ಜಮ್ಮು ಕಾಶ್ಮೀರದಲ್ಲಿ ಅನಾರೋಗ್ಯದಿಂದ ಬಾಗಲಕೋಟೆ ಮೂಲದ ಯೋಧ ಸಾವು

ಜಮ್ಮು ಕಾಶ್ಮೀರದಲ್ಲಿ ಅನಾರೋಗ್ಯದಿಂದ ಬಾಗಲಕೋಟೆ ಮೂಲದ ಯೋಧ ಸಾವು

ಬಾಗಲಕೋಟೆ: ತೀವ್ರ ಅನಾರೋಗ್ಯದಿಂದ ರಾಜ್ಯದ ಯೋಧ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಮಹಾಂತೇಶ್ ದಾಸಪ್ಪನವರ (41) ಸಾವನ್ನಪ್ಪಿದ ಯೋಧ. ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿ ಗ್ರಾಮದವರಾಗಿದ್ದು, 2000ರಲ್ಲಿ ರಲ್ಲಿ ಸೇನೆಗೆ ಸೇರಿ 22 ವರ್ಷಗಳಿಂದ ತಾಯ್ನಾಡಿಗಾಗಿ ಸೇವೆ ಸಲ್ಲಿಸುತ್ತಿದ್ದರು. ಎಂಇಜಿ 2 ಇಂಜಿನಿಯರ್ ಬೆಟಾಲಿಯನ್ ರೆಜಿಮೆಂಟ್ ನಲ್ಲಿದ್ದ  ಹವಾಲ್ದಾರ್​ ಆಗಿದ್ದ ಮಹಾಂತೇಶ್ ಅವರು ಶ್ರೀನಗರದ ಕುಪ್ಪಾಡನಲ್ಲಿ ಕರ್ತವ್ಯದಲ್ಲಿದ್ದರು.

blank

ಮಹಾಂತೇಶ್ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಜುಲೈ 24ರಂದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇನ್ನು ಯೋಧನ ಪಾರ್ಥಿವ ಶರೀರ ನಾಳೆ ಸ್ವಗ್ರಾಮಕ್ಕೆ ಬರಲಿದ್ದು, ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ಯೋಧ ಇನ್ನೇನ್ನು ಕೆಲವೇ ದಿನಗಳಲ್ಲಿ ಸೇನೆಯಲ್ಲಿ ನಾಯಕ್​ ಸುಬೇದಾರ್​ ಆಗಿ ಭಡ್ತಿ ಹೊಂದುವವರಿದ್ದರು ಎನ್ನಲಾಗಿದ್ದು, ಇಬ್ಬರು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ.

blank

The post ಜಮ್ಮು ಕಾಶ್ಮೀರದಲ್ಲಿ ಅನಾರೋಗ್ಯದಿಂದ ಬಾಗಲಕೋಟೆ ಮೂಲದ ಯೋಧ ಸಾವು appeared first on News First Kannada.

Source: newsfirstlive.com

Source link