UAEನಲ್ಲಿ ವಿಶ್ವಕಪ್.. ಭಾರತದ ಸ್ಪಿನ್​ಗೆ ಯಶಸ್ಸು ಪಕ್ಕಾ , ಇಕ್ಕಟ್ಟಿನಲ್ಲಿ ಸೆಲೆಕ್ಷನ್​ ಕಮಿಟಿ.!

UAEನಲ್ಲಿ ವಿಶ್ವಕಪ್.. ಭಾರತದ ಸ್ಪಿನ್​ಗೆ ಯಶಸ್ಸು ಪಕ್ಕಾ , ಇಕ್ಕಟ್ಟಿನಲ್ಲಿ ಸೆಲೆಕ್ಷನ್​ ಕಮಿಟಿ.!

ಟಿ20 ವಿಶ್ವಕಪ್​ ಆಯೋಜನೆಯ ಹಕ್ಕು ಹೊಂದಿದ್ದ ಬಿಸಿಸಿಐ ಕೊರೊನಾತಂಕದ ಹಿನ್ನೆಲೆಯಲ್ಲಿ ಯುಎಇನಲ್ಲಿ ಮಹತ್ವದ ಟೂರ್ನಿ ಆಯೋಜಿಸಲು ಸಜ್ಜಾಗಿದೆ. ಭಾರತದ ಬದಲಿಗೆ ಯುಎಇನಲ್ಲಿ ಟೂರ್ನಿ ಆಯೋಜನೆ ಮಾಡಿರುವ ಬಿಸಿಸಿಐನ ನಿರ್ಧಾರ ಟೀಮ್​ ಇಂಡಿಯಾಗೆ ಹೆಚ್ಚು ಸಹಕಾರಿಯಾಗಲಿದೆ. ಅದ್ಹೇಗೆ..? ಇಲ್ಲಿದೆ ನೋಡಿ ಡಿಟೇಲ್ಸ್​​.

blank

14ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಉಳಿದ ಪಂದ್ಯಗಳು ಮುಗಿದ ಬೆನ್ನಲ್ಲೇ, ಮತ್ತೊಂದು ಕ್ರಿಕೆಟ್​​ ಜಾತ್ರೆಗೆ ಯುಎಇ ವೇದಿಕೆ ಒದಗಿಸಲಿದೆ. ಕೊರೊನಾತಂಕದ ಹಿನ್ನೆಲೆಯಲ್ಲಿ ಭಾರತದ ಬದಲು ಯುಎಇನಲ್ಲಿ ಮಹತ್ವದ ಟೂರ್ನಿಯನ್ನ ಆಯೋಜಿಸಲು, ಬಿಸಿಸಿಐ ಸಿದ್ಧತೆ ನಡೆಸಿದೆ. ಇದನ್ನ ಅನುಮೋದಿಸಿರುವ ಐಸಿಸಿ ಅಕ್ಟೋಬರ್​​ 17ರಿಂದ ನವೆಂಬರ್​​ 14ರ ಅವಧಿಯಲ್ಲಿ ಟೂರ್ನಿ ನಡೆಯಲಿದೆ ಎಂದು ದಿನಾಂಕವನ್ನೂ ಘೋಷಿಸಿದೆ.

ಯುಇಎನಲ್ಲಿ ವಿಶ್ವಕಪ್​, ಟೀಮ್​ ಇಂಡಿಯಾಗೆ ವರದಾನ..!

ಮಹತ್ವದ ಐಸಿಸಿ ಟೂರ್ನಿ ಭಾರತದಿಂದ ಅರಬ್ಬರ ನಾಡಿಗೆ ಶಿಫ್ಟ್​ ಆದ ಬೆನ್ನಲ್ಲೇ, ಟೀಮ್​ ಇಂಡಿಯಾಗೆ ತವರಿನ ಪಿಚ್​​ಗಳ ಲಾಭ ಸಿಗಲ್ಲಾ ಅನ್ನೋ ಚರ್ಚೆ ಆರಂಭವಾಗಿದ್ವು. ಆದ್ರೆ, ಯುಇಎ ಪಿಚ್​ನಲ್ಲಿ ಟೂರ್ನಿ ನಡೀತಾ ಇರೋದು ಭಾರತಕ್ಕೆ ವರವೇ ಆಗಿದೆ. ಅದರಲ್ಲೂ ಟೀಮ್​ ಇಂಡಿಯಾದಲ್ಲೂ ಸ್ಪಿನ್​ ವಿಭಾಗಕ್ಕೆ ಇದು ಬಿಗ್​ ಪ್ಲಸ್​ ಪಾಯಿಂಟ್​​.

blank

ಅಲ್ಲಿನ ಫ್ಲ್ಯಾಟ್​ ಹಾಗೂ ಟರ್ನಿಂಗ್​​ ಪಿಚ್​ಗಳಲ್ಲಿ ಮೋಡಿ ಮಾಡುವ ಸಾಮರ್ಥ್ಯ, ಭಾರತದ ಸ್ಪಿನ್​ ವಿಭಾಗಕ್ಕೆ ಹೆಚ್ಚೆ ಇದೆ. 13ನೇ ಆವೃತ್ತಿಯ ಐಪಿಎಲ್​ನಲ್ಲಿ ಭಾರತೀಯ ಸ್ಪಿನ್ನರ್​ಗಳು ನೀಡಿದ ಪ್ರದರ್ಶನವೇ ಇದಕ್ಕೆ ಸಾಕ್ಷಿಯಾಗಿದೆ.

ಸ್ಪಿನ್​ಗೆ ಯಶಸ್ಸು, ಇಕ್ಕಟ್ಟಿಗೆ ಸಿಲುಕಿದ ಸೆಲೆಕ್ಷನ್​ ಕಮಿಟಿ..!

ಯುಎಇ ನಲ್ಲಿ ಟೀಮ್​ ಇಂಡಿಯಾ ಸ್ಪಿನ್ನರ್​ಗಳು ಮೋಡಿ ಮಾಡ್ತಾರೆ ಅನ್ನೋ ವಿಚಾರ, ತಂಡಕ್ಕೇನೋ ಶುಭ ಸುದ್ದಿಯೇ ಆಗಿದೆ. ಆದ್ರೀಗ ಇಕ್ಕಟ್ಟಿಗೆ ಸಿಲುಕಿರೋದು ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ.!! ಸ್ಪಿನ್​ ಕೋಟಾದಲ್ಲಿ ಸ್ಥಾನಕ್ಕಾಗಿ 10ಕ್ಕಿಂತ ಹೆಚ್ಚು ಆಟಗಾರರು ಪೈಪೋಟಿ ನಡೆಸ್ತಾ ಇರೋದು, ಆಯ್ಕೆ ಸಮಿತಿಯ ತಲೆನೋವನ್ನ ಹೆಚ್ಚಿಸಿದೆ. ಹೀಗಾಗಿ ಈ ಬಾರಿಯ ಐಪಿಎಲ್​ನ ಪ್ರದರ್ಶನ ಆಯ್ಕೆಗೆ ನಿರ್ಣಾಯಕವಾಗಲಿದೆ ಎನ್ನಲಾಗ್ತಿದೆ.

blank

ಸ್ಪಿನ್ನರ್​ ಕೋಟಾದಲ್ಲಿ ಸ್ಥಾನಕ್ಕೆ ಪೈಪೋಟಿ: ಯುಜುವೇಂದ್ರ ಚಹಲ್​ ಕುಲ್​ದೀಪ್​ ಯಾದವ್, ರವೀಂದ್ರ ಜಡೇಜಾ ಅಕ್ಷರ್​ ಪಟೇಲ್​, ರಾಹುಲ್​ ಚಹರ್, ವರುಣ್​ ಚಕ್ರವರ್ತಿ, ​​ಆರ್​​ ಅಶ್ವಿನ್​, ವಾಷಿಂಗ್ಟನ್​ ಸುಂದರ್​, ಕೃನಾಲ್​ ಪಾಂಡ್ಯ, ರವಿ ಬಿಷ್ನೋಯಿ, ಹರ್ಪಿತ್​​ ಬ್ರಾರ್,  ಮಯಾಂಕ್​​ ಮಾರ್ಕಂಡೆ, ಕೆ ಗೌತಮ್​, ರಾಹುಲ್​ ತೆವಾಟಿಯಾ, ಶ್ರೇಯಸ್​ ಗೋಪಾಲ್​.

ವಿಶ್ವ ಕ್ರಿಕೆಟ್​ ರಾಷ್ಟ್ರಗಳು ಅದರಲ್ಲೂ ಮುಖ್ಯವಾಗಿ ಸೇನಾ ರಾಷ್ಟ್ರಗಳು ಟೀಮ್​ ಇಂಡಿಯಾವನ್ನ ಎದುರಿಸಲು ಹೆದರೋದೆ ಸ್ಪಿನ್​ ತಂತ್ರಗಾರಿಕೆಯ ಕಾರಣಕ್ಕೆ. ಅದರ ಯುಎಇನ ಪಿಚ್​ಗಳು ಸ್ಪಿನ್ನರ್​ಗಳಿಗೆ ಹೇಳಿ ಮಾಡಿಸಿದಂತಿರೋದು ಎದುರಾಳಿ ಪಾಳಯಕ್ಕೆ ಟೆನ್ಷನ್​ ತಂದೊಡ್ಡಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಇರೋ ಪೈಪೋಟಿಯಲ್ಲಿ ಆಟಗಾರರನ್ನ ಮ್ಯಾನೇಜ್​ಮೆಂಟ್​ ಹೇಗೆ ಮ್ಯಾನೇಜ್​ ಮಾಡುತ್ತೆ ಅನ್ನೋದರ ಮೇಲೆ ಎಲ್ಲಾ ನಿರ್ಧಾರವಾಗಲಿದೆ.

The post UAEನಲ್ಲಿ ವಿಶ್ವಕಪ್.. ಭಾರತದ ಸ್ಪಿನ್​ಗೆ ಯಶಸ್ಸು ಪಕ್ಕಾ , ಇಕ್ಕಟ್ಟಿನಲ್ಲಿ ಸೆಲೆಕ್ಷನ್​ ಕಮಿಟಿ.! appeared first on News First Kannada.

Source: newsfirstlive.com

Source link