ಒಲಿಂಪಿಕ್ಸ್​ ಸ್ಪರ್ಧಾಳುಗಳಿಗೆ ಗುಡ್​ ನ್ಯೂಸ್​​​ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​

ಒಲಿಂಪಿಕ್ಸ್​ ಸ್ಪರ್ಧಾಳುಗಳಿಗೆ ಗುಡ್​ ನ್ಯೂಸ್​​​ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​

1. ಇಂದು ನೂತನ ಸಿಎಂ ಉತ್ತರ ಕನ್ನಡ ಪ್ರವಾಸ

blank
ನೂತನ ಸಿಎಂ ಬಸವರಾಜ ಬೊಮ್ಮಾಯಿ ಇಂದು ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ. ನೆರೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಿಎಂ ಪರಿಶೀಲನೆ ನಡೆಸಲಿದ್ದಾರೆ. ಇಂದು ಬೆಳಗ್ಗೆ 9:30ಕ್ಕೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳಲಿರುವ ಸಿಎಂ‌ ಬೊಮ್ಮಾಯಿ‌, ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಯಲ್ಲಾಪುರ, ಕಾರವಾರ, ಅಂಕೋಲಾಗೆ ತೆರಳಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೇ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಗಳ ಕುರಿತಂತೆ ಶಾಸಕರು, ಸಂಸದರು, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

2. ಸಚಿವ ಸ್ಥಾನಕ್ಕಾಗಿ ಶಾಸಕ ಓಲೇಕಾರ್‌ ಲಾಬಿ

blank
ಹೊಸ ಸಂಪುಟ ರಚನೆಗೂ ಮುನ್ನ ಮಂತ್ರಿ ಸ್ಥಾನಕ್ಕೆ ಲಾಬಿ ಶುರುವಾಗಿದೆ. ಶಾಸಕ ನೆಹರೂ ಓಲೇಕಾರ್ ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ 22 ವರ್ಷ ಕಳೆದರೂ ಇನ್ನೂ ಅಭಿವೃದ್ಧಿ ಕಾರ್ಯಗಳು ಜನಪರವಾಗಿಲ್ಲ. ಹೀಗಾಗಿ ಜಿಲ್ಲೆಯ ನೆಹರೂ ಓಲೇಕಾರ್​ ಅವರನ್ನ ಸಚಿವರನ್ನಾಗಿ ಮಾಡಿ ಅಂತ ಅವರ​ ಬೆಂಬಲಿಗರು ಆಗ್ರಹಿಸಿದ್ದಾರೆ. ನಾವು ಬಿ.ಸಿ. ಪಾಟೀಲ್​ ಮತ್ತು ಶಂಕರ್​ ಅವರನ್ನ ಕಡೆಗಣಿಸಿ ಅಂತ ಹೇಳುತ್ತಿಲ್ಲ. ಆದ್ರೆ ಸೀನಿಯಾರಿಟಿ ಆಧಾರದಲ್ಲಿ ಶಾಸಕ ನೆಹರೂ ಓಲೇಕಾರ್​ಗೂ ಸಚಿವ ಸ್ಥಾನ ನೀಡಿ ಅಂತ ಕೇಳಿಕೊಳ್ಳುತ್ತಿದ್ದೇವೆ ಅಂತ ಹೈ ಕಮಾಂಡ್​ಗೆ ಒತ್ತಾಯಿಸಿದ್ದಾರೆ.

3. ಸುಧಾಕರ್​ ಅಭಿಮಾನಿಗಳಿಂದ ವಿಶೇಷ ಪೂಜೆ

blank
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಈಗ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಪ್ರಭಾವಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಡಾ. ಕೆ ಸುಧಾಕರ್‌ಗೆ ಮುಂದಿನ ಮಂತ್ರಿ ಮಂಡಲದಲ್ಲಿಯೂ ಸ್ಥಾನ ಸಿಗಲಿ ಅಂತಾ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಕೊದಂಡರಾಮಸ್ವಾಮಿ ದೇವಾಲಯದಲ್ಲಿ ಡಾ. ಕೆ. ಸುಧಾಕರ್ ಅಭಿಮಾನಿಗಳು ವಿಶೇಷ ಪೂಜೆ ನೆರವೇರಿಸಿದ್ದಾರೆ. ಸುಧಾಕರ್ ಹಗಲಿರುಳೆನ್ನದೆ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸೋ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಮಂತ್ರಿ ಸ್ಥಾನ ನೀಡ್ಬೇಕೆಂದು ಆಗ್ರಹಿಸಿದ್ದಾರೆ.

4. ಇಂದು ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ

blank
ಬಿಎಸ್​ವೈ ರಾಜೀನಾಮೆ ಹಿನ್ನೆಲೆ ನೂತನ ಮಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸದ್ದಾಗಿದೆ. ರಾಜ್ಯದ ನೂತನ ಸಾರಥಿ ಅಧಿಕಾರ ವಹಿಸಿಹೊಳ್ಳೂತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಇವತ್ತು ಸುದ್ದಿಗೋಷ್ಠಿ ನಡೆಸಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲುಗಳನ್ನ ಎಸೆಯೋ ಮೂಲಕ ತರಾಟೆಗೂ ತೆಗೆದುಕೊಳ್ಳೋದಕ್ಕೆ ಸಜ್ಜಾಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಮಹತ್ವದ ಸುದ್ದಿಗೋಷ್ಠಿ ಕರೆದಿರೋ ಸಿದ್ದರಾಮಯ್ಯ 2 ವರ್ಷಗಳ ಬಿಜೆಪಿ ಸರ್ಕಾರದ ವೈಫಲ್ಯದ ಬಗ್ಗೆ ಚಾಟಿ ಬೀಸೋದಕ್ಕೆ ಸಜ್ಜಾಗಿದ್ದಾರೆ.

5. ಮರು ಜೀವ ಪಡೆದುಕೊಂಡ ಹಂಪಿ ಸ್ಮಾರಕಗಳು

blank
ಮೂರ್ನಾಲ್ಕು ದಿನಗಳಿಂದ ಜಲಾವೃತಗೊಂಡಿದ್ದ ತುಂಗಭದ್ರಾ ನದಿ ಪಾತ್ರದ ಸ್ಮಾರಕಗಳಿಗೆ ಈಗ ಮರು ಜೀವ ಬಂದಂತಾಗಿದೆ. ಕಳೆದ ನಾಲ್ಕೈದು ದಿಗಳಿಂದ ಸುರಿದ ಧಾರಾಕಾರ ಮಳೆಗೆ ತುಂಬಭದ್ರಾ ನದಿಯ ಹೊರ ಹರಿವು ಹೆಚ್ಚಿದ್ದು ನದಿ ಪಾತ್ರದ ಹಂಪಿ ಸ್ಮಾರಕಗಗಳು ಮುಳುಗಡೆ ಆಗಿದ್ದವು. ಒಳ ಹರಿವು ಹೆಚ್ಚಾದ ಕಾರಣ ಟಿಬಿ ಡ್ಯಾಮ್​ನಿಂದ ​ತುಂಗಭದ್ರ ನದಿಗೆ 1.80 ಲಕ್ಷ ಕ್ಯೂಸೆಕ್​ ನೀರು ಹರಿಬಿಡಲಾಗಿತ್ತು. ಹೀಗಾಗಿ ಹಂಪಿಯ ಕರ್ಮಾಧಿ ಮಂಟಪ, ಸ್ನಾನಘಟ್ಟ, ಪುರಂದರ ಮಂಟಪ, ಇತರೆ ಸ್ಮಾರಕಗಳು ಪೂರ್ತಿ ಜಲಾವೃತಗೊಂಡಿದ್ದವು. ಆದರೆ ಈಗ ನದಿಯ ಹೊರ ಹರಿವು ಪ್ರಮಾಣ ಕಡಿಮೆಯಾಗಿದ್ದು ಸ್ಮಾರಕಗಳು ಕಾಣುವಂತಾಗಿವೆ.

6. ‘ಪಂಚ ರಾಜ್ಯಗಳ ಚುನಾವಣೆ’ಗೆ ಪೂರ್ವಭಾವಿ ಸಭೆ
2022ರಲ್ಲಿ ದೇಶದ 5 ರಾಜ್ಯಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಐದೂ ರಾಜ್ಯಗಳ ಚುನಾವಣಾ ಆಯುಕ್ತರ ಜೊತೆಗೆ ಸಭೆ ನಡೆಸಿದೆ. ಗೋವಾ, ಮಣಿಪುರ, ಪಂಜಾಬ್​, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿ 2022ರಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಪೂರ್ವಭಾವಿ ಸಭೆ ನಡೆಸಿದೆ. ಮುಂದಿನ ಮಾರ್ಚ್​ ವೇಳೆಗೆ ಈ ಐದೂ ರಾಜ್ಯಗಳ ಅಧಿಕಾರವಧಿ ಪೂರ್ಣಗೊಳ್ಳಲಿದೆ. ಇನ್ನೂ ಚುನಾವಣಾ ಪ್ರಕ್ರಿಯೆ ಯಾವ ರೀತಿಯಲ್ಲಿರಬೇಕು ಅನ್ನೋ ಬಗ್ಗೆ ಅಧಿಕಾರಿಗಳಿಂದ ಆಯೋಗ ಸಲಹೆಗಳನ್ನ ಪಡೆದುಕೊಂಡಿದೆ.

7. ಕೊರೊನಾದಿಂದಾಗಿ ಜಾಗತಿಕ ಸಾವಿನ ಪ್ರಮಾಣ ಏರಿಕೆ

blank
ಕಳೆದ ವಾರದಲ್ಲಿ ಕೋವಿಡ್‌ಗೆ ವಿಶ್ವದಾದ್ಯಂತ ಸಾವನ್ನಪ್ಪಿದವರ ಸಂಖ್ಯೆ ಶೇ.21ರಷ್ಟು ಹೆಚ್ಚಾಗಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಡೆಲ್ಟಾ ರೂಪಾಂತರಿ ಮುಂದುವರಿಯುತ್ತಿರುವುದರಿಂದ ಸಾವಿನ ಪ್ರಮಾಣ ಏರಿಕೆಯಾಗಿದೆ. ಈ ಸಾವುಗಳಲ್ಲಿ 69,000 ಅಮೆರಿಕ ಮತ್ತು ಆಗ್ನೇಯ ಏಷ್ಯಾದಲ್ಲಿ ವರದಿಯಾಗಿದೆ. ಅಲ್ಲದೇ ಒಟ್ಟು ಮೃತರ ಸಂಖ್ಯೆಯು 40 ಲಕ್ಷಕ್ಕೆ ಏರಿಕೆಯಾಗಿದೆ ಅಂತಾ ಎಂದು ಡಬ್ಲ್ಯೂಹೆಚ್‌ಒ ಹೇಳಿದೆ. ಇನ್ನು ಕೊರೊನಾ ಪ್ರಕರಣಗಳ ಏರಿಕೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದ್ದು, ಈ ಸಂಖ್ಯೆ ಮುಂದುವರಿದರೆ ಮುಂದಿನ 2 ವಾರಗಳಲ್ಲಿ 20 ಕೋಟಿ ಮೀರಬಹುದು ಎಂದು ಹೇಳಿದೆ.

8. ಆ.31ರವರೆಗೆ ಕೊರೊನಾ ಮಾರ್ಗಸೂಚಿ​ ವಿಸ್ತರಣೆ
ಕೊರೊನಾ ನಿಯಂತ್ರಣಕ್ಕಾಗಿ ಆಗಸ್ಟ್​​ 31ರವರಗೆ ಕೊರೊನಾ ಮಾರ್ಗಸೂಚಿಗಳನ್ನ ವಿಸ್ತರಿಸಿ ಕೇಂದ್ರ ಸರ್ಕಾರ ಅಧಿಕೃತ ಸೂಚನೆ ಹೊರಡಿಸಿದೆ. ಕೊರೊನಾ ಪಾಸಿಟಿವಿಟಿ ದರ ಹೆಚ್ಚಿರೋ ಜಿಲ್ಲೆಗಳಲ್ಲಿ ಇನ್ನೂ ಕಠಿಣ ನಿಯಮಗಳನ್ನ ಪಾಲಿಸುವಂತೆ ಕೇಂದ್ರ ಸರ್ಕಾರ ಸೂಚನೆಯನ್ನ ನೀಡಿದೆ. ಈ ಹಿನ್ನೆಲೆ ಕೇಂದ್ರ ಗೃಹ ಗೃಹ ಕಾರ್ಯದರ್ಶಿ ಅಜಯ್​ ಭಲ್ಲ ಎಲ್ಲ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ಪತ್ರ ಬರೆದಿದ್ದು, ಯಾವುದೇ ಕಾರಣಕ್ಕೂ ಕೊರೊನಾ ಮಾರ್ಗಸೂಚಿಗಳನ್ನ​ ನಿರ್ಲಕ್ಷಿಸಬಾರದು ಅಂತ ಎಚ್ಚರಿಕೆಯನ್ನ ನೀಡಿದ್ದಾರೆ.

9. ಆನ್​​ಲೈನ್​ ಗೇಮ್​ ನಿಯಂತ್ರಿಸಲು ಹೈಕೋರ್ಟ್​​ ಸೂಚನೆ

blank
ಮಕ್ಕಳಿಗೆ ಆನ್​​ಲೈನ್​​ ಗೇಮ್ಸ್​​​ಗಳ ಚಟದಿಂದ ರಕ್ಷಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂಬಂಧ ದೆಹಲಿ ಹೈಕೋರ್ಟ್​​ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆಫ್‌ಲೈನ್ ಮತ್ತು ಆನ್‌ಲೈನ್​​ ಗೇಮ್​​ಗಳಿಂದ ಮಕ್ಕಳನ್ನ ರಕ್ಷಿಸುವ ಸಲುವಾಗಿ ರಾಷ್ಟ್ರೀಯ ನೀತಿಯನ್ನ ರೂಪಿಸಲು ಹಾಗೂ ನಿಯಂತ್ರಣ ಪ್ರಾಧಿಕಾರವನ್ನ ರಚಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಇನ್ನು ಅರ್ಜಿಯ ವಿಚಾರಣೆಯನ್ನ ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್‌ ನ್ಯಾಯಪೀಠ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಕಾನೂನು ಮತ್ತು ನ್ಯಾಯ ಸಚಿವಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದೆ.

10. ಒಲಿಂಪಿಕ್ಸ್​ ಸ್ಪರ್ಧಾಳುಗಳಿಗೆ ಗುಡ್​ ನ್ಯೂಸ್​​​

blank
ಒಲಿಂಪಿಕ್ಸ್​ನಲ್ಲಿ ಭಾರತದ ನೂರಾರು ಅಥ್ಲೀಟ್ಸ್​ ಭಾಗಿಯಾಗಿದ್ದಾರೆ. ಇದರಲ್ಲಿ ಶೇ. 20ರಷ್ಟು ಸ್ಪರ್ಧಾಳುಗಳು ಭಾರತೀಯ ರೇಲ್ವೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 25 ಅಥ್ಲೀಟ್ಸ್​, 5 ಕೋಚ್​ ಹಾಗೂ ಓರ್ವ ಪಿಸಿಯೋ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿರುವ ರೇಲ್ವೇ ಸಿಬ್ಬಂದಿಗೆ ಭಾರತೀಯ ರೈಲ್ವೇ ಬಂಪರ್ ಬಹುಮಾನ ಘೋಷಣೆ ಮಾಡಿದೆ. ಚಿನ್ನ ಗೆದ್ದರೆ 3 ಕೋಟಿ, ಬೆಳ್ಳಿ ಪದಕ ಗೆಲ್ಲುವ ಅಥ್ಲೀಟ್ಸ್‌ಗೆ 2 ಕೋಟಿ ಹಾಗೂ ಕಂಚಿನ ಪದಕ ಗೆಲ್ಲುವ ಸ್ಪರ್ಧಿಗಳಿಗೆ 1 ಕೋಟಿ ರೂಪಾಯಿಗಳನ್ನ ನೀಡಲು ಮುಂದಾಗಿದೆ. ಉಳಿದಂತೆ 8ನೇ ಸ್ಥಾನದೊಳಗೆ ಬಂದರೆ 35 ಲಕ್ಷ ರೂಪಾಯಿ, ಸ್ಪರ್ಧೆಯಲ್ಲಿ ಭಾಗಿಯಾಗಿರುವ ಸ್ಪರ್ಧಾಳುಗಳಿಗೆ 7.5 ಲಕ್ಷ ರೂಪಾಯಿ ನೀಡುವುದಾಗಿ ರೈಲ್ವೇ ಇಲಾಖೆ ಘೋಷಿಸಿದೆ.

The post ಒಲಿಂಪಿಕ್ಸ್​ ಸ್ಪರ್ಧಾಳುಗಳಿಗೆ ಗುಡ್​ ನ್ಯೂಸ್​​​ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​ appeared first on News First Kannada.

Source: newsfirstlive.com

Source link