ಶಮಂತ್ ಮುಂದೆ ಬೆಟ್ಟಿಂಗ್‍ನಲ್ಲಿ ಸೋತ ಪ್ರಶಾಂತ್

ಬಿಗ್‍ಬಾಸ್ ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ದೊಡ್ಮನೆಯಲ್ಲಿ ಹೊಸ ಹೊಸ ತಿರುವುಗಳು ಬರುತ್ತಿದೆ. ಈ ಮಧ್ಯೆ ಬ್ರೋ ಗೌಡ ಶಮಂತ್ ಮತ್ತು ಪ್ರಶಾಂತ್ ಸಂಬರಗಿ ಬೆಟ್ಟಿಂಗ್ ಕಟ್ಟಿಕೊಂಡು ಆಟ ಆಡಿದ್ದಾರೆ.

ಪ್ರಶಾಂತ್ ಮತ್ತು ಶಮಂತ್ ಇಬ್ಬರು ಒಟ್ಟಿಗೆ ಕಿಚನ್ ಏರಿಯಾದಲ್ಲಿ ಕುಳಿತು ಕಾಫಿ ಕುಡಿಯುತ್ತಿರುತ್ತಾರೆ. ಈ ವೇಳೆ ಶಮಂತ್ ಚಾಕೋಲೇಟ್ ಸಿರಪ್ ಇದ್ದಿದ್ರೆ ಕಾಫಿ ತರ ಮಾಡಿಕೊಂಡು ಕುಡಿಯಬಹುದಿತ್ತು, ಬಿಗ್‍ಬಾಸ್ ಮನೆಯ ಆರಂಭದಲ್ಲಿ ನಾವು ಅದನ್ನು ಚಪಾತಿಗೆ ಹಾಕಿಕೊಂಡು ತಿನ್ನುತ್ತಿದ್ದೇವು ಎಂದು ಹೇಳುತ್ತಾರೆ. ಆಗ ಪ್ರಶಾಂತ್ ದೊಡ್ಮನೆಯಲ್ಲಿ ಎಂದಿಗೂ ಚಾಕೋಲೇಟ್ ಸಿರಪ್ ಬಂದಿರಲಿಲ್ಲ ಎಂದು ವಾದ ಮಾಡಲು ಪ್ರಾರಂಭಿಸುತ್ತಾರೆ.

ಆಗ ಶಮಂತ್ ಬಿಗ್‍ಬಾಸ್ ಮನೆಯಲ್ಲಿ ಮೊದಲು ಚಾಕೋಲೇಟ್ ಸಿರಪ್ ಇತ್ತಾ ಇಲ್ವಾ ಎಂದು ಮನೆಯಲ್ಲಿ ಯಾರನ್ನಾದರೂ ಕೇಳೋಣಾ ಎನ್ನುತ್ತಾರೆ. ಇದಕ್ಕೆ ಪ್ರಶಾಂತ್ ಒಂದು ವೇಳೆ ಚಾಕೋಲೇಟ್ ಸಿರಪ್ ಇರಲಿಲ್ಲ ಎಂದು ಹೇಳಿದರೆ 48 ಗಂಟೆಗಳ ಕಾಲ ನೀನು ದಿವ್ಯಾ ಸುರೇಶ್‍ರನ್ನು ಮಾತನಾಡಿಸಬಾರದು ಎಂದು ಪ್ರಶಾಂತ್ ಶಮಂತ್‍ಗೆ ಹೇಳುತ್ತಾರೆ. ಆಗ ಶಮಂತ್ ಒಕೆ ಮಾತನಾಡುವುದಿಲ್ಲ. ಆಕಸ್ಮಾತ್ ಚಾಕೋಲೇಟ್ ಸಿರಪ್ ಇತ್ತು ಎಂದರೆ ನೀವು ದಿವ್ಯಾ ಸುರೇಶ್ ಜೊತೆ 48 ಗಂಟೆಗಳ ಕಾಲ ಮಾತನಾಡುವಂತಿಲ್ಲ ಹಾಗೂ ಯಾವುದಕ್ಕೂ ರಿಯಾಕ್ಟ್ ಕೂಡ ಮಾಡುವಂತಿಲ್ಲ ಎಂದು ಇಬ್ಬರು ಹೇಳಿ ಬೆಟ್ಟಿಂಗ್ ಕಟ್ಟಿಕೊಳ್ಳುತ್ತಾರೆ.

blank

ಇಬ್ಬರ ಪೈಕಿ ಯಾರ ವಾದ ಸರಿ ಎಂದು ತಿಳಿಯಲು ಗಾರ್ಡನ್ ಏರಿಯಾದಲ್ಲಿದ್ದ ಮನೆಯ ಸದಸ್ಯರಿಗೆ ಬಿಗ್‍ಬಾಸ್ ಕಾರ್ಯಕ್ರಮದ ಆರಂಭದಲ್ಲಿ ಚಾಕೋಲೇಟ್ ಸಿರಪ್ ಬಂದಿತ್ತಾ ಎಂದು ಕೇಳಿದಾಗ, ಮೊದಲಿಗೆ ದಿವ್ಯಾ ಉರುಡುಗ, ಅರವಿಂದ್ ಬಂದಿಲ್ಲ ಎನ್ನುತ್ತಾರೆ. ಆದರೆ ನಂತರ ಉಳಿದ ಸದಸ್ಯರು ಹೌದು ಬಂದಿತ್ತು ಎಂದು ಹೇಳುತ್ತಾರೆ. ಅದಕ್ಕೆ ಶಮಂತ್ ಬಿಗ್‍ಬಾಸ್ ಕಣ್ಮಣಿಗೆ ಪ್ರಶಾಂತ್ ಅವರು ಚಾಕೋಲೇಟ್ ಸಿರಪ್ ಬಂದಿಲ್ಲ ಎಂದಿದ್ದರು. ಬಂದಿದೆ ಎಂಬುದು ನನ್ನ ವಾದವಾಗಿತ್ತು. ಅದಕ್ಕೆ ಮನೆಯವರ ಸಹಮತದ ಮೇರೆಗೆ ನಾನು ಗೆದ್ದಿದ್ದೇನೆ. ಇನ್ನೂ ಎರಡು ದಿನ ದಿವ್ಯಾ ಸುರೇಶ್ ಬಳಿ ಪ್ರಶಾಂತ್ ಮಾತನಾಡುವಂತಿಲ್ಲ ಎಂದು ಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ:ಎಷ್ಟು ದಿನ ಅಂತ ನಾನು ಮುಖವಾಡ ಹಾಕಿಕೊಳ್ಳಲಿ: ಅರವಿಂದ್

The post ಶಮಂತ್ ಮುಂದೆ ಬೆಟ್ಟಿಂಗ್‍ನಲ್ಲಿ ಸೋತ ಪ್ರಶಾಂತ್ appeared first on Public TV.

Source: publictv.in

Source link