ಕಾರಗೃಹದಲ್ಲಿರಿಸಿದ ಬಂಧಿತನ ಮೇಲೆ ಸಹ ಕೈದಿಗಳಿಂದ ಹಲ್ಲೆ: ಸಂಬಧಿಕರಿಂದ ಪ್ರತಿಭಟನೆ

ಕಾರಗೃಹದಲ್ಲಿರಿಸಿದ ಬಂಧಿತನ ಮೇಲೆ ಸಹ ಕೈದಿಗಳಿಂದ ಹಲ್ಲೆ: ಸಂಬಧಿಕರಿಂದ ಪ್ರತಿಭಟನೆ

ಶಿವಮೊಗ್ಗ: ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿರಿಸಿದ ಬಂಧಿತನ ಮೇಲೆ ಕೈದಿಗಳ ಗುಂಪೊಂದು ಹಲ್ಲೆ ಮಾಡಿದ ಹಲ್ಲೆ ಮಾಡಿದ ಘಟನೆ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

blank

ಸಲ್ಮಾನ್ ಖಾನ್ (24) ಹಲ್ಲೆಗೊಳಗಾದ ಬಂಧಿತ. ವಿವಿಧ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾ ನಗರ ಪೊಲೀಸರು ನಿನ್ನೆ ಸಲ್ಮಾನ್​ನನ್ನು ಬಂಧಿಸಿದ್ದಾರೆ. ಈ ವೇಳೆಯಲ್ಲಿ ಅಲ್ಲಿಯೇ ಇದ್ದ ಇನ್ನೊಂದು ಕೈದಿಗಳ ಗುಂಪು ಸಲ್ಮಾನ್​ ಮೇಲೆ ಹಠಾತ್​ ಹಲ್ಲೆ ಮಾಡಿದೆ ಎನ್ನಲಾಗಿದೆ. ಹಳೆ ದ್ವೇಷದ ಮೇಲೆ ಖೈದಿಗಳು ಸಲ್ಮಾನ್​ ಮೇಲೆ ದಾಳಿ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

blank

ಇನ್ನು ಹಲ್ಲೆಯ ಸುದ್ದಿ ತಿಳಿದ ಸಲ್ಮಾನ್​ ಸಂಬಂಧಿಕರು ಕಾರಗೃಹಕ್ಕೆ ದೌಡಾಯಿಸಿದ್ದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಸಲ್ಮಾನ್​ ತಾಯಿ ಹಲ್ಲೆ ಕುರಿತು ಎಸ್ಪಿ ಕಚೇರಿಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸುದ್ದಿ ತಿಳಿದು ಕಾರಾಗೃಹಕ್ಕೆ ಆಗಮಿಸಿದ ತುಂಗಾ ನಗರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

blank

The post ಕಾರಗೃಹದಲ್ಲಿರಿಸಿದ ಬಂಧಿತನ ಮೇಲೆ ಸಹ ಕೈದಿಗಳಿಂದ ಹಲ್ಲೆ: ಸಂಬಧಿಕರಿಂದ ಪ್ರತಿಭಟನೆ appeared first on News First Kannada.

Source: newsfirstlive.com

Source link