ಕೊರೊನಾ ಬಳಿಕ ಲಸಿಕೆ..ಮತ್ತೆರಡು ಬಾರಿ ಕೊರೊನಾ.. ವೈದ್ಯಲೋಕಕ್ಕೇ ಸವಾಲಾದ ಮುಂಬೈ ವೈದ್ಯೆ ಸೋಂಕು

ಕೊರೊನಾ ಬಳಿಕ ಲಸಿಕೆ..ಮತ್ತೆರಡು ಬಾರಿ ಕೊರೊನಾ.. ವೈದ್ಯಲೋಕಕ್ಕೇ ಸವಾಲಾದ ಮುಂಬೈ ವೈದ್ಯೆ ಸೋಂಕು

ಮುಂಬೈ: ಮಹಾರಾಷ್ಟ್ರದಲ್ಲಿ ವೈದ್ಯೆಯೊಬ್ಬರಿಗೆ ಸಂಪೂರ್ಣ ಲಸಿಕೆ ಪಡೆದ ಬಳಿಕವೂ ಎರಡು ಬಾರಿ ಕೊರೋನಾ ಪಾಟಿಟಿವ್​​ ಪತ್ತೆಯಾಗಿದೆ. ಮುಂಬೈ ಮೂಲದ ವೈದ್ಯೆಗೆ ಇಲ್ಲಿಯವರೆಗೂ ಮೂರು ಬಾರಿ ಸೋಂಕು ಕಾಣಿಸಿಕೊಂಡಿದೆ. ವಿಚಿತ್ರವೆಂದರೆ ಎರಡು ಡೋಸ್​​ ಲಸಿಕೆ ತೆಗೆದುಕೊಂಡ ಬಳಿಕ 2 ಸಲ ಕೋವಿಡ್​​ ಪಾಸಿಟಿವ್​​ ತಗುಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

26 ವರ್ಷದ ಡಾ. ಸೃಷ್ಟಿ ಹಲಾರಿ ಮುಂಬೈನ ವೀರ ಸಾವರ್ಕರ್ ಆಸ್ಪತ್ರೆ ವೈದ್ಯೆ. ಇವರಿಗೆ ಇದುವರೆಗೂ ಮಾರಕ ಕೊರೋನಾ ಮೂರು ಸಲ ಬಂದಿದೆ. ಒಟ್ಟು 13 ತಿಂಗಳುಗಳಲ್ಲಿ ಕೋವಿಡ್​ ಲಸಿಕೆ ತೆಗೆದುಕೊಂಡ ಮೇಲೂ ಮೂರು ಬಾರಿ ಕಾಣಿಸಿಕೊಂಡಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಸಾಮಾನ್ಯವಾಗಿ ಒಂದು ಬಾರಿ ಕೊರೊನಾ ಸೋಂಕು ಬಂದ ಬಳಿಕ ಅವರಲ್ಲಿ ರೋಗನಿರೋಧಕ ಶಕ್ತಿ ಕಣ ಅಂದ್ರೆ ಆ್ಯಂಟಿಬಾಡೀಸ್​ ಇರುತ್ತೆ.. ಹೀಗಾಗಿ ಕನಿಷ್ಠ ಒಂದು ವರ್ಷ ಅವರು ಸೇಫ್ ಆಗಿರಬಹುದು ಅಂತಾ ವೈದ್ಯಲೋಕ ಹೇಳುತ್ತೆ. ಆದ್ರೆ ಈ ವೈದ್ಯೆ, ಕೊರೊನಾ ಬಂದು ಹೋದ ಬಳಿಕ ಎರಡು ಡೋಸ್ ಲಸಿಕೆಯನ್ನೂ ಪಡೆದು ಕೊಳ್ತಾರೆ. ಹೀಗೆ ಲಸಿಕೆ ಪಡೆದ ಬಳಿಕವೂ ಅವರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಎರಡು ಬಾರಿ ಸೋಂಕು ತಗುಲಿದೆ. ಇದು ಇಡೀ ವೈದ್ಯ ಲೋಕಕ್ಕೇ ಸವಾಲಾಗಿದೆ.

ಸದ್ಯ ಮೂರನೇ ಬಾರಿಗೆ ಕೊರೋನಾ ಕಾಣಿಸಿಕೊಂಡಿದ್ದರಿಂದ ಡಾ. ಸೃಷ್ಟಿ ಹಲಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಪರಿಣಾಮ ಸೃಷ್ಟಿ ತಂದೆ, ತಾಯಿ, ಸಹೋದರ ಸೇರಿದಂತೆ ಕುಟುಂಬದ ಎಲ್ಲರಿಗೂ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕುಂಟುಬಕ್ಕೇನಾದರೂ ಕೊರೋನಾ ರೂಪಾಂತರಿ ತಗುಲಿದೆಯಾ ಎಂದು ಪರೀಕ್ಷೆ ಮಾಡಲಾಗುತ್ತಿದೆ.

ಆಂತಕದಲ್ಲಿ ವೈದ್ಯೆ

ನನ್ನೊಂದಿಗೆ ಇಡೀ ಕುಟುಂಬ ಕೊರೋನಾಗೆ ತುತ್ತಾಗಿದೆ. ಮೂರನೇ ಬಾರಿ ಕೊರೋನಾ ಸೋಂಕಿಗೆ ತುತ್ತಾದಾಗ ನನಗೆ ಬಹಳ ಕಷ್ಟವಾಯ್ತು. ನನ್ನ ತಾಯಿ ಹಾಗೂ ಸಹೋದರ ಮಧುಮೇಹದಿಂದ ಬಳಲುತ್ತಿದ್ದಾರೆ. ತಂದೆಗೆ ಹೈಪರ್ ಟೆನ್ಷನ್ ಹಾಗೂ ಕೊಲೆಸ್ಟ್ರಾಲ್ ಇದೆ. ಹೀಗಾಗಿ ಚೂರು ಭಯ ಶುರುವಾಗಿದೆ ಎಂದು ವೈದ್ಯೆ ಹೇಳಿದ್ದಾರೆ. ಸದ್ಯ ಇವರ ಮತ್ತು ಇವರ ಕುಟುಂಬದ ರಕ್ತ, ಸ್ವಾಬ್ ಎಲ್ಲದರ ಉನ್ನತ ಸಂಶೋಧನೆ ಮತ್ತು ಪರೀಕ್ಷೆ ನಡೆಸಲಾಗ್ತಿದೆ.

The post ಕೊರೊನಾ ಬಳಿಕ ಲಸಿಕೆ..ಮತ್ತೆರಡು ಬಾರಿ ಕೊರೊನಾ.. ವೈದ್ಯಲೋಕಕ್ಕೇ ಸವಾಲಾದ ಮುಂಬೈ ವೈದ್ಯೆ ಸೋಂಕು appeared first on News First Kannada.

Source: newsfirstlive.com

Source link