ಇಲಿ ಬಾಲ ಸುಟ್ಟಂತೆ ಶುಭಾ ವಿಲವಿಲನೆ ಒದ್ದಾಡುತ್ತಾಳೆ: ಮಂಜು

ಗಾರ್ಡನ್ ಏರಿಯಾದ ಸೋಫಾ ಮೇಲೆ ಶುಭಾ ಪುಂಜಾ ಹಾಗೂ ವೈಷ್ಣವಿ ಕುಳಿತುಕೊಂಡಿರುತ್ತಾರೆ. ಇದೇ ವೇಳೆ ಬಿನ್ ಬ್ಯಾಗ್ ಮೇಲೆ ಮಂಜು ಒಬ್ಬೊಂಟಿಯಾಗಿ ಕುಳಿತುಕೊಂಡಿರುತ್ತಾರೆ.

ಆಗ ಮಂಜು ವೈಷ್ಣವಿಗೆ 10 ನಿಮಿಷ ಬಾ ಇಲ್ಲಿ ಎಂದು ಕರೆಯುತ್ತಾರೆ. ಈ ವೇಳೆ ಶುಭಾ, ಹೋಗಬೇಡ ಅವನು ಬೇಕು, ಬೇಕು ಅಂತ ಕರೆಯುತ್ತಿದ್ದಾನೆ. ನೀನು ಅಲ್ಲಿಗೆ ಹೋದರೆ ನಾನು ಅಲ್ಲಿಗೆ ಹೋಗ್ತೀನಿ ಅಂತ ಕರೆಯುತ್ತಿದ್ದಾನೆ. ನೀನು ಅಲ್ಲಿಗೆ ಹೋಗಬೇಡ ವೈಷ್ ಎಂದು ಹೇಳುತ್ತಾರೆ. ಆಗ ಮಂಜು, ಅದಕ್ಕಲ್ಲ ಏನೋ ಒಂದು ಚೂರು ಮಾತನಾಡಬೇಕು ಅದಕ್ಕೆ ಬಾ ಎಂದು ಕರೆದೆ. ತೊಂದರೆ ಇಲ್ಲ ನಿಮಗೆ ಇಷ್ಟ ಇಲ್ಲ ಅಂದರೆ ಬರಬೇಡಿ ಎಂದಾಗ ವೈಷ್ಣವಿ ಮಂಜು ಬಳಿ ಹೋಗುತ್ತಾರೆ.

ನಂತರ ಮಂಜು ವೈಷ್ಣವಿಗೆ ಇನ್ನೂ 10 ನಿಮಿಷದಲ್ಲಿ ಶುಭಾ ಇಲ್ಲಿಗೆ ಬರುತ್ತಾಳೆ ನೋಡುತ್ತಿರು ಎನ್ನುತ್ತಾ, ದಿವ್ಯಾ ಉರುಡುಗರನ್ನು ಕರೆದು ಇಲ್ಲಿ ಕುಳಿತುಕೊಂಡು ನೋಡುತ್ತಿರು ಅವಳು ಇಲ್ಲಿಗೆ ಬರುತ್ತಾಳೆ. ಇಲಿ ಬಾಲ ಸುಟ್ಟಾಗ ಒದ್ದಾಡುತ್ತದೆ ಅಲ್ವಾ ಹಾಗೆ ಒದ್ದಾಡುತ್ತಾಳೆ ಎಂದು ಹೇಳುತ್ತಾರೆ. ಆಗ ಶುಭಾ ಮನಸ್ಸಿನಲ್ಲಿಯೇ ಬೈದುಕೊಂಡು ಮೇಲೆ ಎದ್ದೇಳುತ್ತಾರೆ.

blank

ಆಗ ಮಂಜು ವೈಷ್ಣವಿ ಜೊತೆ, ನೋಡುತ್ತಿರು ವಾಕಿಂಗ್ ಮಾಡುತ್ತೇನೆ ಎಂದು ಶುಭಾ ಬಿಲ್ಡಪ್ ನೀಡುತ್ತಾಳೆ ಎನ್ನುತ್ತಾರೆ. ಅದರಂತೆ ಶುಭಾ ವಾಕಿಂಗ್ ಮಾಡುವ ನೆಪದಲ್ಲಿ ಕೊನೆಗೆ ಮಂಜು ಬಳಿ ಬಂದು, ಸಾಧ್ಯವಿಲ್ಲ. ನನ್ನ ಕೈಯಲ್ಲಿ ಆಗುವುದಿಲ್ಲ. 10 ನಿಮಿಷ ಅಷ್ಟೇ ಎನ್ನುತ್ತಾರೆ. ಶುಭ ಹೊಡೆದ ಈ ಡೈಲಾಗ್ ಕೇಳಿ ವೈಷ್ಣವಿ ಹಾಗೂ ಮಂಜು ಎದ್ದುಬಿದ್ದು ನಗುತ್ತಾರೆ.

blank

ಸ್ವಾಭಿಮಾನಕ್ಕೆ ತಡೆದುಕೊಂಡು ಶುಭಾ ಕುಳಿತುಕೊಂಡಿರುತ್ತಾಳೆ ಅಷ್ಟೇ. ಆಮೇಲೆ ಜೀವ ತಡೆಯುವುದಿಲ್ಲ ಎಂದು ಮಂಜು ಮತ್ತೆ ರೇಗಿಸುತ್ತಾರೆ.

The post ಇಲಿ ಬಾಲ ಸುಟ್ಟಂತೆ ಶುಭಾ ವಿಲವಿಲನೆ ಒದ್ದಾಡುತ್ತಾಳೆ: ಮಂಜು appeared first on Public TV.

Source: publictv.in

Source link