ಮಳೆ ಕಡಿಮೆಯಾದ್ರು ತಗ್ಗದ ಕೃಷ್ಣೆಯ ಅಬ್ಬರ -ನಡುಗಡ್ಡೆಯಲ್ಲಿ ಸಿಲುಕಿದ್ದ 54 ಮಂದಿಯ ರಕ್ಷಣೆ

ಮಳೆ ಕಡಿಮೆಯಾದ್ರು ತಗ್ಗದ ಕೃಷ್ಣೆಯ ಅಬ್ಬರ -ನಡುಗಡ್ಡೆಯಲ್ಲಿ ಸಿಲುಕಿದ್ದ 54 ಮಂದಿಯ ರಕ್ಷಣೆ

ಬೆಳಗಾವಿ: ಕಳೆದ ನಾಲ್ಕು ದಿನಗಳಿಂದ ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಕೃಷ್ಣಾ ನದಿಯಲ್ಲಿ ಪ್ರವಾಹ ತಗ್ಗಿಲ್ಲ. ಪರಿಣಾಮ ಜಿಲ್ಲೆಯ ಕೆಲವು ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.

ಕೃಷ್ಣಾ ನದಿ ಪ್ರವಾಹದಿಂದಾಗಿ ಅಥಣಿ ತಾಲೂಕಿನ ಸವದಿ ಗ್ರಾಮದ ನಡುಗಡ್ಡೆಯಲ್ಲಿ ಸಿಲುಕಿದ್ದ 54 ಜನರನ್ನು ಎಸ್​ಡಿಆರ್​ಎಫ್​ ತಂಡ ರಕ್ಷಣೆ ಮಾಡಿದೆ. ಕಾರ್ಯಾಚರಣೆ ನಡೆಸಿದ ಎಸ್​ಡಿಆರ್​ಎಫ್ ತಂಡ ನಡುಗಡ್ಡೆಯಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದಾರೆ.

The post ಮಳೆ ಕಡಿಮೆಯಾದ್ರು ತಗ್ಗದ ಕೃಷ್ಣೆಯ ಅಬ್ಬರ -ನಡುಗಡ್ಡೆಯಲ್ಲಿ ಸಿಲುಕಿದ್ದ 54 ಮಂದಿಯ ರಕ್ಷಣೆ appeared first on News First Kannada.

Source: newsfirstlive.com

Source link