ಸ್ವಾಭಿಮಾನ, ಗೌರವದಿಂದ ಸಂಪುಟ ಸೇರೋದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ -ಮಾಜಿ ಸಿಎಂ ಶೆಟ್ಟರ್

ಸ್ವಾಭಿಮಾನ, ಗೌರವದಿಂದ ಸಂಪುಟ ಸೇರೋದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ -ಮಾಜಿ ಸಿಎಂ ಶೆಟ್ಟರ್

ಬೆಂಗಳೂರು: ನಾನು ವೈಯಕ್ತಿಕ ನಿರ್ಧಾರ ಮಾಡಿ ಸಿಎಂ ಬೊಮ್ಮಾಯಿ ಮಂತ್ರಿ ಮಂಡಲ ಸೇರುವುದಿಲ್ಲ ಎಂಬ ತೀರ್ಮಾನ ಮಾಡಿದ್ದೇನೆ. ನಾನು ಈ ತೀರ್ಮಾನ ಮಾಡಿರೋದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ನನ್ನ ತೀರ್ಮಾನವನ್ನ ಪಕ್ಷದ ಅಧ್ಯಕ್ಷರು ಕಟೀಲ್, ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ತಿಳಿಸಿದ್ದೇನೆ. ಮಾಜಿ ಸಿಎಂ ಆಗಿರುವುದರಿಂದ ಮುಜುಗರ ಆಗೋದು ಬೇಡ ಅಂತಾ ತೀರ್ಮಾನ ಮಾಡಿದ್ದೇನೆ. ಒಳ್ಳೆಯ ನಿರ್ಧಾರ ಎಂದು ಹೇಳಿದ್ದಾರೆ.

ಪಕ್ಷದ ಯಾವುದೇ ಸ್ಥಾನಮಾನ ನಿರೀಕ್ಷೆ ಮಾಡಿಲ್ಲ. ಈಗಾಗಲೇ ಎಲ್ಲಾ ರೀತಿಯ ಕೆಲಸ ಮಾಡಿದ್ದೇನೆ. ಪಕ್ಷ ಯಾವ ರೀತಿ ಹೇಳಿದ್ರೆ ಆ ಕೆಲಸ ಮಾಡ್ತೇನೆ. ಸ್ವಾಭಿಮಾನ ಮತ್ತು ಗೌರವದಿಂದ ಈ ನಿರ್ಧಾರ ಮಾಡಿದ್ದು, ಯಡಿಯೂರಪ್ಪ ಸಿಎಂ ಆಗಿದ್ದರಿಂದ ಅವರ ಕ್ಯಾಬಿನೆಟ್‌ನಲ್ಲಿ ಮಂತ್ರಿ ಆಗಿದ್ದೆ.

ಬಸವರಾಜ ಬೊಮ್ಮಾಯಿ ಅಲ್ಲ ಬೇರೆ ಯಾರೇ ಸಿಎಂ ಆಗಿದ್ರು ಮಂತ್ರಿ ಆಗುತ್ತಿರಲಿಲ್ಲ. ಪಕ್ಷ ಎಲ್ಲಾ ರೀತಿಯ ಸ್ಥಾನಮಾನ ನೀಡಿದೆ. ಸ್ಪೀಕರ್, ರಾಜ್ಯಾಧ್ಯಕ್ಷ, ಸಿಎಂ, ಮಂತ್ರಿ ಆಗಿಯೂ ಕೆಲಸ ಮಾಡಿದ್ದೇನೆ ತಮ್ಮ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದರು.

The post ಸ್ವಾಭಿಮಾನ, ಗೌರವದಿಂದ ಸಂಪುಟ ಸೇರೋದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ -ಮಾಜಿ ಸಿಎಂ ಶೆಟ್ಟರ್ appeared first on News First Kannada.

Source: newsfirstlive.com

Source link