ಕೇರಳದಲ್ಲಿ ಕೈಮೀರಿದ ಕೊರೊನಾ; ಮತ್ತೆ ಕಂಪ್ಲೀಟ್ ವೀಕೆಂಡ್ ಲಾಕ್​ಡೌನ್

ಕೇರಳದಲ್ಲಿ ಕೈಮೀರಿದ ಕೊರೊನಾ; ಮತ್ತೆ ಕಂಪ್ಲೀಟ್ ವೀಕೆಂಡ್ ಲಾಕ್​ಡೌನ್

ತಿರುವನಂತಪುರಂ: ಕೇರಳದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಕರಣ ಏರಿಕೆಯಾಗಿದ್ದು, ಮತ್ತೆ ಕಂಪ್ಲೀಟ್ ವೀಕೆಂಡ್ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಆಘಾತಕಾರಿ ರೀತಿಯಲ್ಲಿ ಪ್ರಕರಣ ಏರಿಕೆ ಆಗುತ್ತಿರೋದ್ರಿಂದ ಕೇಂದ್ರ ಸರ್ಕಾರ ಕೇರಳಕ್ಕೆ ತಜ್ಞರ ತಂಡವನ್ನ ಕಳುಹಿಸಿದೆ.

ಕೊರೊನಾ ನಿಯಂತ್ರಣಕ್ಕಾಗಿ ಮತ್ತೆ ವೀಕೆಂಡ್ ಕರ್ಫ್ಯೂ ಹೇರಲಾಗಿದೆ. ಜುಲೈ 31 ರಿಂದ ಆಗಸ್ಟ್ 1 (ಶನಿವಾರ ಮತ್ತು ಭಾನುವಾರ) ವರೆಗೆ ಅಂದರೆ ಎರಡು ದಿನ ಕೇರಳ ಸಂಪೂರ್ಣ ಸ್ತಬ್ಧವಾಗಲಿದೆ.
ಅಲ್ಲದೇ ಕೇಂದ್ರ ಸರ್ಕಾರದಿಂದ 6 ಮಂದಿ ನೇತೃತ್ವದ ತಂಡ ಕಳುಹಿಸಲಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್​ನ ಅಧಿಕಾರಿಗಳನ್ನ ಕಳುಹಿಸಲಾಗಿದೆ ಅಂತಾ ಕೇಂದ್ರ ಆರೋಗ್ಯ ಸಚಿವ ಮನ್ಷುಕ್ ಮಂಡವಿಯಾ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಮ್ಮ ಕೋವಿಡ್ ಮ್ಯಾನೇಜ್ಮೆಂಟ್ ಟೀಂ ತೆರಳಿ ಕೊರೊನಾ ಕಂಟ್ರೋಲ್ ಮಾಡಲು ಪ್ರಯತ್ನ ಮಾಡಲಿದೆ ಎಂದಿದ್ದಾರೆ.

ದಿನೇ ದಿನೆ ಪ್ರಕರಣ ಸಂಖ್ಯೆ ಮಿತಿ ಮೀರುತ್ತಿರೋದ್ರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಈ ಸಾಂಕ್ರಾಮಿಕ ಕಾಯಿಲೆಯ ಗೈಡ್​ಲೈನ್ಸ್​ ಅನ್ನ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಸೂಪರ್ ಸ್ಪ್ರೆಡರ್ ಇವೆಂಟ್ಸ್ ಗಳನ್ನ ಮಾಡಬಾರದು ಎಂದು ತಿಳಿಸಿದ್ದಾರೆ.

ಅಂದ್ಹಾಗೆ ನಿನ್ನೆ ಒಂದೇ ದಿನ ಕೇರಳದಲ್ಲಿ 22056 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದುವರೆಗೆ 33,27,301 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಮೃತಪಟ್ಟವರ ಸಂಖ್ಯೆ 16,457ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ ನಿನ್ನೆ 43509 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ ಅರ್ಧದಷ್ಟು ಪ್ರಕರಣ ಕೇರಳದಲ್ಲಿಯೇ ಇದೆ.

The post ಕೇರಳದಲ್ಲಿ ಕೈಮೀರಿದ ಕೊರೊನಾ; ಮತ್ತೆ ಕಂಪ್ಲೀಟ್ ವೀಕೆಂಡ್ ಲಾಕ್​ಡೌನ್ appeared first on News First Kannada.

Source: newsfirstlive.com

Source link