ಚೀನಾ-ತಾಲಿಬಾನ್​​ ರಹಸ್ಯ ಮೀಟಿಂಗ್.. ಕಾಶ್ಮೀರವನ್ನು ಟಾರ್ಗೆಟ್ ಮಾಡ್ತಿದ್ಯಾ ಪಾಕ್?

ಚೀನಾ-ತಾಲಿಬಾನ್​​ ರಹಸ್ಯ ಮೀಟಿಂಗ್.. ಕಾಶ್ಮೀರವನ್ನು ಟಾರ್ಗೆಟ್ ಮಾಡ್ತಿದ್ಯಾ ಪಾಕ್?

ಆಫ್ಘಾನ್​ ನೆಲ ಬೆಂದ ಕಾವಲಿಯಂತ್ತಾಗಿದೆ. ತಾಲಿಬಾನಿಗಳು ಅಮಾಯಕರ ಹೆಣಗಳನ್ನು ಉರುಳಿಸಿ ಅದರ ಮೇಲೆನೇ ಹೆಜ್ಜೆ ಹಾಕ್ತಿದ್ದಾರೆ. ಆಘ್ಘಾನ್ ನೆಲ ಉಗ್ರರಿಗೆ ಸ್ವರ್ಗವಾಗ್ತಿದ್ದಂಗೆ ಪಾಕ್-ಚೀನಾ ಸ್ನೇಹದ ನಗೆ ಬೀರಿ, ಕಾಶ್ಮೀರದ ಮೇಲೆ ಕಣ್ಣಿಟ್ಟಿದ್ದಾರೆ.

ಆಫ್ಘಾನ್​ ನೆಲ ರಕ್ತಮಯವಾಗಿದೆ. ತಾಲಿಬಾನಿಗಳು ಶಸ್ತ್ರಾಸ್ತ್ರ ಕೈಗೆತ್ತಿಕೊಂಡು ನೆತ್ತರ ಹೊಳೆ ಹರಿಸುತ್ತಿದ್ದಾರೆ. ಸದ್ಯ ಆಘ್ಘಾನ್​ನ ಯಾವ ಮೂಲೆಗೆ ಕಣ್ಣಾಯಿಸಿದ್ರೂ ಬರೀ ರಕ್ತ ರಂಚಿತ ವ್ಯಥೆಗಳೇ ಹೃದಯದ ಮೇಲೆ ಕಾದ ಸೀಸ ಸುರಿಯುತ್ತಿವೆ. ವಿಶ್ವದ ದೊಡ್ಡಣನ ಸೇನೆ ಆಫ್ಘಾನ್​ ನೆಲದಿಂದ ಹೆಜ್ಜೆ ಹಿಂದಿಟ್ಟಿದ್ದೇ ತಡ, ಅಫ್ಘಾನಿಸ್ತಾನದ ಗಲ್ಲಿ ಗಲ್ಲಿಯಲ್ಲಿಯೂ ಅವಿತು ಕೂತ್ತಿದ್ದ ತಾಲಿಬಾನ್​ಗಳು ಕೆಂಪಿರುವಂತೆ ಹೊರ ಬಂದಿದ್ದಾರೆ. ನಗರ ಹೊಕ್ಕು ಸರ್ವನಾಶದ ರಣ ಕಹಳೆ ಮೊಳಗಿಸಿ ಬಿಟ್ಟಿದ್ದಾರೆ. ಬಾಂಬು-ಗುಂಡಗಳನ್ನೇ ಸೋಬಾನ ಮಾಡಿಕೊಂಡೋರಿಗೆ ಮುಖದ ಮೇಲಿನ ನಗುವೂ ಅಣು ಬಾಂಬ್​​ನಂತೆ ಕಾಡುತ್ತಿದೆ.. ನಗುವರಳಿಸುತ್ತಿದ್ದವನನ್ನೇ ಈ ರಣ ಹದ್ದುಗಳು ಕುಕ್ಕಿ ಹಾಕಿವೆ.

ಹೌದು.. ಗೂಡಿನಿಂದ ಹೊರ ಬರುವಾಗ ತಾಲಿಬಾನ್​ಗಳು ಸೈಲೆಂಟಾಗಿ ಬಂದಿಲ್ಲ. ಹೊರಗಡೆ ಕಾಲಿಡುತ್ತಿದ್ದಂಗೆ ಬಾಂಬ್​ಗಳ್ನು ಸ್ಫೋಟ ಮಾಡುತ್ತಾ, ಅಮಾಯಕ ಜನರ ಎದೆಗೆ ಬುಲೆಟ್ ನುಗ್ಗಿಸುತ್ತಾ ಬಂದ್ಬಿಟ್ಟಿದ್ದಾರೆ. ತಾವು ಉರುಳಿಸಿರುವ ಅಮಾಯಕರ ಎದೆಯ ಮೇಲೆನೇ ಕಾಲಿಟ್ಟು, ರಕ್ತದ ಕಲೆಗಳ ಮೇಲೆನೆ ಹೆಜ್ಜೆ ಹಾಕುತ್ತಾ ಒಂದೊಂದೆ ಪ್ರದೇಶಗಳನ್ನು ಬಂದು ಸೇರ್ಕೊಂಡು ಬಿಟ್ಟಿದ್ದಾರೆ. ಅಮಾಯಕರ ರುಂಡ ಚೆಂಡಾಡುತ್ತ.. ನಗುವರಿಳಿಸಿ ಹೂವು ಅರಳಿಸುತ್ತಿದ್ದವನ ನೆತ್ತರು ಹರಿಸಿ ಬಿಟ್ಟಿದ್ದಾರೆ.

ನಗುವಿಗೆ ಹೆದರಿದ ರಣ ಹೇಡಿಗಳು
ನಗವರಳಿಸುತ್ತಿದ್ದವನನ್ನೇ ಹತ್ಯೆ ಮಾಡಿದ್ರು
ನಗುವಿಗೆ ಬೆದರಿದ ಉಗ್ರರ ಹೇಡಿ ನಡೆ

ಭಯೋತ್ಪಾದಕರು.. ಉಗ್ರರು.. ತಾಲಿಬಾನಿಗಳು.. ಹೀಗೆ ಜನರನ್ನ ಬೆದರಿಸೋ ಹೆಸರಿರಿಸಿಕೊಂಡಿರೋ ಈ ವಿಷ ಜಂತುಗಳು ಅದೆಂಥ ಹೇಡಿಗಳು ಅಂದ್ರೆ..ಇದನ್ನು ಕೇಳಿದ್ರೆ ಆಕ್ರೋಶದ ನಡುವೆಯೂ ನಿಮಗೆ ನಗು ಬರದೇ ಇರದು.. ಹೇ.. ಹುಶಾರ್.. ನಗಬೇಡಿ.. ನಕ್ಕು ಬಿಟ್ಟರೆ ಈ ಹೇಡಿಗಳು.. ಮಿಸೈಲುಗಳು ಬಿದ್ದಂತೆ ಎದೆ ಒಡೆದುಕೊಂಡು ಬಿಟ್ಟಾರು..!

ಯೆಸ್.. ಅಚ್ಚರಿ ಎನಿಸಿದ್ರೂ ನಿಜ.. ಈ ಉಗ್ರರು ನಗುವಿಗೆ ಅದ್ಯಾವ ಪರಿ ಹೆದರ್ತಾರೆ ಅಂದ್ರೆ.. ಸಂತೋಷ ಪಟ್ಟರೆ ಅದ್ಯಾವ ಬರಿ ನಡುಗ್ತಾರೆ ಅಂದ್ರೆ.. ಯುದ್ಧದ ನಡುವೆಯೂ ಮಾನವೀಯತೆ ಬಿತ್ತುತ್ತಿದ್ದ ಒಬ್ಬ ನಗೆಕಾರನನ್ನು ಚಿತ್ರ ಹಿಂಸೆ ಕೊಟ್ಟು ತಾಲಿಬಾನಿಗಳು ಸಾಯಿಸಿ ಬಿಟ್ಟಿದ್ದಾರೆ..

ಅಮಾಯಕರ ರಕ್ತ ಹರಿಸಿ ಅದರಲ್ಲೇ ವಿಕೃತ ಸಂತೋಷ ಪಡುವ ಈ ತಾಲಿಬಾನಿಗಳು ಪ್ರಜಾ ಪ್ರಭುತ್ವದ ಎದೆಗೆ ಬಂದೂಕುಗಳನ್ನು ಗುರಿ ಇಟ್ಟಿದ್ದಾರೆ. ಆದ್ರೆ ಅಮಾಯಕರ ರಕ್ತ ಹರಿಸುತ್ತಿದ್ದಾರೆ. ದಿಟ್ಟ ಪತ್ರಕರ್ತ ದಾನಿಶ್ ಸಿದ್ದೀಕಿ ಹತ್ಯೆಯ ರಕ್ತದ ಕಲೆಗಳ ಒಣಗಿದ ಕೆಲವೇ ದಿನದಲ್ಲಿ ಇಂದು ಪ್ರಮುಖ ಹಾಸ್ಯ ಕಲಾವಿದ ನಜರ್ ಮೊಹಮ್ಮದ್​ ರನ್ನು ತಾಲಿಬಾನ್​ ಕ್ರಿಮಿಗಳು ಹತ್ಯೆ ಮಾಡಿದ್ದಾರೆ. ಎಷ್ಟೇ ಅಂದ್ರೂ ಭಯ ಪಡೋಬದಲು ಜನ ನಕ್ಕು ಬಿಟ್ಟರೆ.. ಅದು ಈ ಭಯೋತ್ಪಾದಕರ ಸೋಲೇ ಅಲ್ಲವೇ..!

ಆಘ್ಘಾನ್​ನಲ್ಲಿ ತಾಲಿತಾನ್​ಗಳು ಚಿಗುರಿಕೊಳ್ತಿದ್ದಂಗೆ ಪಾಕ್​ನಲ್ಲಿ ಕೂಡ ತಾಲಿಬಾನ್​ಗಳ ಪರ ಒಲವು ಹೆಚ್ಚಾಗತೊಡಗಿದೆ. ಜಗತ್ತಿನ ಯಾವ ಮೂಲೆಯಲ್ಲಾದ್ರೂ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ ಅನ್ನೋದು ಜಸ್ಟ್ ಗೊತ್ತಾದ್ರೆ ಸಾಕು,ಪಾಕಿಸ್ತಾನ ಬೆನ್ನಿಗೆ ನಿಂತು ಬಿಡುತ್ತೆ. ಅಂತದ್​ರಲ್ಲಿ ಕೂಗಳತೆಯ ದೂರದಲ್ಲಿರುವ ಅಘ್ಘಾನ್​ನಲ್ಲಿ ತಾಲಿಬಾನ್​ಗಳ ಕೈ ಮೇಲಾಗುತ್ತಿದೆ ಅನ್ನೋದು ಗೊತ್ತಾದ್ರೆ ಪಾಕ್ ಸುಮ್ಮನೆ ಕೈಕಟ್ಟಿ ಕೂರುತ್ತಾ ಹೇಳಿ..? ಖಂಡಿತ ಇಲ್ಲ. ಆಘ್ಘಾನ್​ಗೆ ತಮ್ಮ ನೆಲದಲ್ಲಿರುವ ಉಗ್ರರರನ್ನ ತಂಡೋಪ ತಂಡವಾಗಿ ಹಾರುವಂತೆ ಮಾಡಿರುವ ಪಾಕ್, ಅಫ್ಘಾನ್ ತಾಲಿಬಾನ್​ಗಳ ಜೊತೆ ಸೇರಿ ರಕ್ತದದೋಕುಳಿ ಹರಿಸುತ್ತಿದೆ. ಇತ್ತ ಪಾಕ್​-ಚೀನಾ​ ಸರ್ಕಾರಗಳು ಜಂಟಿಯಾಗಿ ಮೀಟಿಂಗ್ ಮೇಲೆ ನಡೆಸುತ್ತಿದೆ.

ಆಫ್ಗಾನ್​ಗೆ ಅಮೆರಿಕ ಗುಡ್ ಬೈ-ಪಾಕ್ ಚೀನಾ ಹಾಯ್ ಹಾಯ್
ಪಾಕ್​ಗೆ ಹೆಗಲು ಕೊಡ್ತಿರುವ ಚೀನಾದ ಅಸಲಿ ಉದ್ದೇಶ ಏನು?
ಆಫ್ಘಾನ್​ ನೆಲದ ಮೇಲೆ ಡ್ರ್ಯಾಗನ್ ದೇಶದ ಕಣ್ಣು ಬಿದ್ದಿದ್ಯಾ?

ಕರುಳಿಗೆ ನಾಚಿಗೆ ಇಲ್ಲ,ಕಾಲಿಗೆ ಹೇಸಿಗೆ ಇಲ್ಲ ಎಂಬಂತೆ ಇದೀಗ ಕಳ್ಳರು ಸುಳ್ಳರು ಒಂದಾಗಿ ಬಿಟ್ಟಿದ್ದಾರೆ. ಒಂದು ಕಡೆ ಕುತಂತ್ರಿ ಚೀನಾ ಮತ್ತೊಂದು ಕಡೆ ನರಿ ಬುದ್ದಿಯ ಪಾಕಿಸ್ತಾನ. ತಾನು ಉದ್ಧಾರ ಆಗದಿದ್ರೂ ಪರ್ವಾಗಿಲ್ಲ, ಆದ್ರೆ ಭಾರತ ಮಾತ್ರ ಉದ್ಧಾರ ಆಗ್ಬಾರ್ದೆಂದು , ಸದಾ ನೆರೆ ರಾಷ್ಟ್ರಗಳೊಂದಿಗೆ ಒಂದಿಲ್ಲ ಒಂದು ರೀತಿಯಲ್ಲಿ ಸಂಘರ್ಷವನ್ನೇ ನೆಚ್ಚಿಕೊಂಡಿರುವ ಪಾಕಿಸ್ತಾನ, ಚೀನಾದ ಜೊತೆ ಸೇರಿ ಹೊಸ ಗೇಮ್ ಆಡಲು ಶುರು ಮಾಡಿದೆ. ಶತ್ರುವಿನ ಶತ್ರು ಮಿತ್ರ ಎಂಬ ಲೆಕ್ಕಾಚಾರದಲ್ಲಿರುವ ಪಾಕಿಸ್ತಾನ,ಯುಗ ಯುಗಗಳೇ ಸಾಗಲಿ ನಮ್ಮ ಚೀನಾ ಸ್ನೇಹ ಶಾಶ್ವತ ಅಂತಿದೆ.

blank

ಆಫ್ಘಾನ್​ನಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಯನ್ನ ಮುಂದಿಟ್ಟುಕೊಂಡು ಮೀಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿದೆ. ಖಾಲಿ ಜಾಗಕ್ಕೆ ಬೇಲಿ ಹಾಕಿ ಅದನ್ನ ತನ್ನದೆಂದು ವಾಧಿಸುವ ಚೀನಾದ ವಾಡಿಕೆ. ಅಫ್ಘಾನ್ ನೆಲದಿಂದ ದೊಡ್ಡಣ್ಣನ ಪಡೆ ಮರಳಿ ತವರಿಗೆ ಸೇರ್ತಿದ್ದಂಗೆ ಖಾಲಿಯಾಗಿರುವ ಆಫ್ಘಾನ್​ ನೆಲದ ಮೇಲೆ ಡ್ರ್ಯಾಗನ್ ದೇಶದ ಕಣ್ಣು ಬಿದ್ದಿದೆ. ಕಡ್ಡಿ ತೋರಿಸಿ ಗುಡ್ಡ ಬಾಚ್ಕೊಳ್ಳು ಜಾಯಾಮಾನದ ಚೀನಾ,ಸಹಾಯದ ಸೋಗಿನಲ್ಲಿ ಅಫ್ಘಾನ್​ ನೆಲತನ್ನ ತನ್ನ ಒಡಲಿಗೆ ಹಾಕಿಕೊಳ್ಳಲು ಪ್ಲಾನ್ ರೂಪಿಸಿದೆ. ಅಷ್ಟೇ ಅಲ್ಲ, ಪಾಕ್ ಚೀನಾದ ಜೊತೆ ಹೆಗಲು ಕೊಟ್ಟಿದ್ದಕ್ಕೆ ಮತ್ತೊಂದು ಕಾರಣ ಇದೆ. ಅದು ಕಾಶ್ಮೀರ ವಿಷ್ಯಾ.

ಚೀನಾ-ತಾಲಿಬಾನ್​​ ರಹಸ್ಯ ಮೀಟಿಂಗ್
ಕಾಶ್ಮೀರಕ್ಕೆ ಎಂಟ್ರಿ ಕೊಡುವುದೇ ಪ್ಲಾನಿಂಗ್?
ಕಾಶ್ಮೀರವನ್ನು ಟಾರ್ಗೆಟ್ ಮಾಡ್ತಿದ್ಯಾ ಪಾಕ್?
ಟಿಬೆಟ್ ಸ್ವಾಯತ್ತ ಪ್ರದೇಶಕ್ಕೆ ಜಿಂಗ್ ಪಿಂಗ್ ಭೇಟಿ?

ಕಳೆದ ಎರಡು ತಿಂಗಳಿನಿಂದ ಆಫ್ಘಾನಿಸ್ತಾನ್ ಭದ್ರತಾ ಸಿಬ್ಬಂದಿ ಮತ್ತು ತಾಲಿಬಾನ್ ಉಗ್ರರ ನಡುವೆ ಸಮರ ತಾರಕ್ಕೇರುತ್ತಿದ್ರೆ, ಇತ್ತ ಚೀನಾ ಪಾಕಿಸ್ತಾನ ತೆರೆಮರೆಯಲ್ಲಿ ಕೂತು ಗೇಮ್ ಪ್ಲಾನ್ ಮಾಡ್ತಿದೆ. ಗೇಮ್ ಪ್ಲಾನ್ ಆಡುತ್ತಿರುವ ಚೀನಾ-ಪಾಕಿಸ್ತಾನದ ಟಾರ್ಗೆಟ್ ಕಾಶ್ಮೀರವೇ. ಭಾರತ ಸೇನೆಯ ಹದ್ದಿನ ಕಣ್ಣನ್ನು ತಪ್ಪಿಸಿ ಹೊಳ ಹೊಕ್ಕೋದು ಉಗ್ರರಿಗೆ ಸಾಧ್ಯವಿಲ್ಲ ಅನ್ನೋದು ಉಭಯ ದೇಶಗಳಿಗೂ ಗೊತ್ತಿದೆ. ಅದ್ಕೆಂದೆ ಈ ಕಳ್ಳರು ಮತ್ತು ಸುಳ್ಳರು ಸೇರಿ ಮತ್ತೆ ಕಾಶ್ಮೀರದಲ್ಲಿ ರಕ್ತದ ಕೋಡಿ ಹರಿಸಲು ಹೊಸ ದಾರಿಕಂಡುಕೊಳ್ಳುವ ನಿಟ್ಟಿನಿಂದ ಮೀಟಿಂಗ್ ಮೇಲೆ ಮೀಟಿಂಗ್ ಮಾಡ್ತಿದೆ. ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ತಾಲಿಬಾನ್​​ ಡೆಲಿಗೇಶನ್​ ಅನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಚೀನಾ, ಪಾಕಿಸ್ತಾನದ ಆಪ್ತರಾಗ್ತಿರುವುದು,ದಕ್ಷಿಣ ಏಷ್ಯಾದಲ್ಲಿ ಕಳವಳಕ್ಕೂ ಕಾರಣವಾಗಿದೆ. ದೇಶದ ಭದ್ರತೆ ನೆರೆಯ ದೇಶದಲ್ಲಾಗುತ್ತಿರವ ವಿದ್ಯಮಾನಗಳನ್ನೂ ಆಧರಿಸಿದೆ. ನೆರೆಯ ದೇಶದಲ್ಲಿ ಏನೇ ಬದಲಾವಣೆ ಆದರೂ ಅದು ದೇಶದ ಬಾಹ್ಯ-ಆಂತರಿಕ ಭದ್ರತೆಯ ಮೇಲೂ ಪರಿಣಾಮವಾಗಬಹುದು. ಹೀಗಾಗಿ ರಾಷ್ಟ್ರೀಯ ಭದ್ರತೆಯ ವಿಚಾರ ಬಂದಾಗ ಚೀನಾ-ಪಾಕ್ ನಡೆ, ಅಫ್ಘಾನಿಸ್ತಾನದಲ್ಲಾದ ಬೆಳವಣಿಗೆ ಬಹಳ ಮಹತ್ವ ಪಡೆದುಕೊಂಡಿದೆ.

ಈ ಎಲ್ಲಾ ಬೆಳವಣಿಗೆಗೆಳ ನಡುವೆ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಟಿಬೆಟ್ ಸ್ವಾಯತ್ತ ಪ್ರದೇಶಕ್ಕೆ ಟಿಎಆರ್ ಗೆ ಭೇಟಿ ನೀಡಿದ್ದಾರೆ ಎಂದು ಕೆಲ ಮಾಧ್ಯಗಳ ವರದಿ ಮಾಡಿದೆ.ಅರುಣಾಚಲ ಪ್ರದೇಶದ ಸಿನೋ-ಇಂಡಿಯಾ ಗಡಿಯ ಸಮೀಪವಿರುವ ನೈಂಗ್ಚಿ ಪ್ರದೇಶಕ್ಕೆ ಚೀನಾ ಅಧ್ಯಕ್ಷರು ಭೇಟಿ ಕೊಟ್ಟಿದರೆನ್ನಲಾಗಿದ್ದು, ಈ ಭೇಟಿಯು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಭಾರತಕ್ಕೆ ಅಮೆರಿಕದ ಅಭಯ, ಕುಂತಂತ್ರಿಗಳಿಗೆ ಭಯ
ಭಾರತಕ್ಕೆ ಬಂದ ಅಮೆರಿಕದ ವಿದೇಶಾಂಗ ಸಚಿವ
ಕುತೂಹಲ ಮೂಡಿಸಿರುವ ಆ್ಯಂಟನಿ ಬ್ಲಿಂಕೆನ್ ಭೇಟಿ

ಒಂದು ಕಡೆ ಚೀನಾ-ಪಾಕ್ ಸಭೆ ನಡೆಸುತ್ತಿದ್ರೆ, ಮತ್ತೊಂದು ಕಡೆಯಲ್ಲಿ ಭಾರತ ಹಾಗು ಅಮೆರಿಕದ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಬಲಗೊಳ್ಳುತ್ತಿದೆ. ಅಫ್ಘಾನ್​ನಲ್ಲಿ ತಾಲಿಬಾನ್​ಗಳ ಕೈ ಮೇಲಾಗುತ್ತಿದ್ದಂಗೆ ಅಮೆರಿಕದ ವಿದೇಶಾಂಗ ಸಚಿವರ ಭಾರತ ಪ್ರವಾಸ ಕೈಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಚೀನಾ-ಪಾಕಿಸ್ತಾನದ ನಡುವೆ ನಡೆಯುತ್ತಿರುವ ಗುಪ್ ಚುಪ್ ಮೀಟಿಂಗ್ ವಿಷ್ಯಾ ಕೂಡ ಅಮೆರಿಕದ ವಿದೇಶಾಂಗ ಸಚಿವರ ಭೇಟಿ ವೇಳೆ ಪ್ರಸ್ತಾಪವಾಗಲಿದೆ.

ಆಫ್ಘಾನ್​ನಲ್ಲಿ ಮುಂದಿನ 6 ತಿಂಗಳಲ್ಲಿ ತಾಲಿಬಾನ್ ಅಧಿಕಾರ
22 ಸಾವಿರ ಕುಟುಂಬಗಗಳು ಮನೆ ಬಿಟ್ಟು ಓಡಿ ಹೋದ್ರಾ?
ಅಮೆರಿಕ ಗುಪ್ತಚರ ಇಲಾಖೆಯಿಂದ ಅಚ್ಚರಿಯ ಹೇಳಿಕೆ..!

ತಾಲಿಬಾನ್ ಉಗ್ರರು ಒಂದೊಂದೆ ಪ್ರದೇಶಗಳ ಮೇಲೆ ಅಧಿಪತ್ಯ ಸ್ಥಾಪಿಸುತ್ತಿದ್ದು, ಒಂದೊಂದೆ ರಾಜ್ಯಗಳು ತಾಲಿಬಾನಿಗಳ ವಶವಾಗುತ್ತಿವೆ. ಒಂದು ಕಾಲದ ಸ್ವರ್ಗದಂತಹ ಜಾಗ ನರಕವಾಗಲು ಅಂದು ಯಾರು ಕಾರಣರಾಗಿದ್ರೋ ಮತ್ತೆ ಅದೇ ತಾಲಿಬಾನ್​ಗಳು ಅಘ್ನಾನ್ ನೆಲದಲ್ಲಿ ಶಸ್ತ್ರಾಸ್ತ್ರ ಕೈಗೊಂಡು ನೆತ್ತರು ಹರಿಸುತ್ತಿದ್ದಾರೆ. ಈ ನಡುವೆ 7200 ಪಾಕ್ ಭಯೋತ್ಪಾದಕರು ತಾಲಿಬಾನ್​ಗೆ ಸೇರ್ಪಡೆ ಗೊಂಡಿರುವದಿಂರ ಪಾಪಿಗಳಿಗೆ ಆನೆ ಬಲ ಬಂದತ್ತಾಗಿದೆ.

ತಾಲಿಬಾನ್​ ಹುಳಗಳು ಒಂದೊಂದೆ ಪ್ರದೇಶಗಳಲ್ಲಿ ಪೈಶಾಚಿಕ ಕೃತ್ಯ ಎಸಗುತ್ತಿದ್ದಾರೆ. ತಾಲಿಬಾನ್​ಗಳ ಕೇಂದ್ರ ಸ್ಥಾನ ಕಂದಹಾರ್​ನಿಂದ 22 ಸಾವಿರ ಕುಟುಂಬಗಗಳು ಮನೆಯನ್ನು ಬಿಟ್ಟು ಓಡಿ ಹೋಗಿದ್ದಾರೆ ಅನ್ನೋ ಸ್ಫೋಟಕ ವಿಷ್ಯಾ ಕೂಡ ಹೊರಬಿದ್ದಿದೆ. ತಾಲಿಬಾನ್​ ಉಪಟಳ ತಡೆಯಲಾಗದೆ ಓಡಿ ಹೋದ 22 ಸಾವಿರ ಕುಟುಂಬಗಳು ಎಲ್ಲಿ ಹೋದವು ಎಂಬ ಪ್ರಶ್ನೆಗೆ ಉತ್ತರ ನಿಗೂಢವಾಗಿಯೇ ಉಳಿದಿದೆ. ಕೆಲವು ಮೂಲಗಳ ಪ್ರಕಾರ ಓಡಿ ಹೋದ 22 ಸಾವಿರ ಕುಟುಂಬಗಳ ಪೈಕಿ ಕೆಲವರು ತಾಲಿಬಾನಿಗಳ ಗುಂಡಿಗೆ ಬಲಿಯಾದ್ರೆ,ಇನ್ನೂ ಕೆಲವರು ಭಯದಿಂದ ತಾಲಿಬಾನ್ ಸೇರ್ಕೊಂಡಿದ್ದಾರೆ ಎನ್ನಲಾಗಿದೆ. ತಾಲಿಬಾನಿಗಳ ಕೇಂದ್ರ ಸ್ಥಾನ ಕಂದಹಾರ್​​ನಲ್ಲಿ ತಾಲಿಬಾನ್ ಹುಳಗಳ ಅಟ್ಟಹಾಸ ಮುಂದುವರೆದಿದ್ದು, ಎರಡೇ ವಾರದ ಅಂತರದಲ್ಲಿ ಪತ್ರರ್ಕತರು ಸೇರಿದಂತೆ 33 ಮಂದಿ ತಾಲಿಬಾನ್​ಗಳ ಬಲಿಯಾಗಿದ್ದಾರೆ.

ಆಫ್ಘಾನ್​ನಲ್ಲಿ ತಾಲಿಬಾನ್​ ಪ್ರಾಬಲ್ಯ ಹೆಚ್ಚುತ್ತಿದ್ದು, ತಾಲಿಬಾನ್ ಉಗ್ರ ಸಂಘಟನೆಯು ಮುಂದಿನ ಆರು ತಿಂಗಳಿನಲ್ಲಿ ಮತ್ತೆ ಅಫ್ಘಾನಿಸ್ತಾನದ ಅಧಿಕಾರವನ್ನು ಮರಳಿ ವಶಕ್ಕೆ ಪಡೆದುಕೊಳ್ಳಲಿದೆ, ಎಂದು ಅಮೆರಿಕಾದ ಗುಪ್ತಚರ ಇಲಾಖೆಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಗುಪ್ತಚರ ಇಲಾಖೆಯ ಹೇಳಿಕೆ ಕಳವಳಕ್ಕೂ ಕೂಡ ಕಾರಣವಾಗಿದೆ.

24 ಗಂಟೆಯಲ್ಲಿ 262 ತಾಲಿಬಾನ್​ಗಳ ಹತ್ಯೆ
ಒಂದು ಕಡೆ ಉಗ್ರರ ಅಟ್ಟಹಾಸ ಮುಂದುವರೆದಂತೆ ,ಸರ್ಕಾರ ಕೂಡ ತಾಲಿಬಾನ್​ಗಳ ಮಟ್ಟಹಾಕಲು ಅಖಾಢಕ್ಕೆ ಧುಮುಕಿದೆ. ಕಳೆದ 24 ಗಂಟೆಗಳಲ್ಲಿ ಆಘ್ಘಾನಿಸ್ತಾದಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ 262 ತಾಲಿಬಾನ್ ಸಂಘಟನೆಯ ಉಗ್ರರನ್ನು ಹೊಡೆದುರುಳಿಸಲಾಗಿದೆ. ಭದ್ರಾತ ಪಡೆ ಸಿಬ್ಬಂದಿ ನಡೆಸಿರುವ ಕಾರ್ಯಾಚರಣೆಯಲ್ಲಿ 176 ತಾಲಿಬಾನ್ ಉಗ್ರರು ಗಾಯಗೊಂಡಿದ್ದು, 21 ಐಟಿಡಿ ಸ್ಪೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ .ಅಲ್ಲದೇ ನಗರ ಪ್ರದೇಶದಲ್ಲಿ ತಾಲಿಬಾನ್ ಉಗ್ರರು ನುಸುಳದಂತೆ ಮುನ್ನೆಚ್ಚರಿಕೆ ವಹಿಸಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಹೀಗೆ ಆಫ್ಘಾನ್ ನೆಲ ಬೂದಿ ಬೆಂದ ಬಾಣಲೆಯಂತ್ತಾಗಿದ್ದು, ಇದ್ರರ ಮೇಲೆ ತಮ್ಮ ಬೇಳೆ ಬೇಯಿಸಲು ಪಾಕಿಸ್ತಾನ ಚೀನಾ ರೆಡಿಯಾಗಿದೆ. ಈ ಮೂಲಕ ಕಾಶ್ಮೀರಕ್ಕೂ ಮೇಲೂ ಕಣ್ಣು ಹಾಕಿದ್ದು, ಪೈಶಾಚಿಕ ಕೃತ್ಯ ನಡೆಸಲು ಪ್ಲಾನ್ ರೂಪಿಸುತ್ತಿದೆ. ತಾಲಿಬಾನಿಗಳೆಂಬ ಕ್ರೌರ್ಯ ತುಂಬಿರುವ ವಿಷಜಂತುಗಳ ಸರ್ವನಾಶ ಅದ್ಯಾಯಾವಾಗ ಆಗುತ್ತೋ ಕಾದು ನೋಡಬೇಕಾಗಿದೆ. ಆಫ್ಘಾನಿಸ್ತಾನ ಆರ್ಥಿಕವಾಗಿ ಹಿಂದುಳಿದ ದೇಶ. ಅಲ್ಲಿನ ಸರ್ಕಾರಕ್ಕೂ ಉಗ್ರರನ್ನು ನಿಯಂತ್ರಿಸೋದು ಕಷ್ಟವಾಗಬಹುದು. ಇದನ್ನೇ ಬಂಡವಾಳವನ್ನಾಗಿಸಿರುವ ನರಿ ಬುದ್ಧಿಯ ಚೀನಾ ಸಹಾಯದ ಸೋಗಿನಲ್ಲಿ ಆಫ್ಘಾನ್ ನೆಲವನ್ನು ತನ್ನ ವಶಕ್ಕೆ ಪಡೆಯುವ ಸಿದ್ಧತೆಯಲ್ಲಿದೆ. ಭಾರತದ ಸಮಸ್ಯೆ ಸೃಷ್ಟಿಮಾಡ್ಬೇಕೆಂದೆ ಹೊರಟಿರುವ ಪಾಕಿಸ್ತಾನ ಚೀನಾದ ಎದುರು ನಡುಬಗ್ಗಿಸಿ ಕುಳಿತಿದೆ. ಮುಂದೇ ಏನೆಲ್ಲಾ ಡೆವಲಪ್​ ಮೆಂಟ್ಸ್ ನಡೆಯುತ್ತೋ ಕಾದು ನೋಡಬೇಕಾಗಿದೆ.

The post ಚೀನಾ-ತಾಲಿಬಾನ್​​ ರಹಸ್ಯ ಮೀಟಿಂಗ್.. ಕಾಶ್ಮೀರವನ್ನು ಟಾರ್ಗೆಟ್ ಮಾಡ್ತಿದ್ಯಾ ಪಾಕ್? appeared first on News First Kannada.

Source: newsfirstlive.com

Source link