ಒಟಿಟಿಯಲ್ಲಿ ವೀರಪ್ಪನ ಅಟ್ಟಹಾಸ ಸಿನಿಮಾ ರಿಲೀಸ್​ ಮಾಡಿ ₹50ಲಕ್ಷ ವಂಚನೆ : ನಿರ್ದೇಶಕನಿಂದ ಕೇಸ್

ಒಟಿಟಿಯಲ್ಲಿ ವೀರಪ್ಪನ ಅಟ್ಟಹಾಸ ಸಿನಿಮಾ ರಿಲೀಸ್​ ಮಾಡಿ ₹50ಲಕ್ಷ ವಂಚನೆ : ನಿರ್ದೇಶಕನಿಂದ ಕೇಸ್

ಬೆಂಗಳೂರು: ಚಂದನವನದಲ್ಲಿ ವೀರಪ್ಪನ್​ ಅಟ್ಟಹಾಸ ಚಿತ್ರ ಮತ್ತೆ ಸದ್ದು ಮಾಡುತ್ತಿದೆ. 50 ಲಕ್ಷ ರೂ. ವಂಚನೆ ಮಾಡಿರೋದಾಗಿ ಚಿತ್ರ ನಿರ್ದೇಶಕ ಎಎಂಆರ್​ ರಮೇಶ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಚಿತ್ರದ ನಿರ್ಮಾಪಕ, ವಿತರಕ ಮಹೇಶ್ ಕೊಠಾರಿ, ಖಾಸಗಿ ಮನರಂಜನಾ ವಾಹಿನಿ ಮತ್ತು ಡಿಸ್ನಿ ಹಾಟ್ ಸ್ಟಾರ್ ಆ್ಯಪ್ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಒಟಿಟಿಯಲ್ಲಿ ಬಿಡುಗಡೆ ಮಾಡಲು ಅಗ್ರಿಮೆಂಟ್ ಮಾಡಿಸಿ 50 ಲಕ್ಷ ಕೊಡೊದಾಗಿ ಹೇಳಿದ್ದ ವಿತರಕ‌ ಮಹೇಶ್ ಕೊಠಾರಿ, ಡಿಸ್ನಿ ಹಾಟ್​ಸ್ಟಾರ್​ ನಲ್ಲಿ ಸಬ್ ಟೈಟಲ್ ಜೊತೆಗೆ ಸಿನಿಮಾ ಬಿಡುಗಡೆ ಮಾಡಿ 50 ‌ಲಕ್ಷ ವಂಚನೆ ಮಾಡಿದ್ದಾರೆಂದು ನಿರ್ದೇಶಕ ಎಎಂಆರ್​ ರಮೇಶ್​ ಆರೋಪಿಸಿದ್ದಾರೆ.

ನ್ಯಾಷನಲ್ ಅವಾರ್ಡ್​ಗಾಗಿ ಚಿತ್ರಕ್ಕೆ ಸಬ್ ಟೈಟಲ್ ಗಳನ್ನ ಹಾಕಿಸಿದ್ದ ನಿರ್ದೇಶಕ ಹಳೆ ವ್ಯವಹಾರದ ವಿಶ್ವಾಸದ ಮೇಲೆ ಚಿತ್ರದ ಹಾರ್ಡ್ ಡಿಸ್ಕ್​ನ್ನು ನಿರ್ಮಾಪಕ ಮಹೇಶ್​ ಕೊಠಾರಿಗೆ ನೀಡಿದ್ದರು ಎನ್ನಲಾಗಿದೆ.  ನಂತರ ಒಟಿಟಿಯಲ್ಲಿ ಬಿಡುಗಡೆ ಮಾಡಲು ಅಗ್ರಿಮೆಂಟ್ ಮಾಡಿಸಿ 50 ಲಕ್ಷ ಕೊಡೊದಾಗಿ ಹೇಳಿದ್ದ ವಿತರಕ‌ ಮಹೇಶ್ ಕೊಠಾರಿ, ಡಿಸ್ನಿ ಹಾಟ್​ಸ್ಟಾರ್​ ನಲ್ಲಿ ಸಬ್ ಟೈಟಲ್ ಜೊತೆಗೆ ಅನಧಿಕೃತವಾಗಿ ಸಿನಿಮಾ ಬಿಡುಗಡೆ ಮಾಡಿ 50 ‌ಲಕ್ಷ ವಂಚನೆ ಮಾಡಿದ್ದಾರೆಂದು ನಿರ್ದೇಶಕ ಎಎಂಆರ್​ ರಮೇಶ್​ ಆರೋಪಿಸಿದ್ದಾರೆ.

ನಂತರ ಎಎಂಆರ್ ರಮೇಶ್ ಅಭಿಮಾನಿಗಳು ಒಟಿಟಿಯಲ್ಲಿ ಚಿತ್ರ ನೋಡಿ, ವಿಷಯ ತಿಳಿಸಿದ್ದು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಮಹೇಶ್ ಕೊಠಾರಿ, ಖಾಸಗಿ ಮನರಂಜನಾ ವಾಹಿನಿ ಮತ್ತು ಡಿಸ್ನಿ ಹಾಟ್ ಸ್ಟಾರ್ ಆ್ಯಪ್ ವಿರುದ್ಧ 50 ಲಕ್ಷ ವಂಚನೆ ಮಾಡಿರೋದಾಗಿ ದೂರು ದಾಖಲಿಸಿದ್ದಾರೆ.

blank

The post ಒಟಿಟಿಯಲ್ಲಿ ವೀರಪ್ಪನ ಅಟ್ಟಹಾಸ ಸಿನಿಮಾ ರಿಲೀಸ್​ ಮಾಡಿ ₹50ಲಕ್ಷ ವಂಚನೆ : ನಿರ್ದೇಶಕನಿಂದ ಕೇಸ್ appeared first on News First Kannada.

Source: newsfirstlive.com

Source link