ವಾಟ್ಸಾಪ್​ಗೂ ಕಾಲಿಟ್ಟಿದೆ ಹನಿಟ್ರ್ಯಾಪ್​ ಟೀಂ; ಹನಿಗಾಗಿ ಆಸೆ ಪಟ್ರೆ ಮನಿ, ಮಾನ ಎರಡೂ ಗಾನ್

ವಾಟ್ಸಾಪ್​ಗೂ ಕಾಲಿಟ್ಟಿದೆ ಹನಿಟ್ರ್ಯಾಪ್​ ಟೀಂ; ಹನಿಗಾಗಿ ಆಸೆ ಪಟ್ರೆ ಮನಿ, ಮಾನ ಎರಡೂ ಗಾನ್

ಬೆಂಗಳೂರು: ಹನಿಟ್ರ್ಯಾಪ್​ ಡಿಜಿಟಲ್​ ದುನಿಯಾದ ಡಿಜಿಟಲ್​ ವಂಚನೆ. ಮೊದಲು ಫೇಸ್​ಬುಕ್​ ಮೂಲಕ ಹನಿಟ್ರ್ಯಾಪ್​ ಮಾಡಿ ದೋಖಾ ಮಾಡ್ತಿದ್ದ ದಂಧೆ ಈಗ ಒಂಚೂರು ಅಡ್ವಾನ್ಸ್​ ಆಗಿ ವಾಟ್ಸ್ಯಾಪ್​ಗೂ ಕಾಲಿಟ್ಟಿದೆ. ಫೇಸ್ ಬುಕ್ ಆಯ್ತೂ ಈಗ ವಾಟ್ಸಪ್ ನಲ್ಲೂ ಶುರುವಾಯ್ತು ಹನಿಟ್ರ್ಯಾಪ್​.

ವಾಟ್ಸಪ್ ನಲ್ಲಿ ಅಪರಿಚಿತರ ಜೊತೆ ಚಿಟ್​ ಚಾಟ್ ಮಾಡೋರು ಸ್ವಲ್ಪ ಹುಷಾರಾಗ್ಲೆಬೇಕು ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಇದೀಗ ಸಿಲಿಕಾನ್ ಸಿಟಿಯಲ್ಲಿ ಌಕ್ಟಿವ್​ ಆಗಿದೆ ಆನ್​ಲೈನ್​ ರೋಲ್​ಕಾಲ್​ ಟೀಂ.  ಸೆಕ್ಸ್ ಚಾಟ್ ಮಾಡ್ತಾ ಮಾಡ್ತಾ ಬುಟ್ಟಿಗೆ ಬೀಳಿಸ್ಕೊಳ್ತಾರೆ, ನಂತರ ಯಾಮಾರಿ ಏನಾದ್ರು ಚಾಟ್ ಮಾಡಿದ್ರೆ ಖೇಲ್ ಖತಂ ನಾಟಕ್ ಬಂದ್. ಮೊದ್ಲು ಟೆಕ್ಸ್ಟು ನಂತ್ರ ವಾಟ್ಸಪ್ ವೀಡಿಯೋ ಕಾಲ್ ನಲ್ಲೇ ನಗ್ನಳಾಗ್ತಾಳೆ ಯುವತಿ.

ಅಪ್ಪಿ ತಪ್ಪಿ ತಾವೂ ಅರೆಬೆತ್ತಲಾದ್ರೆ ಮುಗೀತು ಅದೇ ಫೋಟೋ ದಿಂದ, ಅವತ್ತಿನ ದಿನದಿಂದ ಆಗುತ್ತೆ ಸುಲಿಗೆ. ನಿಮ್ಮ ವಿವಸ್ತ್ರದ ವೀಡಿಯೋ ಇಟ್ಟುಕೊಂಡೇ ಹಣ ಪೀಕೋಕೆ ಶುರು ಮಾಡಿ ಬಿಡತ್ತೆ ನಟೋರಿಯಸ್​ ಗ್ಯಾಂಗ್​.

blank

ಹೌದು ನಮ್ಮ ನಂಬರ್​ನ್ನು ಪತ್ತೆ ಮಾಡಿ, ಚಾಟ್​ ಮಾಡುತ್ತಾ ಸಲಿಗೆ ಬೆಳೆಸೋ ಗುಂಪೊಂದು ನಂತರ ಬೆತ್ತಲೆ ವಿಡಿಯೋ ಕಾಲ್​ ಮಾಡಿ, ನಮ್ಮನ್ನು ವಿವಸ್ತ್ರಗೊಳಿಸಿ ವಿಡಿಯೋ ರೇಕಾರ್ಡ್​ ಮಾಡಿಕೊಂಡು ಬ್ಲಾಕ್​ಮೇಲ್​ ಮಾಡೋ ಪ್ರಕರಣಗಳು ಹೆಚ್ಚಾಗ್ತಿವೆ.
ಇನ್ನೇನಾದರು ಅವರು ಡಿಮ್ಯಾಂಡ್​ ಮಾಡಿದಷ್ಟು ಹಣ ಕೊಡಲಿಲ್ಲವೆಂದರೆ ಫೇಸ್​ಬುಕ್​ನಲ್ಲಿ ವಿಡಿಯೋ ಹರಿ ಬಿಡುವದಾಗಿ ಹೆದರಿಸ್ತಾರೆ.

ಈ ಕುರಿತು ಅಲ್ಲಲ್ಲಿ ಅನೇಕ ಪ್ರಕರಣಗಳು ನಗರದಾದ್ಯಂತ ದಾಖಲಾಗಿವೆ. ಆದರೆ ಮರ್ಯಾದೆಗೆ ಅಂಜಿ ದೂರು ಕೊಡದವರ ಸಂಖ್ಯೆಯು ಇನ್ನು ದೊಡ್ಡದಿದೆ ಎಂಬ ಅನುಮಾನ ವ್ಯಕ್ತವಾಗ್ತಿದೆ ಎಂದು ಹೇಳಲಾಗ್ತಿದೆ. ಯಾವುದಕ್ಕು ಇಂತಹ ಖತರನಾಕ್​ ಟೀಂನಿಂದ ನಾವು ಸ್ವಲ್ಪ ಅಲರ್ಟ ಆಗಿರೋದು ಉತ್ತಮ. ಈ ಕುರಿತು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ತೀವ್ರ ಕಳವಳ ವ್ಯಕ್ತಪಡಿಸಿದ್ದು ಮೊಬೈಲ್​ ಬಳುಸುವಾಗ ಎಚ್ಚರಿಕೆಯಿಂದಿರಲು ಸೂಚಿಸಿದ್ದಾರೆ.

The post ವಾಟ್ಸಾಪ್​ಗೂ ಕಾಲಿಟ್ಟಿದೆ ಹನಿಟ್ರ್ಯಾಪ್​ ಟೀಂ; ಹನಿಗಾಗಿ ಆಸೆ ಪಟ್ರೆ ಮನಿ, ಮಾನ ಎರಡೂ ಗಾನ್ appeared first on News First Kannada.

Source: newsfirstlive.com

Source link