ಫುಲ್​ ರಿಲ್ಯಾಕ್ಸ್​ ಮೂಡ್​ನಲ್ಲಿ ಬಿಗ್​ ಮನೆಯ ಸದಸ್ಯರು

ಫುಲ್​ ರಿಲ್ಯಾಕ್ಸ್​ ಮೂಡ್​ನಲ್ಲಿ ಬಿಗ್​ ಮನೆಯ ಸದಸ್ಯರು

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್​​ಗಳ ಅಬ್ಬರ ಕಡಿಮೆಯಾಗಿದ್ದು, ಬಿಗ್ ಮನೆ ಸದಸ್ಯರು ಫುಲ್ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಕೆಲ ಟಾಸ್ಕ್​ಗಳನ್ನು ಬಿಗ್​ ಬಾಸ್​ ನೀಡುತ್ತಿದ್ದಾರೆ, ಆದರೆ ಅವು ಕೇವಲ ಮನರಂಜನೆಯ ದೃಷ್ಟಿಯಿಂದ. ಇದ್ರಿಂದ ಲಕ್ಸುರಿ ಬಜೆಟ್​ಗೆ ಯಾವ ಎಫೆಕ್ಟ್​ ಇಲ್ಲ. ಒಂದು ಕಡೆ ಫಿನಾಲೆ ಟೆನ್ಷನ್ ಇದ್ರು ಕೂಡ ಪ್ರತಿ ಕ್ಷಣ ಎಂಜಾಯ್​ ಮಾಡ್ತಿದ್ದಾರೆ.

ಇನ್ನೂ ಬಿಗ್​ ಬಾಸ್​ಗೆ ಸೇರಿದ ವಸ್ತುವನ್ನು ಹುಡುಕಲು ವೈಷ್ಣವಿ, ಶುಭಾಗೆ ಬಿಗ್​ ಬಾಸ್​ ಟಾಸ್ಕ್​ ನೀಡಿದ್ದರು. ಆದ್ರೇ ಅವರು ಟಾಸ್ಕ್​ ಕಂಪ್ಲೀಟ್​ ಮಾಡದ ಕಾರಣ ಪ್ರಶಾಂತ್​ಗೆ ಆ ಟಾಸ್ಕ್​ ನೀಡಲಾಯಿತು.

blank

ಟಾಸ್ಕ್​ ಏನಂದ್ರೇ ಒಂದು ಪುಟ್ಟ ವಸ್ತು ಕೈಗೆ ಸಿಕ್ಕ ತಕ್ಷಣ ಸೌಂಡ್ ಮಾಡುತ್ತೆ ಅಂತಾ ಬಿಗ್​ ಬಾಸ್​ ಹಿಂಟ್​ ನೀಡಿ ಹುಡುಕಲು ಹೇಳಿದ್ರು. ಪ್ರಶಾಂತ್​ ಈ ಟಾಸ್ಕ್​ನ್ನು ಕಂಪ್ಲೀಟ್​ ಮಾಡಿ ಒಂದು ಅಡ್ವಾಂಟೆಸ್​ ಪಡೆದ್ರು. ಅದೇನಂದ್ರೆ ಮುಂದಿನ 24 ಗಂಟೆಗಳಲ್ಲಿ ಬೇಕು ಎನಿಸಿದಾಗ ಪ್ರಶಾಂತ್ 20 ನಿಮಿಷ ನಿದ್ದೆ ಮಾಡಬಹುದು. ಇದನ್ನು ಕೇಳಿದ ಶುಭಾ, ನಂಗೆ ಸಿಗಬೇಕಾದ ಅವಕಾಶ ಮಿಸ್​ ಆಯ್ತಲ್ಲ ಅಂತಾ ಪಾಪಾ ಬೇಸರದಿಂದ ಹ್ಯಾಪು ಮೋರೆ ಮಾಡ್ಕೊಂಡ್ರು.

ಇನ್ನೂ ಬಿಗ್​ ಬಾಸ್​ ದಿವ್ಯಾ ಸುರೇಶ್​ಗೆ ಒಂದು ಟಾಸ್ಕ್​ ನೀಡುತ್ತಾರೆ. ದಿವ್ಯಾ ತಮ್ಮ ಆಪೋಜಿಟ್​ ಆಡುವವರನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶ ಬಿಗ್​ ಬಾಸ್​ ನೀಡಿದ್ದರು. ಹೀಗಾಗಿ ದಿವ್ಯಾ ಸುರೇಶ್​ ವೈಷ್ಣವಿಯನ್ನ ಆಯ್ಕೆ ಮಾಡ್ಕೊಂಡ್ರು. ಇನ್ನೂ ಟಾಸ್ಕ್​ ಏನಂದ್ರೆ ಮಧ್ಯದಲ್ಲಿ ಒಂದು ಬಾಕ್ಸ್​ ಇರಿಸಿ, ಎರಡು ಬದಿಯಲ್ಲಿ ಸ್ಪರ್ಧಿಗಳು ಒಂದು ಬೆಂಚ್​ ಮೇಲ್ ನಿಂತು ಆ ಬಾಕ್ಸ್​ನಿಂದ ಹಗ್ಗ ಎಳೆಯಬೇಕು. ಈ ಸಂದರ್ಭದಲ್ಲಿ ಯಾವ ಸ್ಪರ್ಧಿ ತಮ್ಮ ಆಪೋಜಿಟ್​ ಸ್ಪರ್ಧಿಯನ್ನು ಬೆಂಚ್​ನಿಂದ ಕೆಳಗೆ ಇಳಿಸುತ್ತಾರೋ ಅವರು ವಿನ್ನರ್​. ಈ ಸ್ಪರ್ಧೆಯಲ್ಲಿ ವೈಷ್ಣವಿ ವಿನ್​ ಆದ್ರು.

blank

The post ಫುಲ್​ ರಿಲ್ಯಾಕ್ಸ್​ ಮೂಡ್​ನಲ್ಲಿ ಬಿಗ್​ ಮನೆಯ ಸದಸ್ಯರು appeared first on News First Kannada.

Source: newsfirstlive.com

Source link