ಬೊಮ್ಮಾಯಿ ನನ್ನ ಸಂಪುಟದಿಂದ ಬಿಡೋದಿಲ್ಲ ಅಂತ ಅನ್ಕೊಂಡಿದ್ದೀನಿ -ಉಮೇಶ್​ ಕತ್ತಿ

ಬೊಮ್ಮಾಯಿ ನನ್ನ ಸಂಪುಟದಿಂದ ಬಿಡೋದಿಲ್ಲ ಅಂತ ಅನ್ಕೊಂಡಿದ್ದೀನಿ -ಉಮೇಶ್​ ಕತ್ತಿ

ನವದೆಹಲಿ: ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗುತ್ತಿದಂತೆ ಸಚಿವ ಸ್ಥಾನ ಆಕಾಂಕ್ಷಿಗಳ ಲಾಬಿ ಶುರುವಾಗಿದೆ. ಇದರ ಬೆನ್ನಲ್ಲೇ ಮಾಜಿ ಸಚಿವ ಉಮೇಶ್​ ಕತ್ತಿ ಅವರು ದೆಹಲಿಗೆ ದೌಡಾಯಿಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್​ ಕತ್ತಿ ಅವರು, ಬೊಮ್ಮಾಯಿ ನನ್ನನ್ನು ಬಿಟ್ಟು ಸಂಪುಟ ರಚನೆ ಮಾಡೋದಿಲ್ಲ ಎಂಬ ವಿಶ್ವಾಸ ಇದೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ತಮ್ಮ ದೆಹಲಿ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಉಮೇಶ್ ಕತ್ತಿ, ವಿಶ್ವ ರಾಜ್ ಶುಗರ್​​ನ ಎರಡನೇ ಯೂನಿಟ್ ಐಎಮ್ ಪಡೆಯಬೇಕಿದೆ. ಅದಕ್ಕಾಗಿ ದೆಹಲಿಗೆ ಆಗಮಿಸಿದ್ದೇನೆ. ಈಗ ಸಂಸತ್ ಅಧಿವೇಶನವೂ ನಡೆಯುತ್ತಿದೆ. ಪಕ್ಷದ ಮಿತ್ರ ಮಂಡಳಿ ಸದಸ್ಯರನ್ನು ಭೇಟಿಯಾಗುತ್ತೇನೆ.

ಬೊಮ್ಮಾಯಿ ನನ್ನನ್ನು ಬಿಟ್ಟು ಸಂಪುಟ ಮಾಡೋದಿಲ್ಲ ಅಂತಾ ಅನ್ಕೊಂಡಿದ್ದೀನಿ. ಆದರೆ ಮಂತ್ರಿಯಾಗದಿದ್ದರೂ ಶಾಸಕನಾಗಿ ಕೆಲಸ ಮಾಡ್ತೇನೆ. ಈಗ ನನಗೆ 60 ವರ್ಷ ಇನ್ನೂ 15 ವರ್ಷ ರಾಜಕಾರಣ ಮಾಡುವ ಆಸೆ ಇದೆ. ಸದ್ಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಸಂತೋಷ್, ಅಮಿತ್ ಶಾರ ಭೇಟಿಗೆ ಸಮಯ ಕೇಳಿದ್ದೀನಿ. ಸಂಪುಟದಲ್ಲಿ ಹಿರಿಯರಿಗೆ ಕೊಕ್ ಕೊಡುವ ವಿಚಾರದ ಬಗ್ಗೆ ಚರ್ಚೆ ಇದುವರೆಗೂ ನಡೆದಿಲ್ಲ. ಶೆಟ್ಟರ್ ಮಾಜಿ ಮುಖ್ಯಮಂತ್ರಿಗಳು.. ಅದು ಅವರ ವೈಯುಕ್ತಿಕ ಅನಿಸಿಕೆ. ಇಷ್ಟವಿದ್ರೆ ಮಂತ್ರಿಯಾಗಿ ಕೆಲಸ ಮಾಡಬಹುದು. ಉತ್ತಮ ಕೆಲಸಗಾರರಾಗಿ ಹೊರ ಹೊಮ್ಮಿದ್ದಾರೆ ಎಂದರು.

The post ಬೊಮ್ಮಾಯಿ ನನ್ನ ಸಂಪುಟದಿಂದ ಬಿಡೋದಿಲ್ಲ ಅಂತ ಅನ್ಕೊಂಡಿದ್ದೀನಿ -ಉಮೇಶ್​ ಕತ್ತಿ appeared first on News First Kannada.

Source: newsfirstlive.com

Source link