ರಾಜ್ಯ ಸಚಿವ ಸಂಪುಟ ರಚನೆ -ಬಿಎಸ್​​ವೈ ನಿವಾಸಕ್ಕೆ ಸಚಿವ ಸ್ಥಾನ ಆಕಾಂಕ್ಷಿಗಳು ದೌಡು

ರಾಜ್ಯ ಸಚಿವ ಸಂಪುಟ ರಚನೆ -ಬಿಎಸ್​​ವೈ ನಿವಾಸಕ್ಕೆ ಸಚಿವ ಸ್ಥಾನ ಆಕಾಂಕ್ಷಿಗಳು ದೌಡು

ಬೆಂಗಳೂರು: ನೂತನ ಮುಖ್ಯಮಂತ್ರಿಗಳಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದಂತೆ ಸಚಿವ ಸ್ಥಾನ ಆಕಾಂಕ್ಷಿಗಳು ಒತ್ತಡದ ತರಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಸಚಿವ ಸ್ಥಾನ ಆಕಾಂಕ್ಷಿಗಳು ಬೆಳ್ಳಂ ಬೆಳಗ್ಗೆಯೇ ಭೇಟಿ ನೀಡುತ್ತಿದ್ದಾರೆ.

ನೂತನ ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲಾ ಪ್ರವಾಸಕ್ಕೆ ಹೊರಟ ತಕ್ಷಣವೇ ಯಡಿಯೂರಪ್ಪರ ಭೇಟಿಗೆ ಸಚಿವ ಸ್ಥಾನ ಆಕಾಂಕ್ಷಿಗಳು ಆಗಮಿಸುತ್ತಿದ್ದು, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅರಗ ಜ್ಞಾನೇಂದ್ರ, ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ್ ದಢೇಸಗೂರ್‌ ಸೇರಿದಂತೆ ಹಲವು ನಾಯಕರು ಬಿಎಸ್​​ವೈರನ್ನು ಭೇಟಿಯಾಗಿದ್ದಾರೆ.

blank

ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗುವ ಮೂಲಕ ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭಿಸಿದ ಸಚಿವ ಸ್ಥಾನ ಆಕಾಂಕ್ಷಿಗಳು, ಬೊಮ್ಮಾಯಿ ಅವರ ಮೇಲೆ ಒತ್ತಡ ತರುವ ಕಾರ್ಯವನ್ನು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಸಚಿವ ಸಂಪುಟ ರಚನೆ ಮಾಡುವ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರು ಇಂದು ದೆಹಲಿಗೆ ಭೇಟಿ ನೀಡಿರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಇಂದು ಬೆಳಗ್ಗೆ ಮಾತನಾಡಿರುವ ಸಿಎಂ, ನಾಳೆ ದೆಹಲಿಗೆ ತೆರಳುವ ಅವಕಾಶ ಇದೆ. ಈಗಾಗಲೇ ಕೇಂದ್ರ ನಾಯಕರ ಭೇಟಿಗೆ ಕೇಳಿದ್ದೇನೆ. ಆದರೆ ಈ ಬಾರಿಯ ಭೇಟಿಯಲ್ಲಿ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡೋದಿಲ್ಲ ಎಂದು ಹೇಳಿದ್ದಾರೆ.

The post ರಾಜ್ಯ ಸಚಿವ ಸಂಪುಟ ರಚನೆ -ಬಿಎಸ್​​ವೈ ನಿವಾಸಕ್ಕೆ ಸಚಿವ ಸ್ಥಾನ ಆಕಾಂಕ್ಷಿಗಳು ದೌಡು appeared first on News First Kannada.

Source: newsfirstlive.com

Source link