ಸಂಜಯ್ ದತ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್; ಅಧೀರನ ರಗಡ್​​ ಲುಕ್​​ ರಿಲೀಸ್​ ಕೆಜಿಎಫ್-2 ಚಿತ್ರ ತಂಡ​

ಸಂಜಯ್ ದತ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್; ಅಧೀರನ ರಗಡ್​​ ಲುಕ್​​ ರಿಲೀಸ್​ ಕೆಜಿಎಫ್-2 ಚಿತ್ರ ತಂಡ​

ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿರುವ ಕೆಜಿಎಫ್-2 ಚಿತ್ರ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಇಂದು ಜುಲೈ 29 ಸಂಜಯ್ ದತ್ ಹುಟ್ಟುಹಬ್ಬದಂದು ಅವರ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್​​​ನಲ್ಲಿ ಸಂಜಯ್​​ ದತ್​​​ ಕತ್ತಿಯೊಂದು ಹಿಡಿದು ಅಧೀರನ ಪಾತ್ರದಲ್ಲಿ ರಗಡ್​​ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್​​​​ ಈಗ ಸೋಷಿಯಲ್​​ ಮೀಡಿಯಾದಲ್ಲಿ ಭಾರೀ ಹವಾ ಸೃಷ್ಟಿಸಿದೆ.

ಬಾಲಿವುಡ್​ನ ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ದಿನದಿಂದ ದಿನಕ್ಕೇ ಕೆಜಿಎಫ್-2 ಕುರಿತ ಜನರಲ್ಲಿ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ. ಸದ್ಯ ಬಿಡುಗಡೆಯಾಗಿರುವ ಕೆಜಿಎಫ್-2 ಅಧೀರನ ತುಣುಕೊಂದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

blank

ಬಾಲಿವುಡ್​​ ನಟ ಸಂಜಯ್ ದತ್ ಕೆಜಿಎಫ್-2 ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತದ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ. ಚಿತ್ರದಲ್ಲಿ ಅವರು ಯಶ್ ಅವರಿಗೆ ಪ್ರತಿನಾಯಕ ‘ಅಧೀರ’ನಾಗಿ ಕಾಣಿಸಿಕೊಂಡಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಕಾಶ್ ರಾಜ್, ಶ್ರೀನಿಧಿ ಶೆಟ್ಟಿ ಸೇರಿದಂತೆ ದೊಡ್ಡ ತಾರಾ ಬಳಗವೇ

The post ಸಂಜಯ್ ದತ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್; ಅಧೀರನ ರಗಡ್​​ ಲುಕ್​​ ರಿಲೀಸ್​ ಕೆಜಿಎಫ್-2 ಚಿತ್ರ ತಂಡ​ appeared first on News First Kannada.

Source: newsfirstlive.com

Source link