ಸಂಜಯ್ ದತ್‍ಗೆ ಹುಟ್ಟುಹಬ್ಬದ ಸಂಭ್ರಮ – ಕೆಜಿಎಫ್‍ನಿಂದ ಸಿಕ್ತು ಭರ್ಜರಿ ಗಿಫ್ಟ್

ಬೆಂಗಳೂರು: ಬಾಲಿವುಡ್ ನಟ ಸಂಜಯ್ ದತ್‍ಗೆ ಇಂದು 62ನೇ ಜನುಮ ದಿನದ ಸಂಭ್ರಮ. ಈ ವಿಶೇಷ ದಿನದಂದು ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಕೆಜಿಎಫ್-2 ಚಿತ್ರತಂಡದಿಂದ ಮುನ್ನಾಬಾಯ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.

ಹೌದು ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಸಿನಿಮಾ ಕೆಜಿಎಫ್-2. ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್‍ಗೆ ವಿರುದ್ಧವಾಗಿ ಇದೇ ಮೊದಲ ಬಾರಿಗೆ ಸಂಜಯ್ ದತ್ ಖಡಕ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್ ದತ್ ಅವರ ಪಾತ್ರವಿರುವ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಂಜಯ್ ದತ್‍ಗೆ ಚಿತ್ರತಂಡ ಬರ್ತ್‍ಡೇ ವಿಶ್ ಮಾಡಿದೆ.

ಈ ಸಿನಿಮಾದಲ್ಲಿ ಸಂಜಯ್ ದತ್ ಅಧೀರ ಎಂಬ ಕ್ರೂರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಹೊಸ ಪೋಸ್ಟರ್‍ನನ್ನು ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಯುದ್ಧ ಇರುವುದು ಪ್ರಗತಿಗಾಗಿ, ಇದನ್ನು ರಣಹದ್ದುಗಳು ಸಹ ಒಪ್ಪುತ್ತದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದು, ಸಂಜಯ್ ದತ್‍ಗೆ ವಿಶ್ ಮಾಡಿದ್ದಾರೆ.

ಇದಕ್ಕೆ ಸಂಜಯ್ ದತ್ ನನಗೆ ವಿಶ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ. ಕೆಜಿಎಫ್-2 ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಅದ್ಭುತ. ನೀವೆಲ್ಲರೂ ಸಿನಿಮಾ ಬಿಡುಗಡೆಗೊಳಿಸಲು ಬಹಳ ದಿನಗಳಿಂದ ಕಾಯುತ್ತಿದ್ದೀರಿ ಎನ್ನುವುದು ನನಗೆ ಗೊತ್ತಿದೆ. ನಾನು ನಿಮಗೆ ಭರವಸೆ ನೀಡುತ್ತೇನೆ ಕಾಯುವುದರಿಂದ ಒಳ್ಳೆಯದು ಆಗುತ್ತದೆ ಎಂದು ಸಂಜಯ್ ದತ್ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಕೆಲವು ಸಂಬಂಧಗಳು ಶಾಶ್ವತವಾಗಿ ಉಳಿಯುತ್ತವೆ – ಮುನಿಸು ಮರೆತು ಒಂದಾದ ದರ್ಶನ್, ರಕ್ಷಿತಾ

The post ಸಂಜಯ್ ದತ್‍ಗೆ ಹುಟ್ಟುಹಬ್ಬದ ಸಂಭ್ರಮ – ಕೆಜಿಎಫ್‍ನಿಂದ ಸಿಕ್ತು ಭರ್ಜರಿ ಗಿಫ್ಟ್ appeared first on Public TV.

Source: publictv.in

Source link