ಮೆಟ್ಟಿಲು ಇಳಿಯುವಾಗ ಕಾಲು ಜಾರಿಬಿದ್ದು ಮಾಜಿ ಸಚಿವ ಸುಧಾಕರ್ ಸಹೋದರ ಸಾವು

ಚಿತ್ರದುರ್ಗ: ಮೆಟ್ಟಿಲು ಇಳಿಯುವಾಗ ಕಾಲು ಜಾರಿಬಿದ್ದು ಮಾಜಿ ಸಚಿವ ಡಿ.ಸುಧಾಕರ್ ಅವರ ಸಹೋದರ ಡಿ.ಮಹವೀರ್ ಜೈನ್(73) ಸಾವನ್ನಪ್ಪಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿರುವ ಜೈನ್ ಮಂದಿರದಲ್ಲಿ ಕಳೆದ ಭಾನುವಾರ ಮೆಟ್ಟಿಲು ಇಳಿಯುವಾಗ ಮಹವೀರ್ ಜೈನ್ ಜಾರಿಬಿದ್ದಿದ್ದರು.

ಭಾನುವಾರ ಬೆಳಗ್ಗೆ ನಿಯಂತ್ರಣ ತಪ್ಪಿ ಕಾಲು ಜಾರಿಬಿದ್ದ ತಕ್ಷಣ ಅವರನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಡಿ.ಮಹಾವೀರ್ ಜೈನ್ (73) ಸಾವನ್ನಪ್ಪಿದ್ದಾರೆ. ಮೆಟ್ಟಿಲಿನಿಂದ ಕಾಲುಜಾರಿ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ : ಅರೆಸ್ಟ್ ವೇಳೆ ಸೈನೈಡ್ ತಿಂದು ಸರಗಳ್ಳ ಸಾವು

ಹಿರಿಯೂರು ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಡಿ. ಸುಧಾಕರ್ ಅವರ ಸಹೋದರ ಪ್ರತಿದಿನ ಜೈನ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಶೀ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಗಮನಿಸುತ್ತಿದ್ದರು.

The post ಮೆಟ್ಟಿಲು ಇಳಿಯುವಾಗ ಕಾಲು ಜಾರಿಬಿದ್ದು ಮಾಜಿ ಸಚಿವ ಸುಧಾಕರ್ ಸಹೋದರ ಸಾವು appeared first on Public TV.

Source: publictv.in

Source link