ಜೆಡಿಎಸ್ ಹೊಗಳಿದ ದಿ.ಅನಂತ್​ಕುಮಾರ್ ಪುತ್ರಿ; ರಾಜಕೀಯ ವಲಯದಲ್ಲಿ ಅಚ್ಚರಿ

ಜೆಡಿಎಸ್ ಹೊಗಳಿದ ದಿ.ಅನಂತ್​ಕುಮಾರ್ ಪುತ್ರಿ; ರಾಜಕೀಯ ವಲಯದಲ್ಲಿ ಅಚ್ಚರಿ

ಬೆಂಗಳೂರು: ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ್​ಕುಮಾರ್ ಪುತ್ರಿ ವಿಜೇತಾ ಅನಂತ್​​​ಕುಮಾರ್ ಅವರು ಜೆಡಿಎಸ್​ ಹೊಗಳಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ರಾಜಕೀಯ ವಲಯದಲ್ಲಿ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಕರ್ನಾಟಕ ರಾಜಕಾರಣ ಯಾಕೆ ಇಷ್ಟೊಂದು ಆಸಕ್ತಿದಾಯಕವಾಗಿದೆ ಎಂದು ಪ್ರಶ್ನೆ ಮಾಡಿರುವ ಅವರು, ಜೆಡಿಎಸ್ ಇಂದಿಗೂ ತುಂಬಾನೇ ಸ್ಟ್ರಾಂಗ್ ಆಗಿರುವ ರಾಜಕೀಯ ಪಕ್ಷವಾಗಿದೆ ಎಂದು ಬಣ್ಣಿಸಿದ್ದಾರೆ.

ವಿಜೇತಾ ಅವರ ಟ್ವೀಟ್​ಗೆ ಅಮನ್ ಎನ್ನುವ ಮತ್ತೊಬ್ಬ ಟ್ವಿಟರ್ ಯೂಸರ್​ ಹೌದು.. ಹೌದು ಒಂದು ಅಥವಾ 2 ಲೋಕಸಭೆ ಕ್ಷೇತ್ರದಲ್ಲಿ ಮಾತ್ರ ಎಂದು ರಿಪ್ಲೈ ಮಾಡಿದ್ರು. ಅದಕ್ಕೂ ಉತ್ತರಿಸಿದ ವಿಜೇತಾ.. ಎಲ್ಲವನ್ನೂ ಚುನಾವಣೆಯ ಗೆಲುವಿನ ಮೂಲಕ ಅಳೆಯಲು ಸಾಧ್ಯವಿಲ್ಲ ಎಂದಿದ್ದಾರೆ. ವಿಜೇತ ಅವರ ಈ ಟ್ವೀಟ್​ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಬಹುಶಃ ನಿನ್ನೆಯಷ್ಟೇ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕದ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇವರು ಮೂಲತಹ ಜನತಾ ಪರಿವಾರದಿಂದ ಬಂದವರು. ಹೀಗಾಗಿ ಅವರು ಈ ರೀತಿಯ ಟ್ವೀಟ್ ಮಾಡಿದ್ರಾ ಅನ್ನೋ ಕುತೂಹಲ ಮೂಡಿಸಿದೆ.

ಯಾಕಂದ್ರೆ ರಾಜ್ಯ ಕಂಡ ಅನೇಕ ಮುಖ್ಯಮಂತ್ರಿಗಳ ಹಿನ್ನೆಲೆ ಜನತಾ ಪರಿವಾರವಾಗಿದೆ. ರಾಮಕೃಷ್ಣ ಹೆಗಡೆ, ಎಸ್​​ಆರ್​ ಬೊಮ್ಮಾಯಿ,  ದೇವೇಗೌಡ,  ಜೆಹೆಚ್​ ಪಾಟೀಲ್, ಸಿದ್ದರಾಮಯ್ಯ, ಬಸವರಾಜ್ ಬೊಮ್ಮಾಯಿ ಅವರ ಮೂಲ ರಾಜಕಾರಣ ಜನತಾ ಪರಿವಾರವಾಗಿದೆ. ಇನ್ನು ವಿಜೇತ ಅವರು ಮೂಲತಹ ಬಿಜೆಪಿ ಹಿನ್ನೆಲೆಯುಳ್ಳವರು. ಯಾಕಂದ್ರೆ ಅವರ ತಂದೆ ಅನಂತ್​ಕುಮಾರ್ ಅವರು ಬಿಜೆಪಿ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದವರು. ಇನ್ನು ಅವರ ತಾಯಿ ತೇಜಸ್ವಿನಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ

The post ಜೆಡಿಎಸ್ ಹೊಗಳಿದ ದಿ.ಅನಂತ್​ಕುಮಾರ್ ಪುತ್ರಿ; ರಾಜಕೀಯ ವಲಯದಲ್ಲಿ ಅಚ್ಚರಿ appeared first on News First Kannada.

Source: newsfirstlive.com

Source link