ಹುಬ್ಬಳ್ಳಿಯ ಆರ್​​ಎಸ್​​ಎಸ್​ ಕಚೇರಿಗೆ ಭೇಟಿ ಕೊಟ್ಟ ಸಿಎಂ ಬೊಮ್ಮಾಯಿ

ಹುಬ್ಬಳ್ಳಿಯ ಆರ್​​ಎಸ್​​ಎಸ್​ ಕಚೇರಿಗೆ ಭೇಟಿ ಕೊಟ್ಟ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ರಾಜ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಗೆ ಆಗಮಿಸಿದ್ದರು. ಮೊದಲ ಬಾರಿಗೆ ಹುಬ್ಬಳಿಗೆ ಬಂದ ಸಿಎಂಗೆ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಲಭಿಸಿತ್ತು.

ಸಿಎಂ ಆದ ಬಳಿಕ ಮೊದಲ ಬಾರಿಗೆ ಹುಬ್ಬಳಿಗೆ ಆಗಮಿಸಿದ ಬೊಮ್ಮಾಯಿ ಅವರು, ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಆರ್.ಎಸ್.ಎಸ್ ಕೇಶವ ಕುಂಜ ಕಚೇರಿಗೆ ಭೇಟಿ ನೀಡಿ ಸಂಘಟನೆಯ ಪ್ರಮುಖರೊಂದಿಗೆ ಚರ್ಚೆ ನಡೆಸಿದರು.

blank

ತಂದೆ-ತಾಯಿ ಸಮಾಧಿಗೆ ಬೊಮ್ಮಾಯಿ ಗೌರವ..
ಆ ಬಳಿಕ ಹುಬ್ಬಳ್ಳಿಯ ಆರ್.ಟಿ.ಓ ಕಚೇರಿ ಮುಂಭಾಗದಲ್ಲಿರುವ ತಂದೆ ದಿ. ಸೋಮಪ್ಪ ಬೊಮ್ಮಾಯಿ, ತಾಯಿ ದಿ. ಗಂಗಮ್ಮಾ ಬೊಮ್ಮಾಯಿ ಅವರ ಸಮಾಧಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುಷ್ಪ ನಮನ ಸಲ್ಲಿಸಿದರು.

blank

ಸಿಎಂ ಆಗಿ ಹುಬ್ಬಳ್ಳಿಗೆ ಬರ್ತೀನಿ ಅಂತ ಅನ್ಕೊಂಡಿರ್ಲಿಲ್ಲ..
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿಸ ಸಿಎಂ, ಹುಬ್ಬಳ್ಳಿ ನನ್ನ ಪ್ರೀತಿಯ ಊರು, ನನ್ನ ಎಲ್ಲ ಶಿಕ್ಷಣ ಇಲ್ಲಿಯೇ ಮುಗಿದಿದೆ‌. ಮುಖ್ಯಮಂತ್ರಿಯಾಗಿ ನಾನು‌ ಹುಬ್ಬಳ್ಳಿಗೆ ಬರುತ್ತೇನೆ ಅಂದು-ಕೊಂಡಿರಲಿಲ್ಲ. ಹುಬ್ಬಳ್ಳಿ ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿದ್ದು, ಹುಬ್ಬಳ್ಳಿ-ಧಾರವಾಡವನ್ನು ಉತ್ತುಂಗಕ್ಕೆ ಕೊಂಡೊಯ್ಯುವೆ ಎಂದರು.

blank

ಜಗದೀಶ್ ಶೆಟ್ಟರ್ ಸಂಪುಟ ಸೇರುವುದಿಲ್ಲ ಎಂಬ ಹೇಳಿಕೆ‌ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಶೆಟ್ಟರ್ ಜೊತೆ ಫೋನ್​​ನಲ್ಲಿ ಮಾತನಾಡಿದ್ದೇನೆ. ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅವರನ್ನು ಖುದ್ದು ಭೇಟಿಯಾಗಿ ಮಾತನಾಡುವೆ. ಜಗದೀಶ್ ಶೆಟ್ಟರ್ ನಾನು ಆತ್ಮೀಯ ಸ್ನೇಹಿತರು, ಬೇರೆ ಪಕ್ಷದಲ್ಲಿ ಇದ್ದಾಗಲೂ ಉತ್ತಮ ಬಾಂಧವ್ಯ ಇದೆ. ನಾವು ಇನ್ನೂ ರಾಜಕೀಯಕ್ಕೆ ಬಂದಿರಲಿಲ್ಲ, ಆಗಿನಿಂದಲೂ ಒಳ್ಳೆಯ ಸ್ನೇಹಿತರು ಎಂದು ಸ್ಪಷ್ಟಪಡಿಸಿದರು.

blank

The post ಹುಬ್ಬಳ್ಳಿಯ ಆರ್​​ಎಸ್​​ಎಸ್​ ಕಚೇರಿಗೆ ಭೇಟಿ ಕೊಟ್ಟ ಸಿಎಂ ಬೊಮ್ಮಾಯಿ appeared first on News First Kannada.

Source: newsfirstlive.com

Source link