ಅಶ್ಲೀಲ ಸಿನಿಮಾ ನಿರ್ಮಾಣ: ರಾಜ್ ಕುಂದ್ರಾರನ್ನ ನೋಡ್ತಿದ್ದಂತೆ ಆಕ್ರೋಶ ಹೊರ ಹಾಕಿರುವ ಶಿಲ್ಪಾ ಶೆಟ್ಟಿ!

ಅಶ್ಲೀಲ ಸಿನಿಮಾ ನಿರ್ಮಾಣ: ರಾಜ್ ಕುಂದ್ರಾರನ್ನ ನೋಡ್ತಿದ್ದಂತೆ ಆಕ್ರೋಶ ಹೊರ ಹಾಕಿರುವ ಶಿಲ್ಪಾ ಶೆಟ್ಟಿ!

ಮುಂಬೈ: ಅಶ್ಲೀಲ ಸಿನಿಮಾ ನಿರ್ಮಾಣ ಆರೋಪ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾರನ್ನು ಜುಲೈ 19ರಂದು ಮುಬೈ ಪೊಲೀಸರು ಬಂಧಿಸಿದ್ದಾರೆ. ಲೆಟೆಸ್ಟ್​ ವಿಷಯ ಏನಂದ್ರೆ ಪತಿ ರಾಜ್ ಕುಂದ್ರಾ ವಿರುದ್ಧ ಶಿಲ್ಪಾ ಶೆಟ್ಟಿ ಗರಂ ಆಗಿದ್ದು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ನಿಮ್ಮ ಮೇಲಿನ ಆರೋಪ ನಮ್ಮ ಕುಟುಂಬ ಘನತೆಗೆ ಧಕ್ಕೆಯಾಗಿದೆ ಎಂದು ರಾಜ್​ಕುಂದ್ರಾ ವಿರುದ್ಧ ಹರಿಹಾಯ್ದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜುಲೈ 23 ರಂದು ರಾಜ್​ಕುಂದ್ರಾ ಅವರನ್ನ ವಿಚಾರಣೆಗಾಗಿ ಅವರ ನಿವಾಸಕ್ಕೆ ಕರ್ಕೊಂಡು ಬಂದಿದ್ದರು. ಈ ವೇಳೆ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ನಡುವೆ ವಾಗ್ಯುದ್ಧವೇ ನಡೆದಿದೆ ಎನ್ನಲಾಗಿದೆ. ಇಬ್ಬರ ಮಧ್ಯೆ ನಡೆದಿರುವ ಕೆಲವು ವಿಚಾರಗಳನ್ನ ಪೊಲೀಸ್ ಅಧಿಕಾರಿಗಳು ರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

blank

ಇಂಡಿಯಾ ಟುಡೆ ಮಾಡಿರುವ ವರದಿ ಪ್ರಕಾರ.. ರಾಜ್ ಕುಂದ್ರಾರನ್ನ ನೋಡುತ್ತಿದ್ದಂತೆ ಆಕ್ರೋಶ ಹೊರ ಹಾಕಿರುವ ಶಿಲ್ಪಾ ಶೆಟ್ಟಿ, ವಾಗ್ವಾದಕ್ಕೆ ಇಳಿದಿದ್ದರು. ನಿಮ್ಮ ಮೇಲಿನ ಆರೋಪವು ನಮ್ಮ ಕುಟುಂಬದ ಮೇಲಿದ್ದ ಗೌರವವನ್ನ ಕಮ್ಮಿ ಮಾಡಿದೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನ ಕಡಿಮೆ ಮಾಡಿದೆ ಎಂದು ಕುಂದ್ರಾ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಶಿಲ್ಪಾ ಶೆಟ್ಟಿ ಈ ವಿಚಾರದಲ್ಲಿ ತುಂಬಾ ನೊಂದಿದ್ದಾರೆ. ಅದರಲ್ಲೂ ಪೊಲೀಸರು ತಮ್ಮನ್ನ ವಿಚಾರಣೆಗೆ ಒಳಪಡಿಸಿರೋದ್ರಿಂದ ಆಘಾತಕ್ಕೆ ಒಳಗಾಗಿದ್ದಾರೆ. ಅದೇ ಕಾರಣಕ್ಕೆ ತನಿಖೆಗೆ ರಾಜ್​ಕುಂದ್ರಾ ಅವರನ್ನ ಕರೆದುಕಂಡು ಬಂದಾಗ ಪತಿ ಜೊತೆ ವಾಗ್ವಾದಕ್ಕೆ ಇಳಿದಿದ್ದರು ಅಂತಾ ಈ ಹಿಂದೆ ವರದಿಯಾಗಿತ್ತು. ಇದೀಗ ಫ್ಯಾಮಿಲಿ ವಿಚಾರಕ್ಕೆ ಸಂಬಂಧಿಸಿಯೂ ವಾಗ್ವಾದಗಳು ನಡೆದಿವೆ ಅನ್ನೋ ಮಾಹಿತಿ ಲಭ್ಯವಾಗಿದೆ.

The post ಅಶ್ಲೀಲ ಸಿನಿಮಾ ನಿರ್ಮಾಣ: ರಾಜ್ ಕುಂದ್ರಾರನ್ನ ನೋಡ್ತಿದ್ದಂತೆ ಆಕ್ರೋಶ ಹೊರ ಹಾಕಿರುವ ಶಿಲ್ಪಾ ಶೆಟ್ಟಿ! appeared first on News First Kannada.

Source: newsfirstlive.com

Source link