ಸುತ್ತಿನ ಮಾತುಕತೆ ಸಫಲ.. ಗಡಿಯಲ್ಲಿ ಸೇನೆ ಹಿಂತೆಗೆತ; ಚೀನಾ ಘೋಷಣೆ

ಹಲವು ಸುತ್ತಿನ ಮಾತುಕತೆ ಸಫಲ.. ಗಡಿಯಲ್ಲಿ ಸೇನೆ ಹಿಂತೆಗೆತ; ಚೀನಾ ಘೋಷಣೆ

ನವದೆಹಲಿ: ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಉಭಯ ದೇಶಗಳ ಯೋಧರು ಸಾವನ್ನಪ್ಪಿದ್ದರು. ಕಳೆದ ವರ್ಷ 2020 ಜೂನ್ 15ನೇ ತಾರೀಕಿನಂದು ಗಲ್ವಾನ್‌ ಕಣಿವೆ ಪ್ರದೇಶದಲ್ಲಿ ಗಡಿ ನಿಯಂತ್ರಣಾ ರೇಖೆ ಬಳಿ ಭಾರತೀಯ ಸೇನೆ ಮತ್ತು ಚೀನಾದ ಪೀಪಲ್‌ ಲಿಬರೇಷನ್‌ ಆರ್ಮಿ ನಡುವೆ ಕಾಳಗ ನಡೆದಿತ್ತು.

ಹಿಂಸಾತ್ಮಕ ಗಲ್ವಾನ್​ ಘರ್ಷಣೆಯಲ್ಲಿ ಉಭಯ ರಾಷ್ಟ್ರಗಳ ಸೈನಿಕರು ಸಾವನ್ನಪ್ಪಿದಲ್ಲದೇ ಇದು ಇಡೀ ಪ್ರಪಂಚದ ಭೌಗೋಳಿಕ ರಾಜಕೀಯ ಪರಿಸರದ ಮೇಲೂ ಪರಿಣಾಮ ಬೀರಿತ್ತು. ಹೀಗಾಗಿ ಎರಡು ದೇಶಗಳ ನಡುವೆ ಹಲವು ಸುತ್ತಿನ ಮಿಲಿಟರಿ ಮಟ್ಟದ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ತಮ್ಮ ದೇಶದ ಸೇನೆಯನ್ನು ಹಿಂದೆ ಕರೆಸಿಕೊಳ್ಳುವ ಬಗ್ಗೆ ಮಾತುಕತೆ ನಡೆಸಲಾಗಿತ್ತು.

ಇದನ್ನೂ ಓದಿ: ಗಲ್ವಾನ್​ ಘರ್ಷಣೆ; ಸೈನಿಕರ ಸಾವಿನ ಮಾಹಿತಿ ಬೆನ್ನಲ್ಲೇ ವಿಡಿಯೋ ಬಿಡುಗಡೆಗೊಳಿಸಿದ ಚೀನಾ

ಸದ್ಯ ಚೀನಾ ಈಗ ತನ್ನ ದೇಶದ ಸೈನಿಕರನ್ನು ಗಲ್ವಾನ್​​ ಪ್ರದೇಶದಿಂದ ಹಿಂದಕ್ಕೆ ಕರೆಸಿಕೊಂಡಿರುವುದಾಗಿ ಮಾಹಿತಿ ನೀಡಿದೆ. ಈ ನಿರ್ಧಾರವೂ ಭಾರತ ಮತ್ತು ಚೀನಾ ಬಹುತ್ವ ಮತ್ತು ನಮ್ಯತೆಯ ತತ್ವಗಳಿಗೆ ಕಾರಣವಾಗಲಿದೆ. ಉಭಯ ದೇಶಗಳ ನಡುವಿನ ಒಟ್ಟಾರೆ ಸಂಬಂಧಗಳಿಗೆ ಗಡಿಯುದ್ದಕ್ಕೂ ಶಾಂತಿ ಮತ್ತು ಸ್ನೇಹ ಅಗತ್ಯ ಇದೆ ಎಂದು ಈ ಹಿಂದೆಯೇ ಭಾರತ ಹೇಳಿತ್ತು.

The post ಹಲವು ಸುತ್ತಿನ ಮಾತುಕತೆ ಸಫಲ.. ಗಡಿಯಲ್ಲಿ ಸೇನೆ ಹಿಂತೆಗೆತ; ಚೀನಾ ಘೋಷಣೆ appeared first on News First Kannada.

Source: newsfirstlive.com

Source link