ಪೊಲೀಸ್​​ ಅರೆಸ್ಟ್​​ ಮಾಡ್ತಾರೆಂದು ಹೆದರಿ ಸೈನೈಡ್ ನುಂಗಿ ಆತ್ಮಹತ್ಯೆ ಶರಣಾದ ಕುಖ್ಯಾತ ಸರಕಳ್ಳ

ಪೊಲೀಸ್​​ ಅರೆಸ್ಟ್​​ ಮಾಡ್ತಾರೆಂದು ಹೆದರಿ ಸೈನೈಡ್ ನುಂಗಿ ಆತ್ಮಹತ್ಯೆ ಶರಣಾದ ಕುಖ್ಯಾತ ಸರಕಳ್ಳ

ಬೆಂಗಳೂರು: ಕುಖ್ಯಾತ ಸರಗಳ್ಳನೊಬ್ಬ ಪೊಲೀಸ್​​ ಬಂಧನ ಮಾಡಲು ತೆರಳಿದ್ದ ವೇಳೆ ಹೆದರಿ ಸೈನೈಡ್​ ತಿಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೊಸಕೋಟೆ- ಚಿಂತಾಮಣಿ ಮಾರ್ಗದಲ್ಲಿ ಬರುವ ಪಿಳಗುಂಪಾದ ದೇವಾಲಯದ ಬಳಿ ನಡೆದಿದೆ.

ಆಂಧ್ರ ಪ್ರದೇಶದ ಮದನಪಲ್ಲಿ ಮೂಲದ ಶಂಕರ್ (42) ಮೃತ ಅರೋಪಿಯಾಗಿದ್ದಾನೆ. ಸರಗಳ್ಳತನ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಲು ತೆರಳಿದ್ದಾಗ ಘಟನೆ ನಡೆದಿದೆ.

blank

ಆಂಧ್ರದಲ್ಲಿ ಶಂಕರ್ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದ್ದು, ಸರಗಳ್ಳತನ ಮಾಡೋದನ್ನೇ ವೃತ್ತಿಯಾಗಿಸಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಶಂಕರ್ ತನ್ನ ಸಹಚರ ಚಂದ್ರಶೇಖರ್​ನೊಂದಿಗೆ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಕಳ್ಳತನ ಮಾಡುವುದಕ್ಕೂ ಮೊದಲು ದೇವಾಲಯಕ್ಕೆ ತೆರಳಿ ಕೈ ಮುಗಿದು ಬರುವುದು ಆರೋಪಿಯ ಅಭ್ಯಾಸವಾಗಿತ್ತು ಎನ್ನಲಾಗಿದೆ.

blank
ಆರೋಪಿ ಚಂದ್ರಶೇಖರ್

ಶಂಕರ್ ದೇವಾಲಯಕ್ಕೆ ಆಗಮಿಸಿದ್ದಾನೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ಬಂಧಿಸಲು ಅಚ್ಚರಿ ದಾಳಿ ನಡೆಸಿದ್ದರು. ಈ ವೇಳೆ ಆತ ಜೇಬಿನಲ್ಲಿದ್ದ ಸೈನೈಡ್​ ಸೇವಿಸಿದ್ದು, ಸ್ಥಳದಲ್ಲೇ ರಕ್ತ ಕಾರಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭಿಸಿದೆ.

ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ರಕ್ಷಣೆ ಮಾಡಲು ಪ್ರಯತ್ನಿಸಿದರು ಚಿಕಿತ್ಸೆ ಫಲಕಾರಿಯಾಗಿಲ್ಲ ಎನ್ನಲಾಗಿದ್ದು, ಪ್ರಕರಣದಲ್ಲಿ ಶಂಕರ್​ ಜೊತೆಗಿದ್ದ ಮತ್ತೊಬ್ಬ ಆರೋಪಿ ಚಂದ್ರಶೇಖರನನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

The post ಪೊಲೀಸ್​​ ಅರೆಸ್ಟ್​​ ಮಾಡ್ತಾರೆಂದು ಹೆದರಿ ಸೈನೈಡ್ ನುಂಗಿ ಆತ್ಮಹತ್ಯೆ ಶರಣಾದ ಕುಖ್ಯಾತ ಸರಕಳ್ಳ appeared first on News First Kannada.

Source: newsfirstlive.com

Source link