ಯುವ ಪಡೆಯ ಛಲ ಬಿಡದ ಹೋರಾಟಕ್ಕೆ ಒಲಿಯದ ಜಯ -ಫೈನಲ್​ ಸ್ವರೂಪ ಪಡೆದುಕೊಳ್ತು ಇಂದಿನ ಪಂದ್ಯ

ಯುವ ಪಡೆಯ ಛಲ ಬಿಡದ ಹೋರಾಟಕ್ಕೆ ಒಲಿಯದ ಜಯ -ಫೈನಲ್​ ಸ್ವರೂಪ ಪಡೆದುಕೊಳ್ತು ಇಂದಿನ ಪಂದ್ಯ

ಆಲ್​​ರೌಂಡರ್​ಗೆ ಕೊರೊನಾ ಸೋಂಕು, ಪ್ರಮುಖ ಆಟಗಾರರೆಲ್ಲಾ ಐಸೋಲೆಷನ್​ಗೆ ಶಿಫ್ಟ್​​.. ಪ್ರವಾಸಕ್ಕೆ ತೆರಳಿದಾಗಲೇ ಸೆಕೆಂಡ್​ ಸ್ಟ್ರಿಂಗ್​​​ ಟೀಮ್​ ಎಂದು ಹಿನ್ನಡೆ ಅನುಭವಿಸಿದ್ದ ಯಂಗ್​​ ಇಂಡಿಯಾ, ನಿನ್ನೆ ನಿಜವಾದ ಸತ್ವ ಪರೀಕ್ಷೆಕ್ಕೆ ಒಳಗಾಯ್ತು. ಪ್ರಮುಖ 9 ಆಟಗಾರರು ಐಸೋಲೇಷನ್​ನಲ್ಲಿರೋವಾಗ ನಾಲ್ವರು ಡೆಬ್ಯೂ ಸ್ಟಾರ್​​ಗಳೊಂದಿಗೆ ಕಣಕ್ಕಿಳಿದ ಭಾರತದ ಸೋಲುಂಡಿದೆ.

ಕೊರೊನಾ ಸವಾಲಿನ ನಡುವೆ ಪ್ರಮುಖ ಆಟಗಾರರ ಅಲಭ್ಯತೆಯಲ್ಲಿ ಕಣಕ್ಕಿಳಿದ ಟೀಮ್​ ಇಂಡಿಯಾ, ಅಭಿಮಾನಿಗಳ ನಿರೀಕ್ಷೆಯನ್ನ ಹುಸಿಗೊಳಿಸಲಿಲ್ಲ. ಚೊಚ್ಚಲ ಅವಕಾಶ ಪಡೆದ ಆಟಗಾರರೂ ಕೂಡ ಭರವಸೆ ಮೂಡಿಸಿದ್ರು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಭಾರತಕ್ಕೆ ಶಿಖರ್​​ ಧವನ್​ – ಋತುರಾಜ್​ ಗಾಯಕ್ವಾಡ್​​ ಉತ್ತಮ ಆರಂಭ ಒದಗಿಸಿದ್ರು. ತಾಳ್ಮೆಯ ಆಟವಾಡಿದ ಈ ಜೋಡಿ ಮೊದಲ ವಿಕೆಟ್​​ಗೆ 49 ರನ್​ಗಳ ಕಾಣಿಕೆ ನೀಡ್ತು. ಪದಾರ್ಪಣೆಯ ಇನ್ನಿಂಗ್ಸ್​ನಲ್ಲಿ ಎಚ್ಚರಿಕೆಯ ಆಟವಾಡಿದ ಋತುರಾಜ್​ ಗಾಯಕ್ವಾಡ್​​ 21 ರನ್​ಗಳಿಸಿ ಔಟಾದ್ರು. ಅತ್ತ ನಾಯಕನ ಆಟವಾಡಿದ ಶಿಖರ್​ ಧವನ್ ತಂಡಕ್ಕೆ 40 ರನ್​ಗಳ ​ಕಾಣಿಕೆ ನೀಡಿದ್ರು. ಅಂತಿಮವಾಗಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು ಟೀಮ್​ ಇಂಡಿಯಾ 132 ರನ್​ಗಳನ್ನ ಕಲೆ ಹಾಕ್ತು.

ಟೀಮ್​ ಇಂಡಿಯಾ ನೀಡಿದ 133 ರನ್​ಗಳ ಸುಲಭದ ಗುರಿ ಬೆನ್ನತ್ತಿದ ಆತಿಥೇಯ ಶ್ರೀಲಂಕಾಗೆ ಉತ್ತಮ ಆರಂಭದ ಸಿಗಲಿಲ್ಲ. ಪವರ್​ ಪ್ಲೇ ಅಂತ್ಯಕ್ಕೆ 1 ವಿಕೆಟ್​​ ಕಳೆದುಕೊಂಡು 36 ರನ್​ಗಳಿಸಿ ಸುಸ್ಥಿತಿಯಲ್ಲೇ ಇದ್ದ ಲಂಕಾಗೆ ಸೆಕೆಂಡ್​ ಶಾಕ್​ ನೀಡಿದ್ದು ವರುಣ್​ ಚಕ್ರವರ್ತಿ. ತನ್ನ 2ನೇ ಓವರ್​ನ ಕೊನೆಯ ಎಸೆತದಲ್ಲಿ ಸದೀರಾ ಸಮರವಿಕ್ರಮಗೆ ಚಕ್ರವರ್ತಿ ಗೇಟ್​ಪಾಸ್​​ ನೀಡಿದ್ರು. ಅದರ ಬೆನ್ನಲ್ಲೇ ದಸುನ್​ ಶನಕ, ಕುಲ್​ದೀಪ್​ ಬೌಲಿಂಗ್​ನಲ್ಲಿ ಸಂಜು ಸ್ಯಾಮ್ಸನ್​ ಚುರುಕಿನ ಕೀಪಿಂಗ್​ಗೆ ಬಲಿಯಾದ್ರು.

ಒಂದೆಡೆ ವಿಕೆಟ್​ ಬೀಳ್ತಾ ಒದ್ರೂ ಇನ್ನೊಂದು ತುದಿಯಲ್ಲಿ ಕ್ರಿಸ್​ ಕಚ್ಚಿ ನಿಂತಿದ್ದ ಮಿನೋದ್​ ಭಾನುಕಾ ಕೂಡ ಕುಲ್​ದೀಪ್​ ಮೋಡಿಗೆ ಬಲಿಯಾದ್ರು. ಬೌಂಡರಿ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದ ಹಸರಂಗ ಆಟಕ್ಕೆ ರಾಹುಲ್​ ಚಹರ್​ ಬ್ರೇಕ್​ ಹಾಕಿದ್ರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಮೇಶ್​ ಮೆಂಡಿಸ್​​ ಆಟವೂ ಅಲ್ಪ ಮೊತ್ತಕ್ಕೆ ಅಂತ್ಯವಾಯ್ತು.

ಆದ್ರೆ ಅಂತಿಮ ಹಂತದಲ್ಲಿ ಹೋರಾಟದ ಇನ್ನಿಂಗ್ಸ್​​ ಕಟ್ಟಿದ ಚಮಿಕಾ ಕರುಣರತ್ನೆ, ಧನಂಜಯ ಲಂಕಾ ಪಡೆಯನ್ನ ಗೆಲುವಿನ ದಡ ಸೇರಿಸುವಲ್ಲಿ ಯಶಸ್ಸಿಯಾದ್ರು. 19.4 ಓವರ್​​ಗಳಲ್ಲಿ 6 ವಿಕೆಟ್​​ ಕಳೆದುಕೊಂಡು ಶ್ರೀಲಂಕಾ ಗುರಿ ಮುಟ್ಟಿತು. ಇದರೊಂದಿಗೆ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದ್ದು ಇಂದಿನ ಪಂದ್ಯ ಫೈನಲ್​ ಸ್ವರೂಪ ಪಡೆದುಕೊಂಡಿದೆ.

The post ಯುವ ಪಡೆಯ ಛಲ ಬಿಡದ ಹೋರಾಟಕ್ಕೆ ಒಲಿಯದ ಜಯ -ಫೈನಲ್​ ಸ್ವರೂಪ ಪಡೆದುಕೊಳ್ತು ಇಂದಿನ ಪಂದ್ಯ appeared first on News First Kannada.

Source: newsfirstlive.com

Source link