ಸಹೋದರಿ ವಿಜೇತಾ ಅನಂತ್​ಕುಮಾರ್​ಗೆ ನಾನು ಚಿರಋಣಿ -ಕುಮಾರಸ್ವಾಮಿ

ಸಹೋದರಿ ವಿಜೇತಾ ಅನಂತ್​ಕುಮಾರ್​ಗೆ ನಾನು ಚಿರಋಣಿ -ಕುಮಾರಸ್ವಾಮಿ

ಬೆಂಗಳೂರು: ವಿಜೇತಾ ಅನಂತ್​ಕುಮಾರ್​ ಅವರಿಗೆ ನಾನು ಚಿರಋಣಿ ಆಗಿರುತ್ತೇನೆ ಅಂತಾ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ವಿಜೇತಾ ಅನಂತ್​ಕುಮಾರ್​ ಅವರು ಜೆಡಿಎಸ್ ಪರ ಟ್ವಿಟರ್​ನಲ್ಲಿ ಬ್ಯಾಟ್ ಮಾಡಿದ್ದರು. ಇದಕ್ಕೆ ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ ಮಾಜಿ ಸಿಎಂ.. ವಿಜೇತಾ ಹೇಳಿಕೆಯಿಂದ ನನಗೆ ಸಂತೋಷವಾಗಿದೆ. ಅವರ ಈ ರೀತಿಯ ಹೇಳಿಕೆಗೆ ನಾನು ನನ್ನ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅದಕ್ಕೆಲ್ಲ ಕಾರಣ ನನ್ನ ಪಕ್ಷದ ಕಾರ್ಯಕರ್ತರು. ಜೆಡಿಎಸ್​ ಬಗ್ಗೆ ಲಘುವಾಗಿ ಮಾತನಾಡುವವರು ಬಗ್ಗೆ.., ಆ ಸಹೋದರಿ ಪಕ್ಷದ ಬಗ್ಗೆ ಕೊಟ್ಟಿರುವ ಅಭಿಪ್ರಾಯಕ್ಕೆ ಹೆಣ್ಣುಮಗಳಿಗೆ ಚಿರಋಣಿಯಾಗಿರುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಹೊಗಳಿದ ದಿ.ಅನಂತ್​ಕುಮಾರ್ ಪುತ್ರಿ; ರಾಜಕೀಯ ವಲಯದಲ್ಲಿ ಅಚ್ಚರಿ 

ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ವಿಜೇತಾ.. ಕರ್ನಾಟಕ ರಾಜಕಾರಣ ಯಾಕೆ ಇಷ್ಟೊಂದು ಆಸಕ್ತಿದಾಯಕವಾಗಿದೆ ಎಂದು ಪ್ರಶ್ನೆ ಮಾಡಿರುವ ಅವರು, ಜೆಡಿಎಸ್ ಇಂದಿಗೂ ತುಂಬಾನೇ ಸ್ಟ್ರಾಂಗ್ ಆಗಿರುವ ರಾಜಕೀಯ ಪಕ್ಷವಾಗಿದೆ ಎಂದು ಬಣ್ಣಿಸಿದ್ದಾರೆ.

The post ಸಹೋದರಿ ವಿಜೇತಾ ಅನಂತ್​ಕುಮಾರ್​ಗೆ ನಾನು ಚಿರಋಣಿ -ಕುಮಾರಸ್ವಾಮಿ appeared first on News First Kannada.

Source: newsfirstlive.com

Source link