ಸಿಎಂ ಬೊಮ್ಮಾಯಿ ನಿವಾಸದ ಎದುರೇ ಬೈಕ್ ವ್ಹೀಲಿಂಗ್​ ಮಾಡ್ತಿದ್ದ ಪುಂಡರ ಬಂಧನ

ಸಿಎಂ ಬೊಮ್ಮಾಯಿ ನಿವಾಸದ ಎದುರೇ ಬೈಕ್ ವ್ಹೀಲಿಂಗ್​ ಮಾಡ್ತಿದ್ದ ಪುಂಡರ ಬಂಧನ

ಬೆಂಗಳೂರು: ನೂತನ ಸಿಎಂ ಬಸವರಾಜ್​ ಬೊಮ್ಮಾಯಿಯವರ ಆರ್. ಟಿ ನಗರದ ಮನೆ ಸುತ್ತಮುತ್ತ ಬೈಕ್​ ವ್ಹೀಲಿಂಗ್​ ಮಾಡುವ ಪುಂಡರ ಹಾವಳಿ ಹೆಚ್ಚಾಗಿದೆ. ಸಿಎಂ ಮನೆ ಮುಂದೆ ವ್ಹೀಲಿಂಗ್​ ಮಾಡುತ್ತಿದ್ದ ಪುಂಡರನ್ನು ಪೊಲೀಸರು ಬಂಧಿಸಿದ್ದು ಬೈಕ್​ಗಳನ್ನ ಸೀಜ್​ ಮಾಡಿದ್ದಾರೆ.

blank

ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಮನೆ ಸುತ್ತಮುತ್ತ ಪೊಲೀಸ್​ರ ದಂಡೆ ಇದ್ದರು ಕ್ಯಾರೆ ಎನ್ನದ ಪುಂಡರ ಗುಂಪು ವ್ಹೀಲಿಂಗ್ ಮಾಡುತ್ತಿದ್ದರು. ಡಿಯೋ, ಌಕ್ಟಿವಾ ಬೈಕ್ ಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರ ಗ್ಯಾಂಗ್​ನ್ನು ಪೊಲೀಸರು ತಡೆಯಲು ಹೋದಾಗ ಪೊಲೀಸರ ಮೇಲೆಯೆ ಬೈಕ್​ ಹತ್ತಿಸೋ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಕೊನೆಗೆ ಸಿಎಂ ಮನೆ ಭದ್ರತಾ ಸಿಬ್ಬಂದಿಗಳು ಪುಂಡರನ್ನು ಹಿಡಿದು ಆರ್​.ಟಿ. ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಮೂವರನ್ನು ವಶಕ್ಕೆ ಪಡೆದಿರೋ ಪೊಲೀಸರು ಎರಡು ಬೈಕ್​ಗಳನ್ನು ವಶಕ್ಕೆ ಪಡೆದಿದ್ದಾರೆ.

The post ಸಿಎಂ ಬೊಮ್ಮಾಯಿ ನಿವಾಸದ ಎದುರೇ ಬೈಕ್ ವ್ಹೀಲಿಂಗ್​ ಮಾಡ್ತಿದ್ದ ಪುಂಡರ ಬಂಧನ appeared first on News First Kannada.

Source: newsfirstlive.com

Source link