ಸಿಎಂ ಬೆಂಗಾವಲು ವಾಹನಕ್ಕೆ ಮಾಜಿ ಸಚಿವ ಹೆಬ್ಬಾರ್​ ಕಾರು ಡಿಕ್ಕಿ

ಸಿಎಂ ಬೆಂಗಾವಲು ವಾಹನಕ್ಕೆ ಮಾಜಿ ಸಚಿವ ಹೆಬ್ಬಾರ್​ ಕಾರು ಡಿಕ್ಕಿ

ಹುಬ್ಬಳ್ಳಿ: ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಕಾರು ಅಪಘಾತಕ್ಕೀಡಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರನ್ನು ಹಿಂಬಾಲಿಸುವ ಭರದಲ್ಲಿ ಅವರ ಕಾರು ಮುಖ್ಯಮಂತ್ರಿ ಬೆಂಗಾವಲು ಪಡೆಯ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯ ಸಂದರ್ಭದಲ್ಲಿ ಶಿವರಾಮ್ ಹೆಬ್ಬಾರ್ ಅವರು ಮುಖ್ಯಮಂತ್ರಿಯವರ ಕಾರಿನಲ್ಲಿದ್ದರು ಎಂದು ವರದಿಯಾಗಿದೆ.

ಇಂದು ನೂತನ ಸಿಎಂ ಕಾರವಾರ ಪ್ರವಾಸಕ್ಕೆ ತೆರಳುತ್ತಿದ್ದು ಸ್ವಾಗತ ಮಾಡಲು ಮಾಜಿ ಸಚಿವ ಶಿವರಾಂ ಹೆಬ್ಬಾರ್​ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ನೂತನ ಸಿಎಂರನ್ನು ಸ್ವಾಗತಿಸಿ ಹೊರಡುವಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇನ್ನು ಅದೃಷ್ಟವಶಾತ್ ಅಪಘಾತ ಸಂದರ್ಭದಲ್ಲಿ ಹೆಬ್ಬಾರ್​ ಸಿಎಂ ಕಾರಿನಲ್ಲಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ನ್ಯೂಸ್​ಫಸ್ಟ್​​ಗೆ ಮಾಹಿತಿ ಲಭ್ಯವಾಗಿದೆ.

The post ಸಿಎಂ ಬೆಂಗಾವಲು ವಾಹನಕ್ಕೆ ಮಾಜಿ ಸಚಿವ ಹೆಬ್ಬಾರ್​ ಕಾರು ಡಿಕ್ಕಿ appeared first on News First Kannada.

Source: newsfirstlive.com

Source link