ಕಾರು ಚಾಲಕನಿಂದಲೇ ನಿರ್ಮಾಪಕ ರಮೇಶ್ ಕಶ್ಯಪ್​​ ಮನೆಗೆ ಕನ್ನ -ಇಬ್ಬರು ಅರೆಸ್ಟ್​

ಕಾರು ಚಾಲಕನಿಂದಲೇ ನಿರ್ಮಾಪಕ ರಮೇಶ್ ಕಶ್ಯಪ್​​ ಮನೆಗೆ ಕನ್ನ -ಇಬ್ಬರು ಅರೆಸ್ಟ್​

ಬೆಂಗಳೂರು: ನಕಲಿ ಕೀ ಬಳಸಿ ನಿರ್ಮಾಪಕ ರಮೇಶ್ ಕಶ್ಯಪ್ ಮನೆಗೆ ಕನ್ನ ಹಾಕಿ ಚಿನ್ನಾಭರಣ ಕದ್ದೊಯ್ದಿದ್ದ ಇಬ್ಬರು ಚಾಲಾಕಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ್ (32) ಹಾಗೂ ಅಭಿಷೇಕ್ (34) ಬಂಧಿತ ಆರೋಪಿಗಳು.

ಕನ್ನಡ ಚಿತ್ರರಂಗದ ನಿರ್ಮಾಪಕ ರಮೇಶ್​ ಕಶ್ಯಪ್​ ಅವರ ಮನೆಯಲ್ಲಿ ಜುಲೈ 10ರಂದು ಕಳ್ಳತನ ನಡೆದಿತ್ತು. ಅವರ ಮನೆಯಲ್ಲಿನ 3 ಲಕ್ಷ ರೂಪಾಯಿ  ಹಣ ಹಾಗೂ 710 ಗ್ರಾಂ ಚಿನ್ನಾಭರಣವನ್ನು ಕಳ್ಳರು ನಕಲಿ ಕೀ ಬಳಸಿ ಕದ್ದೊಯ್ದಿದ್ದರು. ಈ ಸಂಬಂಧ ಹನುಮಂತನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬೆನ್ನು ಹತ್ತಿದ ಪೊಲೀಸರು ರಮೇಶ್ ಕಶ್ಯಪ್​ ಅವರ ಮನೆಯ ಕಾರು ಚಾಲಕನೇ ಕೃತ್ಯ ಎಸಗಿರುವದು ಬೆಳಕಿಗೆ ಬಂದಿದೆ. ಕಾರು ಚಾಲಕ ಚಂದ್ರಶೇಖರ ಮನೆಯ ಅಸಲಿ ಕೀಯನ್ನು ತೆಗೆದುಕೊಂಡು ಹೋಗಿ ನಕಲಿ ಕೀ ಮಾಡಿಸಿಕೊಂಡು ಬಂದಿದ್ದ ಎನ್ನಲಾಗಿದೆ. ದರೋಡೆಯ ಸುಳಿವು ಸಿಗಬಾರದೆಂಬ ಕಾರಣಕ್ಕಾಗಿ ತನ್ನ ಸ್ನೇಹಿತ ಅಭಿಷೇಕ್ ಮೂಲಕ ಮನೆಗೆ ಕನ್ನ ಹಾಕಿಸಿದ್ದಾನೆ.

ಇನ್ನು ಕದ್ದ ಚಿನ್ನವನ್ನು ಸ್ನೇಹಿತನ ಜೊತೆ ಸೇರಿ ಅಡವಿಟ್ಟು ಹಣ ಪಡೆದಿದ್ದರು ಎನ್ನಲಾಗಿದೆ. ಅನುಮಾನ ವ್ಯಕ್ತಪಡಿಸಿದ ಪೊಲೀಸರು, ಮನೆಯ ಸಿಸಿಟಿವಿಯನ್ನು ಪರಿಶೀಲಿಸಿ ಚಂದ್ರಶೇಖರ್​ನ್ನು ವಿಚಾರಣೆ ಮಾಡಿ ಟವರ್ ಲೊಕೇಷನ್ ಟ್ರೇಸ್​ ಮಾಡಿದಾಗ ಕಾರು ಚಾಲಕನೆ ದರೋಡೆ ಮಾಡಿರುವ ಸಂಗತಿ ಬಯಲಾಗಿದೆ.

The post ಕಾರು ಚಾಲಕನಿಂದಲೇ ನಿರ್ಮಾಪಕ ರಮೇಶ್ ಕಶ್ಯಪ್​​ ಮನೆಗೆ ಕನ್ನ -ಇಬ್ಬರು ಅರೆಸ್ಟ್​ appeared first on News First Kannada.

Source: newsfirstlive.com

Source link