ವಾಟ್ಸ್​​ಆ್ಯಪ್​ ಸೇಫ್​ ಅಂದುಕೊಂಡಿದ್ದೀರಾ? ಖಂಡಿತ ಇಲ್ಲ; ಯಾಕೇ ಗೊತ್ತೇ?

ವಾಟ್ಸ್​​ಆ್ಯಪ್​ ಸೇಫ್​ ಅಂದುಕೊಂಡಿದ್ದೀರಾ? ಖಂಡಿತ ಇಲ್ಲ; ಯಾಕೇ ಗೊತ್ತೇ?

ಪ್ರತಿನಿತ್ಯ ಹ್ಯಾಕರ್​​ಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಬಡವರಿಂದ ಹಿಡಿದು ಶ್ರೀಮಂತರವರೆಗೂ ಫೇಸ್ಬುಕ್​​​, ವಾಟ್ಸ್​ಆ್ಯಪ್​​ ಬಳಸೋದು ಸರ್ವೇಸಾಮಾನ್ಯ. ಬಳಕೆದಾರರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಸೋಷಿಯಲ್​​ ಮೀಡಿಯಾದಲ್ಲೂ ಕ್ರೈಮ್​​ಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇವೆ. ಆದರೆ ಇಷ್ಟು ದಿನಗಳ ಕಾಲ ಎಲ್ಲರಲ್ಲೂ ಇದ್ದ ಒಂದೇ ಒಂದು ನಂಬಿಕೆ, ಅದು ವಾಟ್ಸ್​ಆ್ಯಪ್​ ಕಾಲ್​ ಮತ್ತು ಚಾಟ್​ಗಳನ್ನು ಹ್ಯಾಕ್​ ಮಾಡಲು ಸಾಧ್ಯವಿಲ್ಲ ಎಂಬುದು. ಈ ನಂಬಿಕೆಯೀಗ ಹುಸಿಯಾಗಿದೆ.

ಇಷ್ಟು ದಿನ ಫೇಸ್‌ಬುಕ್ ಅನ್ನು ಬೆನ್ನು ಬಿಡದಂತೆ ಕಾಡಿದ್ದ ಹ್ಯಾಕರ್‌ಗಳ ಕಾಟ ಈಗ ವಾಟ್ಸ್‌ಆ್ಯಪ್ ಮೇಲೆ ಬಿದ್ದಂತಿದೆ. ಇದರಿಂದ ಆಘಾತಕ್ಕೊಳಗಾದ ಜನರಲ್ಲಿ ವಾಟ್ಸ್‌ಆ್ಯಪ್ ನಮಗೆ ಸೇಫ್ ಇದೆಯೇ, ಇಲ್ಲವೇ? ಎಂಬ ಪ್ರಶ್ನೆ ಹುಟ್ಟಿಸಿದೆ. ಸದ್ಯ ವಾಟ್ಸಾಪ್ ಅಪ್ಲಿಕೇಶನ್​​ ಕೆಲವು ಹೊಸ ಸೆಟ್ಟಿಂಗ್ಸ್​ ಸೇರಿಸಲಾಗಿದೆ. ನೀವು ಈ ಸೆಟ್ಟಿಂಗ್ಸ್​ ಬದಲಾಯಿಸಿದರೆ ಹೋದಲ್ಲಿ ನಿಮ್ಮ ವಾಟ್ಸ್​ಆ್ಯಪ್​​ ಹ್ಯಾಕ್​​ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ:  ಸಂಜಯ್ ದತ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್; ಅಧೀರನ ರಗಡ್​​ ಲುಕ್​​ ರಿವೀಲ್​​​​

ವಾಟ್ಸಾಪ್ ಇತ್ತೀಚೆಗೆ ಡಿಸ್​​ಅಪಿಯರಿಂಗ್​​​ ಮಸೇಜಸ್​(Disappearing messages) ಎಂಬ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ. ಇದನ್ನು ಬಳಸುವುದರಿಂದ ನಿಮ್ಮ ಸಂದೇಶಗಳನ್ನು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ. ಆದರೆ ಇದು ಗೌಪ್ಯತೆಯ ದೃಷ್ಟಿಯಿಂದಲೂ ಅಪಾಯಕಾರಿ ಲಕ್ಷಣವಾಗಿದೆ.

ಹ್ಯಾಕ್​​ನಿಂದ ಸೇಫ್​​ ಆಗಲು ಹೀಗೆ ಮಾಡಿ

ನೀವು ಅಳಿಸಿದ ಮೇಲೂ ಸಂದೇಶಗಳು 7 ದಿನಗಳವರೆಗೆ ಉಳಿಯುತ್ತವೆ. ಇವು ವಾಟ್ಸ್​ಆ್ಯಪ್ ಅಧಿಸೂಚನೆಯಲ್ಲಿ ಉಳಿಯುತ್ತವೆ. ಆಗ ಈ ಚಾಟ್‌ಗಳನ್ನು ಇನ್ನೊಬ್ಬರು ಹ್ಯಾಕ್​​ ಮಾಡಬಹುದು. ಹೀಗಾಗಿ ಸುರಕ್ಷತೆಗಾಗಿ, ನೀವು ತಕ್ಷಣ ಚಾಟ್ ಅನ್ನು ಡಿಲೀಟ್ ಮಾಡಬೇಕು.
ಸೈಬರ್ ತಜ್ಞರ ಪ್ರಕಾರ, ಹ್ಯಾಕರ್‌ಗಳು ನಿಮ್ಮ ಫೋನ್ ಅನ್ನು ತುಂಬಾ ಸುಲಭವಾಗಿ ಹ್ಯಾಕ್ ಮಾಡಬಹುದು. ಇದನ್ನು ತಪ್ಪಿಸಲು ಕೂಡಲೇ ನಿಮ್ಮ ವಾಟ್ಸ್​​ಆ್ಯಪ್​​ ಸೆಟ್ಟಿಂಗ್ಸ್​ಗೆ ಹೋಗಿ, ಚಾಟ್‌ಗಳನ್ನು ಕ್ಲಿಕ್ ಮಾಡುವ ಮೂಲಕ ಸೇವ್ ಟು ಕ್ಯಾಮೆರಾ ರೋಲ್ ಅನ್ನು ಆಫ್ ಮಾಡಬೇಕಿದೆ.

ರಾತ್ರಿ ವೇಳೆ ಹ್ಯಾಕಿಂಗ್​ ಸಾಧ್ಯತೆ ಹೆಚ್ಚು:

ನೀವು ಸಾಮಾನ್ಯವಾಗಿ ಮಲಗಿರುವಾಗ ಹ್ಯಾಂಕಿಗ್​​ ಸಾಧ್ಯತೆ ಹೆಚ್ಚು. ಹ್ಯಾಕರ್​​ಗಳು ಹಲವು ಬಾರಿ ತಪ್ಪಾದ ಕೋಡ್​ವೊಂದನ್ನು ನಮೂದಿಸುತ್ತಾರೆ. ಇದು ಸುಲಭವಾಗಿ ಹ್ಯಾಕ್​​ ಮಾಡಲು ಸಹಕಾರಿಯಾಗುತ್ತದೆ. ಸರಿಯಾದ ಕೋಡ್ ಒತ್ತಿದರೆ​ ನಿಮಗೆ ಗೊತ್ತಾಗುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ನೀವು ಮೊಬೈಲ್​ ಎತ್ತಿಟ್ಟು ಮಲಗಿರುವಾಗಲೇ ವಾಯ್ಸ್​ಮೇಲ್ ಮೂಲಕ ಪಾಸ್​ವರ್ಡ್​ನ್ನು ಸುಲಭವಾಗಿ ಪಡೆಯುತ್ತಾರೆ.

ಹ್ಯಾಕಿಂಗ್​ನಿಂದ ಏನು ಲಾಭ?:

ಹ್ಯಾಕರ್​ಗಳು ನಿಮ್ಮ ಅಕೌಂಟ್​ಗಳನ್ನು ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಬಳಕೆದಾರರ ಖಾಸಗಿ ಮಾಹಿತಿಗಳು ಕದಿಯುತ್ತಾರೆ. ಈ ಮೂಲಕ ನಿಮಗೆ ಬೆದರಿಕೆ ಹಾಕುತ್ತಾರೆ. ವಾಟ್ಸ್‌ಆ್ಯಪ್‌ನಲ್ಲಿ ನಿಮ್ಮ ಮಾಹಿತಿ ಅವರಿಗೆ ಸಿಕ್ಕರೆ ಮತ್ತಷ್ಟು ಸಂಕಷ್ಟವನ್ನು ನೀವು ಅನುಭವಿಸಬೇಕಾಗುತ್ತದೆ.

The post ವಾಟ್ಸ್​​ಆ್ಯಪ್​ ಸೇಫ್​ ಅಂದುಕೊಂಡಿದ್ದೀರಾ? ಖಂಡಿತ ಇಲ್ಲ; ಯಾಕೇ ಗೊತ್ತೇ? appeared first on News First Kannada.

Source: newsfirstlive.com

Source link