ಭಲೇ ಆಟ..! ಮಂಜು-ಅರವಿಂದ್​ಗೆ ಶುರುವಾಗಿದೆ ಫಿನಾಲೆ ಟೆನ್ಷನ್

ಭಲೇ ಆಟ..! ಮಂಜು-ಅರವಿಂದ್​ಗೆ ಶುರುವಾಗಿದೆ ಫಿನಾಲೆ ಟೆನ್ಷನ್

ಬಿಗ್​ಬಾಸ್ ಮನೆಯಲ್ಲಿ ಫಿನಾಲೆ ಟೆನ್ಷನ್ ಇದ್ದರೂ ಕೂಡ ಒಬ್ಬರಿಗೊಬ್ಬರು ಕಾಲ ಎಳ್ಕೊಂಡು ಪ್ರತಿ ಕ್ಷಣ ಎಂಜಾಯ್​ ಮಾಡ್ತಿದ್ದಾರೆ. ಇನ್ನೂ ಎಂಜಾಯ್​ಮೆಂಟ್​ ನಡುವೆ ಕೆಲ ಗಂಭಿರ ವಿಚಾರಗಳ ಬಗ್ಗೆ ಕೂಡ ಸದಸ್ಯರು ಅಭಿಪ್ರಾಯ ಹೊರ ಹಾಕ್ತಿದ್ದಾರೆ. ನಿನ್ನೆಯ ಎಪಿಸೋಡ್​ ನೋಡೋದಾದ್ರೆ ಬಿಗ್​ ಬಾಸ್​ ಪ್ರಶಾಂತ್​ಗೆ ಒಂದು ಟಾಸ್ಕ್​ ನೀಡಿದ್ರು, ಅವರಿಗೇನೇ ಪ್ರತಿಸ್ಪರ್ಧಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕೂಡ ನೀಡಿದ್ದರು. ಆಗ ಪ್ರಶಾಂತ್​ ಶಮಂತ್​ನನ್ನು ಆಯ್ಕೆ ಮಾಡಿಕೊಂಡಿದ್ರು.

blank

ಈ ಟಾಸ್ಕ್​ ಪ್ರಕಾರ ಮಡಕೆಯನ್ನ ಕೇಳಗೆ ಬೀಳಿಸದಂತೆ ಬ್ಯಾಲೆನ್ಸ್​ ಮಾಡಬೇಕಿತ್ತು, ಯಾರು ಮೊದಲು ಕೇಳಗೆ ಬೀಳಿಸುತ್ತಾರೋ ಅವರು ಔಟ್​ ಎಂಬ ನಿಯಮ ಇರುತ್ತೆ. ಟಾಸ್ಕನ್ನು ಇಬ್ಬರು ಸಖತ್ತಾಗಿಯೇ ಆಡುತ್ತಾರೆ. ಮೂರುವರೆ ಗಂಟೆ ಮಡಿಕೆ ಹಿಡಿದು ನಿಲ್ಲೋದು ಅಂದ್ರೆ ಸುಮ್ನೇನಾ..? ಈ ಟಾಸ್ಕ್​ನಲ್ಲಿ ಶಮಂತ್​ ವಿನ್​ ಆದರು ಬಿಡಿ.

ನೀನಾ, ನಾನಾ?
ಆದರೆ ಇಲ್ಲಿ ಟಾಸ್ಕ್​ಕಿಂತ ಇಂಪಾರ್ಟಂಟ್​ ವಿಷ್ಯ ಇದೆ. ಅದೆನಂದರೆ ಟಾಸ್ಕ್​ ನಡೆಯುವಾಗ ಮಂಜು, ಅರವಿಂದ್​ ನಡುವೆ ಮಾತುಕತೆ ನಡೆಯುತ್ತಿರುತ್ತದೆ. ಆಗ ಮಂಜು, ಡೇ ಒನ್​ನಿಂದ ಇವರು ಹಿಂಗೆ ಆಡಿದ್ರೆ ನಮ್ಮ ಎಫರ್ಟ್​ ಎಷ್ಟಿರಬೇಕಿತ್ತು ಗುರು ಅಂತಾ ಯೋಚ್ನೆ ಮಾಡ್ತೀದ್ದಿನಿ. ಇಷ್ಟು ಎನರ್ಜಿ ಇಟ್ಕೊಂಡು ಯಾಕ್​ ಆಡ್ಲಿಲ್ಲ ಇವರು. ಬೇರೆಯವರು ಆಡ್ಲಿ, ನಾವು ಯಾಕೆ ಆಡೋದು ಅನ್ನೋ ತಾತ್ಸಾರಾ ಇತ್ತಾ ಅಂತಾರೆ. ಇದಕ್ಕೆ ಅರವಿಂದ್​, ಒಂದು ರೀತಿಯ ಸನ್ನೆ ಮಾಡ್ತಾ ಆಗ ಹೆದ್ರಿರ್ತಿದ್ರು. ಬೇರೆಯವರು ಆಡ್ತಾರೆ ಬಿಡು ಅಂತಾ ಇನ್ನೋಬ್ಬರ ತೆಲೆಮೇಲೆ ಹಾಕ್ತಿದ್ರು ಎಂದು ಹೇಳ್ತಾರೆ.

blank

ಇಲ್ಲಿ ಸೂಕ್ಷ್ಮವಾಗಿ ನೋಡಿದ್ರೆ ಕೆಲ ಸದಸ್ಯರು ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ತುಂಬಾ ಚೆಂಜ್​ ಆಗಿದ್ದಾರೆ. ಇನ್ನು ಫಿನಾಲೆ ಹತ್ತಿರ ಬರುತ್ತಿದ್ದಂತೆ ಪರ್ಫಾರ್ಮೆನ್ಸ್ ಬಗ್ಗೆ ತಲೆಕೆಡಸಿಕೊಳ್ತಿದ್ದಾರೆ ಅನ್ನೋದು ಬಿಗ್​ ಮನೆಯ ಹಲವು ಸದಸ್ಯರ ಅಭಿಪ್ರಾಯವಾಗಿದೆ.

ಇತ್ತ ಸೋಶಿಯಲ್​ ಮಿಡಿಯಾದಲ್ಲಿ ಫ್ಯಾನ್ಸ್​ಗಳ ಅಬ್ಬರ ಜೋರಾಗಿಯೇ ಇದೆ. ಎಲ್ಲರೂ ತಮ್ಮ ನೆಚ್ಚಿನ ಕಂಟೆಸ್ಟೆಂಟ್​​ಗಳು ಗೆಲ್ಲಬೇಕು ಎಂದು ಫ್ಯಾನ್​ ವಾರ್​ ಕೂಡ ಮಾಡ್ತಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸುವ ಬಿಗ್​ ಬಾಸ್​ ಶೋ ಟ್ರೋಫಿ ಯಾರ ಕೈಸೇರಲಿದೆ ಎಂಬುದನ್ನು ಕಮೆಂಟ್​ ಮಾಡಿ.

The post ಭಲೇ ಆಟ..! ಮಂಜು-ಅರವಿಂದ್​ಗೆ ಶುರುವಾಗಿದೆ ಫಿನಾಲೆ ಟೆನ್ಷನ್ appeared first on News First Kannada.

Source: newsfirstlive.com

Source link