ಬೆಣ್ಣೆತೋರಾ ಜಲಾಶಯ ತಂದೊಡ್ಡಿದ ಸಂಕಷ್ಟ: ಶಾಶ್ವತ ಪರಿಹಾರ ಕಲ್ಪಿಸಲು ರೈತರ ಮನವಿ

ಬೆಣ್ಣೆತೋರಾ ಜಲಾಶಯ ತಂದೊಡ್ಡಿದ ಸಂಕಷ್ಟ: ಶಾಶ್ವತ ಪರಿಹಾರ ಕಲ್ಪಿಸಲು ರೈತರ ಮನವಿ

ಕಲಬುರಗಿ: ನೂರಾರು ರೈತರಿಗೆ ಅನುಕೂಲವಾಗಬೇಕಿದ್ದ ಬೆಣ್ಣೆತೋರಾ ಜಲಾಶಯ, ನೂರಾರು ರೈತರ ಬಾಳಿಗೆ ಬರೆ ಹಾಕುತ್ತಿದೆ. ಜಲಾಶಯದ ಕೆಲಭಾಗದ ರೈತರ ಜಮೀನುಗಳು ಪ್ರತಿವರ್ಷ ಜಲಾಶಯದ ಪ್ರವಾಹಕ್ಕೆ ಮುಳುಗಡೆಯಾಗ್ತಿರೊದಿಂದ್ರ ರೈತರು ಕಂಗಾಲಾಗಿದ್ದಾರೆ.

blank

ಜಿಲ್ಲೆಯ ಕಾಳಗಿ ತಾಲೂಕಿನಲ್ಲಿರುವ ಬೆಣ್ಣೆತೋರಾ ಜಲಾಶಯದ ವ್ಯಾಪ್ತಿಯಲ್ಲಿನ ಹಳೆ ಹೆಬ್ಬಾಳ, ಚಿಂಚೋಳಿ ಎಮ್. ಗ್ರಾಮದ ರೈತರು ಶಾಶ್ವತ ಪರಿಹಾರ ಕಲ್ಪಿಸುವಂತೆ ಮೊರೆಯಿಡುತ್ತಿದ್ದಾರೆ.

ಪ್ರತಿ ವರ್ಷದ ಕಡಲೆ ಬೆಳೆ ಬೆಣ್ಣೆತೋರಾ ಜಲಾಶಯ ಪ್ರವಾಹಕ್ಕೆ ಕೊಚ್ಚಿ ಹೋಗ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಲಾಶಯದ ಕೆಳಭಾಗದ ರೈತರ ಬದುಕು ಬರ್ಬಾದ್ ಆಗುತ್ತಿದೆ, ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗುತ್ತಿದೆ. ಪ್ರತಿ ವರ್ಷ ಬೆಳೆ ಹಾನಿಯಿಂದ ನಷ್ಟ ಅನುಭವಿಸುತ್ತಿರುವ ನೂರಾರು ರೈತರು ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.

ಬೆಣ್ಣೆತೋರಾ ಜಲಾಶಯ ತಂದೊಡ್ಡಿದ ಸಂಕಷ್ಟ: ಶಾಶ್ವತ ಪರಿಹಾರ ಕಲ್ಪಿಸಲು ರೈತರ ಮನವಿ

ಇತ್ತ ಬೆಳೆಯು ಇಲ್ಲ, ಬೆಳೆ ಪರಿಹಾರವೂ ಇಲ್ಲ, ಶಾಶ್ವತ ಪರಿಹಾರವೂ ಸಿಗ್ತಿಲ್ಲ ಎಂದು ಆರೋಪಿಸುವ ರೈತರು, ಪ್ರತಿ ವರ್ಷ ಹಾನಿಯಾಗ್ತಿರುವ ಭೂಮಿ ಪಡೆದು ಶಾಶ್ವತ ಪರಿಹಾರ ಮಾಡಿಕೊಡುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.

blank

The post ಬೆಣ್ಣೆತೋರಾ ಜಲಾಶಯ ತಂದೊಡ್ಡಿದ ಸಂಕಷ್ಟ: ಶಾಶ್ವತ ಪರಿಹಾರ ಕಲ್ಪಿಸಲು ರೈತರ ಮನವಿ appeared first on News First Kannada.

Source: newsfirstlive.com

Source link