ಪಕ್ಷ ಕಟ್ಟುವಲ್ಲಿ ಶ್ರೀರಾಮನ ಮಾದರಿ.. ಕಾಂಗ್ರೆಸ್ ಎದುರಿಸುವಲ್ಲಿ ಕೃಷ್ಣನ ತಂತ್ರಗಾರಿಕೆ -ಕೆ.ಎಸ್​.ಈಶ್ವರಪ್ಪ

ಪಕ್ಷ ಕಟ್ಟುವಲ್ಲಿ ಶ್ರೀರಾಮನ ಮಾದರಿ.. ಕಾಂಗ್ರೆಸ್ ಎದುರಿಸುವಲ್ಲಿ ಕೃಷ್ಣನ ತಂತ್ರಗಾರಿಕೆ -ಕೆ.ಎಸ್​.ಈಶ್ವರಪ್ಪ

ಶಿವಮೊಗ್ಗ: ಬಸವರಾಜ್​ ಬೊಮ್ಮಾಯಿ ಆಯ್ಕೆಯಿಂದ ಕಾಂಗ್ರೆಸ್ ನವರಿಗೆ ನಿರಾಸೆ ಆಗಿದೆ. ಅವರು ಸಿಎಂ ಆಯ್ಕೆಯಲ್ಲಿ ಗೊಂದಲ ಆಗಬಹುದು ಮತ್ತು ಅದರಿಂದ ಲಾಭ ಪಡೆಯಬಹುದು ಎಂದು ಬಯಸಿದ್ದರು. ಆದರೆ ನಮ್ಮ ಪಕ್ಷದ ಹೈ ಕಮಾಂಡ್ ಸಿಎಂ ಆಯ್ಕೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಕಾಂಗ್ರೆಸ್​ಗೆ ಶಾಕ್​ ನೀಡಿದೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು ಪಕ್ಷ ಕಟ್ಟುವ ವಿಷಯದಲ್ಲಿ ಶ್ರೀರಾಮನ ಮಾದರಿ, ಹಾಗೂ ಕಾಂಗ್ರೆಸ್ ಎದುರಿಸುವಲ್ಲಿ ಕೃಷ್ಣನ ತಂತ್ರಗಾರಿಕೆ ಅನುಸರಿಸುತ್ತೇವೆ ಎಂದು ಟಾಂಗ್​ ನೀಡಿದ್ದಾರೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಹೈ ಕಮಾಂಡ್ ಬೊಮ್ಮಾಯಿಯನ್ನು ಆಯ್ಕೆ ಮಾಡಿದೆ.

ನಾಳೆ ಬೊಮ್ಮಾಯಿ ದಿಲ್ಲಿಗೆ ಹೋಗಿ ಬರಲಿದ್ದಾರೆ. ಹೆಚ್ಚೆಂದರೆ ಒಂದು ವಾರದಲ್ಲಿ ಪೂರ್ಣ ಪ್ರಮಾಣದ ಸಂಪುಟ ಅಸ್ಥಿತ್ವಕ್ಕೆ ಬರಲಿದೆ.
ಬೊಮ್ಮಾಯಿ ಅವರನ್ನು ಮುಂದಿನ ಸಿಎಂ ಎಂದು ಯಡಿಯೂರಪ್ಪ ಘೋಷಿಸಿದಾಗ ನಾನೇ ಅದನ್ನು ಅನುಮೋದಿಸಿದ್ದೇನೆ ನಾನು ಡಿಸಿಎಂ ಆಗಬೇಕು ಎಂದು ವಿವಿಧ ಜಾತಿ, ಜನಾಂಗದ ಪ್ರಮುಖರು, ಸ್ವಾಮೀಜಿಗಳು ಹಾಗೂ ಸಂಘಟನೆಗಳು ಆಗ್ರಹಿಸುತ್ತಿವೆ. ಅವರಿಗೆ ನಾನು ಆಭಾರಿಯಾಗಿದ್ದೇನೆ ಆದರೆ ಪಕ್ಷದ ವರಿಷ್ಠರು ಅವಕಾಶ ನೀಡಿದರೆ ಅದನ್ನು ಒಪ್ಪಿಕೊಳ್ಳುತ್ತೇನೆ.

ಪಕ್ಷ ಅವಕಾಶ ನೀಡಿದರೆ ರಾಜ್ಯ ಸಚಿವನಾಗ್ತೇನೆ, ಕೇಂದ್ರ ಸಚಿವನಾಗ್ತೇನೆ ಅಥವಾ ಶಾಸಕನಾಗಿರು ಎಂದರೆ ಶಾಸಕನಾಗಿಯೇ ಇರ್ತೇನೆ. ಜಗದೀಶ್ ಶೆಟ್ಟರ್ ಹಾಗೆ ನನಗೆ ಸಚಿವ ಸ್ಥಾನ ಬೇಡ ಎನ್ನುವುದಿಲ್ಲ ಎಂದಿದ್ದಾರೆ.

The post ಪಕ್ಷ ಕಟ್ಟುವಲ್ಲಿ ಶ್ರೀರಾಮನ ಮಾದರಿ.. ಕಾಂಗ್ರೆಸ್ ಎದುರಿಸುವಲ್ಲಿ ಕೃಷ್ಣನ ತಂತ್ರಗಾರಿಕೆ -ಕೆ.ಎಸ್​.ಈಶ್ವರಪ್ಪ appeared first on News First Kannada.

Source: newsfirstlive.com

Source link