ಹಾಕಿ- ಅರ್ಜೆಂಟೀನಾ ವಿರುದ್ಧ ಭರ್ಜರಿ ಗೆಲುವು- ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಭಾರತ

ಹಾಕಿ- ಅರ್ಜೆಂಟೀನಾ ವಿರುದ್ಧ ಭರ್ಜರಿ ಗೆಲುವು- ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಭಾರತ

ಹಾಲಿ ಒಲಿಂಪಿಕ್‌ ಚಾಂಪಿಯನ್‌ ಅರ್ಜೆಂಟೀನಾ ವಿರುದ್ಧ ಭಾರತ ಪುರುಷರ ಹಾಕಿ ತಂಡ, ಗೆದ್ದು ಬೀಗಿದೆ. ಗ್ರೂಪ್​​ ‘ಎ’ 4ನೇ ಪಂದ್ಯದಲ್ಲಿ ಭಾರತ 3-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ, ಕ್ವಾರ್ಟರ್‌ ಫೈನಲ್‌ ಸ್ಥಾನ ಖಚಿತಪಡಿಸಿಕೊಂಡಿದೆ. ಇಂದು ಅರ್ಜೆಂಟೀನಾ ವಿರುದ್ಧ ಸೆಣಸಾಡಿದ ಭಾರತ ಪುರುಷರ ಹಾಕಿ ತಂಡ, ಮೊದಲಾರ್ಧದಲ್ಲಿ ಗೋಲು ದಾಖಲಿಸಲು ವಿಫಲವಾಯ್ತು. ಆದ್ರೆ ದ್ವೀತಿಯಾರ್ಧದ 43ನೇ ನಿಮಿಷದಲ್ಲಿ ವರುಣ್ ಕುಮಾರ್ ಗೋಲು ಬಾರಿಸೋ ಮೂಲಕ, ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಈ ನಡುವೆ 48ನೇ ನಿಮಿಷದಲ್ಲಿ ಅರ್ಜೆಂಟೇನಾ ಪರ ಮೈಕೋ ಕೆಸೆಲಾ ಗೋಲು ಬಾರಿಸಿ ಸಮಬಲ ಸಾಧಿಸಿದರು.

ಆದ್ರೆ ಕೊನೆಯ 58ನೇ ನಿಮಿಷದಲ್ಲಿ ವಿವೇಕ್ ಸಾಗರ್ ಪ್ರಸಾದ್, 89ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಗೋಲು ಬಾರಿಸುವುದರೊಂದಿಗೆ ಭಾರತಕ್ಕೆ ಮುನ್ನಡೆ ಒದಗಿಸಿ ಗೆಲುವು ಖಾತ್ರಿಗೊಳಿಸಿದರು. ಆ ಮೂಲಕ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವನ್ನ 3-1 ಅಂತರದ ಗೋಲುಗಳಿಂದ ಮಣಿಸಿತು. ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡು, ಕ್ವಾರ್ಟರ್​​ ಫೈನಲ್‌ ಪ್ರವೇಶಿಸಿತು. ಗ್ರೂಪ್ ಸ್ಟೇಜ್​ನ ಅಂತಿಮ ಪಂದ್ಯದಲ್ಲಿ ಭಾರತ, ಜಪಾನ್ ತಂಡವನ್ನ ಎದುರಿಸಲಿದೆ. ಈಗಾಗಲೇ ಗ್ರೂಪ್​ ಹಂತದಲ್ಲಿ ಮೂರು ಪಂದ್ಯಗಳನ್ನ ಗೆದ್ದಿರುವ ಭಾರತ ತಂಡ, ಕ್ವಾರ್ಟರ್​ ಫೈನಲ್ ಖಾಯಂ ಆಗಿಸಿಕೊಂಡಿದೆ.

The post ಹಾಕಿ- ಅರ್ಜೆಂಟೀನಾ ವಿರುದ್ಧ ಭರ್ಜರಿ ಗೆಲುವು- ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಭಾರತ appeared first on News First Kannada.

Source: newsfirstlive.com

Source link