ಪೃಥ್ವಿ ಶಾ, ಸೂರ್ಯಕುಮಾರ್​​ ಇಂಗ್ಲೆಂಡ್​ ಕನಸಿಗೆ ಕೊಳ್ಳಿ ಇಡ್ತಾ ಕೊರೊನಾ?

ಪೃಥ್ವಿ ಶಾ, ಸೂರ್ಯಕುಮಾರ್​​ ಇಂಗ್ಲೆಂಡ್​ ಕನಸಿಗೆ ಕೊಳ್ಳಿ ಇಡ್ತಾ ಕೊರೊನಾ?

ಕೊರೊನಾತಂಕದ ನಡುವೆಯೂ ಇಂಡೋ – ಲಂಕಾ 2ನೇ ಟಿ20 ಕದನ ಅಂತ್ಯ ಕಂಡಿದೆ. ಆದ್ರೆ, ಪಂದ್ಯಕ್ಕೂ ಒಂದು ದಿನ ಮುಂಚೆ ಬಂದ ಕೊರೊನಾ ಟೆಸ್ಟ್​ ರಿಸಲ್ಟ್​ನ ಡಿಬೇಟ್​​ಗಳು ಅಂತ್ಯ ಕಂಡಿಲ್ಲ. ಪೃಥ್ವಿ ಶಾ, ಸೂರ್ಯಕುಮಾರ್​​ ಈ ಚರ್ಚೆಯ ಹಾಟ್​​ ಸಬ್ಜೆಕ್ಟ್​​ ಆಗಿದ್ದಾರೆ.

ಕೊರೊನಾ ಸೋಂಕಿನ ಭೀತಿಯ ನಡುವೆಯೂ ಭಾರತ – ಶ್ರೀಲಂಕಾ ನಡುವಿನ 2ನೇ ಟಿ20 ಪಂದ್ಯ ಸುಖಾಂತ್ಯ ಕಂಡಿದೆ. ಪಂದ್ಯವೇನೋ ನಡೆದಿದೆ. ಆದ್ರೆ ಹಲವು ಅನಿಶ್ಚಿತತೆಗಳು ಹಾಗೇ ಮುಂದುವರೆದಿವೆ. ಅದರಲ್ಲೂ ಸೂರ್ಯಕುಮಾರ್ ಯಾದವ್​, ಪೃಥ್ವಿ ಶಾ ಇಂಗ್ಲೆಂಡ್​​ಗೆ ಹೋಗ್ತಾರಾ.? ಇಲ್ವಾ.? ಅನ್ನೋ ಪ್ರಶ್ನೆ ಅತಿ ಹೆಚ್ಚು ಚರ್ಚೆಯಾಗ್ತಿದೆ.

blank

ಇಂಗ್ಲೆಂಡ್​ನಲ್ಲಿರೋ ಟೀಮ್​ ಇಂಡಿಯಾಗೆ ಇಂಜುರಿ ಕಾಟ ಆರಂಭವಾದಾಗಲೇ ರಿಪ್ಲೆಸ್​​ಮೆಂಟ್​ ಚರ್ಚೆ ಗರಿಗೆದರಿದ್ವು. ಈ ಬಗ್ಗೆ ಎದ್ದಿದ್ದ ಎಲ್ಲಾ ಉಹಾಪೋಹಗಳಿಗೆ ಜುಲೈ 26ರಂದು ತೆರೆ ಎಳೆದಿದ್ದ ಬಿಸಿಸಿಐ ಪೃಥ್ವಿ ಶಾ, ಸೂರ್ಯ ಕುಮಾರ್​ ​ಇಂಗ್ಲೆಂಡ್​​​ಗೆ ಪ್ರಯಾಣಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಿತ್ತು. ಅದಾದ ಮರು ದಿನವೇ ಲಂಕಾ ಪ್ರವಾಸದಲ್ಲಿದ್ದ ಟೀಮ್​ ಇಂಡಿಯಾವನ್ನ ಕೊರೊನಾ ಕಾಡಿತು.

ಬಯೋ ಬಬಲ್​ ವ್ಯವಸ್ಥೆಯಲ್ಲಿದ್ದ ಹೊರತಾಗಿಯೂ ಆಲ್​ರೌಂಡರ್​ ಕೃನಾಲ್​ ಪಾಂಡ್ಯ ಸೋಂಕಿಗೆ ತುತ್ತಾಗಿದ್ದು ದೃಢಪಟ್ಟಿತ್ತು. ಇದು ಟೆಸ್ಟ್​ ತಂಡಕ್ಕೆ ಕಮ್​​ಬ್ಯಾಕ್​ ಮಾಡೋ ಕನವರಿಕೆಯಲ್ಲಿದ್ದ ಪೃಥ್ವಿ, ಪದಾರ್ಪಣೆ ಕನಸು ಕಂಡಿದ್ದ ಸೂರ್ಯ ಇಬ್ಬರಿಗೂ ಕೊರೊನಾ ಶಾಕ್​ ನೀಡಿತು.

ಕೃನಾಲ್​ ಟೆಸ್ಟ್​ ರಿಪೋರ್ಟ್​ ಪಾಸಿಟಿವ್​ ಬಂದ ಬೆನ್ನಲ್ಲೇ, ತಂಡದ 8 ಸದಸ್ಯರನ್ನ ಪ್ರಾಥಮಿಕ ಸಂಪರ್ಕಿತರು ಎಂದು ಪಟ್ಟಿ ಮಾಡಿದ್ದ ಬಿಸಿಸಿಐ ಇದುವರೆಗೂ ಅವರನ್ನ ಐಸೋಲೆಷನ್​ನಲ್ಲಿರಿಸಿದೆ. ಸೂರ್ಯ ಕುಮಾರ್​​, ಪೃಥ್ವಿ ಶಾ ಕೂಡ ಈ ಪಟ್ಟಿಯಲ್ಲಿದ್ದಾರೆ. ಟಿ20 ಸರಣಿ ಮುಗಿದ ಬೆನ್ನಲ್ಲೇ ಪೃಥ್ವಿ, ಸೂರ್ಯ ಇಬ್ಬರನ್ನೂ ಕಳುಹಿಸಿಕೊಡುವಂತೆ ಕೊಹ್ಲಿ ಪಡೆ ಕೋರಿತ್ತು.

ಬಬಲ್​ನಿಂದ ಬಬಲ್​ಗೆ ಶಿಫ್ಟ್​ ಮಾಡೋ ಯೋಜನೆ ಕೂಡ ಸಿದ್ಧವಾಗಿತ್ತು. ಆದ್ರೆ, ಸದ್ಯದ ಪರಿಸ್ಥಿತಿ ಆ ಯೋಜನೆಯನ್ನ ಕೈ ಬಿಡುವಂತೆ ಮಾಡಿದ್ದು, ಇಬ್ಬರು ಮುಂಬೈಕರ್​ಗಳು ಇಂಗ್ಲೆಂಡ್​​ಗೆ ತೆರಳೋದು ಇನ್ನಷ್ಟು ವಿಳಂಬವಾಗಲಿದೆ ಎನ್ನಲಾಗ್ತಿದೆ. ಇದರ ಜೊತೆಗೆ ಪೃಥ್ವಿ, ಸೂರ್ಯ ಇಂಗ್ಲೆಂಡ್​ಗೆ​ ಹಾರೋದು ಕೂಡ ಡೌಟ್​ ಎಂಬ ಸುದ್ದಿಯೂ ಬಿಸಿಸಿಐ ಮೂಲಗಳಿಂದಲೇ ಹರಿದಾಡ್ತಿದೆ.

The post ಪೃಥ್ವಿ ಶಾ, ಸೂರ್ಯಕುಮಾರ್​​ ಇಂಗ್ಲೆಂಡ್​ ಕನಸಿಗೆ ಕೊಳ್ಳಿ ಇಡ್ತಾ ಕೊರೊನಾ? appeared first on News First Kannada.

Source: newsfirstlive.com

Source link