ನಾಯಿ ಮರಿ ಜಗಳ; ಪೊಲೀಸ್​ ಠಾಣೆ ಮೆಟ್ಟಿಲೇರಿದ ಎಂಎಲ್​ಸಿ ಆಪ್ತ ಕಾರ್ಯದರ್ಶಿ!

ನಾಯಿ ಮರಿ ಜಗಳ; ಪೊಲೀಸ್​ ಠಾಣೆ ಮೆಟ್ಟಿಲೇರಿದ ಎಂಎಲ್​ಸಿ ಆಪ್ತ ಕಾರ್ಯದರ್ಶಿ!

ಬೆಂಗಳೂರು: ನಾವು ಗಂಡ – ಹೆಂಡತಿಯರ ಜಗಳಕ್ಕೊ, ಅತ್ತೆ ಸೊಸೆ ಜಗಳಕ್ಕೊ ಅಥವಾ ಇನ್ನ್ಯಾವುದೋ ಕಾರಣಕ್ಕಾಗಿ ಜನ ಪೊಲೀಸ್​ ಠಾಣೆ ಹತ್ತುವದನ್ನ ನೋಡ್ತಿವಿ ಆದರೆ ಇಲ್ಲಿ ವಿಚಿತ್ರವೆಂಬಂತೆ ನಾಯಿ‌ ಮರಿ ವಿಚಾರಕ್ಕೆ ಕೇಸೊಂದು ದಾಖಲಾದ ಘಟನೆ ಹೆಣ್ಣೂರಿನಲ್ಲಿ ನಡೆದಿದೆ.

ಹೌದು ನಾಯಿ‌ ಮರಿ ಕಿವಿ ವಿರೂಪಗೊಳಿಸಿದ್ದಾರೆಂದು ಪ್ರಭಾವಿ ನಾಯಕರ ಆಪ್ತ ಕಾರ್ಯದರ್ಶಿಯೊಬ್ಬರು ಪೊಲೀಸ್​ ಠಾಣೆ ಮೇಟ್ಟಿಲೇರಿದ್ದಾರೆ. ಎಂಎಲ್ ಸಿ ಹೆಚ್.ಎಂ ರಮೇಶ್ ಗೌಡ ಆಪ್ತ ಕಾರ್ಯದರ್ಶಿ ರೇವಣ ಸಿದ್ದಪ್ಪ ಎಂಬುವವರಿಂದ ದೂರು ದಾಖಲಾಗಿದೆ.

ರೇವಣ್ಣ ಸಿದ್ದಪ್ಪ, ಸತೀಶ್ ಎಂಬುವವರಿಂದ ಕಳೆದ ಮೇ ತಿಂಗಳಿನಲ್ಲಿ ನಾಯಿಮರಿ ಖರೀದಿಸಿದ್ದರಂತೆ. ಕಕೇಶಿಯನ್ ಶಫರ್ಡ್ ತಳಿಯ 2 ತಿಂಗಳ ನಾಯಿ ಮರಿಯನ್ನು ಖರೀದಿಸಿದ್ದಾರೆ.

ಇನ್ನು ನಾಯಿಮರಿಗೆ ವ್ಯಾಕ್ಸಿನ್ ಹಾಕಿಸ ಬೇಕು ಅಂತಾ ಹೇಳಿ ತನ್ನ ಕೆಲಸಗಾರನಿಂದ ಸತೀಶ್ ನಾಯಿ ಮರಿಗಳನ್ನು ತರಿಸಿಕೊಂಡಿದ್ದರಂತೆ. ನಂತರ ಮೂರು ದಿನಗಳ ಬಳಿಕ ನಾಯಿಮರಿ ವಾಪಸ್ ನೀಡಿದ್ರಂತೆ ಸತೀಶ್. ವಾಪಸ್ಸ ನೀಡುವಾಗ ನಾಯಿಮರಿ ಕಿವಿಗಳು ವಿರೂಪಗೊಂಡಿದ್ದವು ಎಂದು ಆರೋಪಿಸಿರುವ ರೇವಣ ಸಿದ್ದಪ್ಪ ನಾಯಿ ಮರಿ ತೆಗೆದುಕೊಂಡು ಹೋಗಿ ಯಾಮಾರಿಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ.

The post ನಾಯಿ ಮರಿ ಜಗಳ; ಪೊಲೀಸ್​ ಠಾಣೆ ಮೆಟ್ಟಿಲೇರಿದ ಎಂಎಲ್​ಸಿ ಆಪ್ತ ಕಾರ್ಯದರ್ಶಿ! appeared first on News First Kannada.

Source: newsfirstlive.com

Source link