ಬ್ಯಾಡ್ಮಿಂಟನ್- ಕ್ವಾರ್ಟರ್ ​​​​​​​​​​ಫೈನಲ್​​ ಪ್ರವೇಶಿಸಿದ ಪಿ.ವಿ.ಸಿಂಧು

ಬ್ಯಾಡ್ಮಿಂಟನ್- ಕ್ವಾರ್ಟರ್ ​​​​​​​​​​ಫೈನಲ್​​ ಪ್ರವೇಶಿಸಿದ ಪಿ.ವಿ.ಸಿಂಧು

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಗೆಲುವಿನ ಓಟ ಮುಂದುವರಿಸಿದ್ದಾರೆ. ಇಂದು ನಡೆದ ನಾಕೌಟ್​ ಪಂದ್ಯದಲ್ಲಿ ಡೆನ್ಮಾರ್ಕ್​ನ ಮಿಯಾ ಬ್ಲಿಚ್​ಫೆಲ್ಡ್ಟ್ ಎದುರು ಭರ್ಜರಿ ಗೆಲವು ಸಾಧಿಸಿದ ಸಿಂಧು, ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ. ಸುಮಾರು 40 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಪರಾಕ್ರಮ ಮೆರೆದ ಸಿಂಧು, 21-15, 21-13 ಅಂತರದ ನೇರ ಸೆಟ್​ಗಳಿಂದ ​ಡೆನ್ಮಾರ್ಕ್ ಆಟಗಾರ್ತಿಯನ್ನ ಮಣಿಸಿದರು. ಇದರೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಸಿಂಧು, ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

 

The post ಬ್ಯಾಡ್ಮಿಂಟನ್- ಕ್ವಾರ್ಟರ್ ​​​​​​​​​​ಫೈನಲ್​​ ಪ್ರವೇಶಿಸಿದ ಪಿ.ವಿ.ಸಿಂಧು appeared first on News First Kannada.

Source: newsfirstlive.com

Source link