ಚೀನಾ ಕಮ್ಯುನಿಸ್ಟ್ ಪಾರ್ಟಿ ಶತಮಾನೋತ್ಸವದಲ್ಲಿ ಭಾರತದ ಕಮ್ಯುನಿಸ್ಟ್​​ ನಾಯಕರು ಭಾಗಿ; ಬಿಜೆಪಿ ಆಕ್ರೋಶ

ಚೀನಾ ಕಮ್ಯುನಿಸ್ಟ್ ಪಾರ್ಟಿ ಶತಮಾನೋತ್ಸವದಲ್ಲಿ ಭಾರತದ ಕಮ್ಯುನಿಸ್ಟ್​​ ನಾಯಕರು ಭಾಗಿ; ಬಿಜೆಪಿ ಆಕ್ರೋಶ

ಭಾರತದ ಗಡಿಭಾಗದಲ್ಲಿ ನೆರೆ ದೇಶಗಳ ಅಟ್ಟಹಾಸ ಹೆಚ್ಚುತ್ತಲೇ ಇದೆ. ಎಲ್​ಒಸಿಯಲ್ಲಿ ಪಾಕಿಸ್ತಾನ ಮತ್ತು ಚೀನಾ ಪದೇಪದೇ ಕಾಲು ಕೆರೆದು ಜಗಳಕ್ಕೆ ಬರ್ತಾನೆ ಇವೆ. ಸುಮಾರು ದಶಕಗಳಿಂದ ಒಂದೆಡೆ ಪಾಕಿಸ್ತಾನ ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿದರೆ, ಇನ್ನೊಂದೆಡೆ ಚೀನಾ ದೇಶ ಲಡಾಖ್​ನ ಎಲ್​ಎಸಿಯಲ್ಲಿ ಭಾರತದ ಭೂಭಾಗವನ್ನೇ ಅತಿಕ್ರಮಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಚೀನಾದ ವಿರುದ್ಧವಂತೂ ಭಾರತ ಸದಾ ಎಚ್ಚರಿಕಾ ಹೆಜ್ಜೆಯಿಡುತ್ತಲೇ ಇರುತ್ತದೆ. ಇಂತಹ ಹೊತ್ತಲ್ಲೇ ಕಮ್ಯೂನಿಸ್ಟ್ ಪಾರ್ಟಿ ಆಫ್​ ಚೀನಾದ ಶತಮಾನೋತ್ಸವದ ಸಮಾರಂಭದಲ್ಲಿ ಭಾರತ ಕಮ್ಯನಿಸ್ಟ್​ ನಾಯಕರು ಭಾಗಿಯಾಗಿರುವುದು ಭಾರೀ ವಿವಾದಕ್ಕೀಡಾಗಿದೆ.

blank

ಹೌದು, ಇತ್ತೀಚೆಗೆ ಚೀನಾದ ಕಮ್ಯೂನಿಸ್ಟ್ ಪಾರ್ಟಿ ಆಫ್​ ಚೀನಾ ಸ್ಥಾಪನೆಯಾಗಿ 100 ವರ್ಷಗಳು ಕಳೆದಿವೆ. ಇದರ ಭಾಗವಾಗಿ ನಡೆದ ಕಮ್ಯೂನಿಸ್ಟ್ ಪಾರ್ಟಿ ಆಫ್​ ಚೀನಾದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕಮ್ಯುನಿಸ್ಟ್​ ಪಾರ್ಟಿ ಆಫ್​​ ಇಂಡಿಯಾ (ಮಾರ್ಕ್ಸಿಸ್ಟ್)​ ಪ್ರಧಾನ ಕಾರ್ಯದರ್ಶಿ ಸೀತಾರಾಮ್​​ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜ ಭಾಗಿಯಾಗಿದ್ದಾರೆ. ಕಮ್ಯುನಿಸ್ಟ್​​ ನಾಯಕರ ಈ ನಡೆ ವಿರುದ್ಧ ಬಿಜೆಪಿ ನಾಯಕರು ಈಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಲವು ಸುತ್ತಿನ ಮಾತುಕತೆ ಸಫಲ.. ಗಡಿಯಲ್ಲಿ ಸೇನೆ ಹಿಂತೆಗೆತ; ಚೀನಾ ಘೋಷಣೆ

ಇನ್ನು, ಒಂದೆಡೆ ಬಿಜೆಪಿ ನಾಯಕರು ಕಮ್ಯುನಿಸ್ಟ್​ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಎರಡು ದೇಶಗಳ ನಡುವೆ ಬೆಂಕಿ ಹೊತ್ತಿ ಉರಿಯುತ್ತಿರುವಾಗ ಕಮ್ಯೂನಿಸ್ಟ್ ಪಾರ್ಟಿ ಆಫ್​ ಚೀನಾದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸೀತಾರಾಮ್​​ ಯೆಚೂರಿ, ಡಿ. ರಾಜ ಭಾಗಿಯಾದದ್ದು ಎಷ್ಟು ಸರಿ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

The post ಚೀನಾ ಕಮ್ಯುನಿಸ್ಟ್ ಪಾರ್ಟಿ ಶತಮಾನೋತ್ಸವದಲ್ಲಿ ಭಾರತದ ಕಮ್ಯುನಿಸ್ಟ್​​ ನಾಯಕರು ಭಾಗಿ; ಬಿಜೆಪಿ ಆಕ್ರೋಶ appeared first on News First Kannada.

Source: newsfirstlive.com

Source link