ನಕಲಿ ಕೀ ಬಳಸಿ ನಿರ್ಮಾಪಕನ ಮನೆ ದೋಚಿದ್ದ ಕಳ್ಳರ ಬಂಧನ

ಬೆಂಗಳೂರು: ಸ್ಯಾಂಡಲ್‍ವುಡ್ ನಿರ್ಮಾಪಕ ರಮೇಶ್ ಕಶ್ಯಪ್‍ರವರ ಹನುಮಂತನಗರ ನಿವಾಸದಲ್ಲಿ ಇತ್ತೀಚೆಗಷ್ಟೇ ಕಳ್ಳತನವಾಗಿತ್ತು. ಇದೀಗ ಈ ಪ್ರರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಂದ್ರಶೇಖರ್ ಮತ್ತು ಅಭಿಷೇಕ್ ಬಂಧಿತ ಆರೋಪಿಗಳು. ಆರೋಪಿ ಅಭಿಷೇಕ್ ನಿರ್ಮಾಪಕ ಕಶ್ಯಪ್ ರ ಕಾರು ಚಾಲಕನಾಗಿ ಕೆಲಸ ಕಾರ್ಯನಿರ್ವಹಿಸುತ್ತಿದ್ದ. ಜು.10ರಂದು ಹನುಮಂತನಗರದ ಕಶ್ಯಪ್ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ವೇಳೆ 3 ಲಕ್ಷ ರೂ. ನಗದು, 710 ಗ್ರಾಂ ಚಿನ್ನಾಭರಣವನ್ನು ಆರೋಪಿಗಳು ಕದ್ದೊಯ್ದಿದ್ದರು.

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹೀಗಾಗಿ ಸಿಸಿಟಿವಿ ಹಾಗೂ ಟವರ್ ಡಂಪ್ ಸಹಾಯದ ಮೂಲಕ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

blank

ನಿರ್ಮಾಪಕ ಕಶ್ಯಪ್‍ರ ಕಾರುಚಾಲಕನಾಗಿದ್ದ ಅಭಿಷೇಕ್ ಲಾಕರ್‍ನ ನಕಲಿ ಕೀ ಮಾಡಿಕೊಂಡಿದ್ದ. ಅಲ್ಲದೇ ಸ್ನೇಹಿತ ಚಂದ್ರಶೇಖರನಿಗೆ ಕೀ ನೀಡಿ ಕಳ್ಳತನ ಮಾಡಿಸಿದ್ದನು. ಕದ್ದ ಚಿನ್ನಾಭರಣವನ್ನ ಅಡವಿಟ್ಟು ಹಣ ಪಡೆದು ದಿಲ್ ದಾರ್ ಲೈಫ್ ನಡೆಸುತ್ತಿದ್ದರು. ಇದೀಗ ಹನುಮಂತನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರ ಬಳಿ ಇದ್ದ 3 ಲಕ್ಷ ನಗದನ್ನು ವಶ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಇಲಿ ಬಾಲ ಸುಟ್ಟಂತೆ ಶುಭಾ ವಿಲವಿಲನೆ ಒದ್ದಾಡುತ್ತಾಳೆ: ಮಂಜು

The post ನಕಲಿ ಕೀ ಬಳಸಿ ನಿರ್ಮಾಪಕನ ಮನೆ ದೋಚಿದ್ದ ಕಳ್ಳರ ಬಂಧನ appeared first on Public TV.

Source: publictv.in

Source link