ಜಗದೀಶ್​ ಶೆಟ್ಟರ್​​ ನನ್ನ ಸ್ನೇಹಿತ; ಮಾಜಿ ಸಿಎಂ ಮುನಿಸಿಗೆ ತೆರೆ ಎಳೆದ ಬೊಮ್ಮಾಯಿ

ಜಗದೀಶ್​ ಶೆಟ್ಟರ್​​ ನನ್ನ ಸ್ನೇಹಿತ; ಮಾಜಿ ಸಿಎಂ ಮುನಿಸಿಗೆ ತೆರೆ ಎಳೆದ ಬೊಮ್ಮಾಯಿ

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್​​ ಶೆಟ್ಟರ್​​​ ನನ್ನ ಆತ್ಮೀಯ ಸ್ನೇಹಿತ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ್​​ ಬೊಮ್ಮಾಯಿ ಇಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆದಿದ್ದಾರೆ. ನಾನು ಸಿಎಂ ಬಸವರಾಜ್​​ ಬೊಮ್ಮಾಯಿ ನೇತೃತ್ವದ ಸಂಪುಟ ಸೇರೋದಿಲ್ಲ ಎಂದು ಮಾಜಿ ಸಿಎಂ ಜಗದೀಶ್​​ ಶೆಟ್ಟರ್​​​​ ಇತ್ತೀಚೆಗೆ​ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೀಗ ಜಗದೀಶ್​​ ಶೆಟ್ಟರ್​​ ಜೊತೆಗಿನ ಸ್ನೇಹದ ಕುರಿತು ಸಿಎಂ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

ಈ ಸಂಬಂಧ ಮಾತಾಡಿದ ಬಸವರಾಜ್​​ ಬೊಮ್ಮಾಯಿ, ನಾನು ಇನ್ನೂ ರಾಜಕೀಯಕ್ಕೆ ಬಂದೇ ಇರಲಿಲ್ಲ. ಅಂದಿನಿಂದ ಜಗದೀಶ್​​ ಶೆಟ್ಟರ್​​ ಉತ್ತಮ ಸ್ನೇಹಿತರು. ಬೇರೆ ಪಕ್ಷದಲ್ಲಿದ್ದಾಗಲು ನನ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಹೇಳಿದರು.
ಇನ್ನು, ಜಗದೀಶ್​ ಶೆಟ್ಟರ್​​ ಜೊತೆಗೆ ಫೋನಿನಲ್ಲಿ ಮಾತಾಡಿದ್ದೇನೆ. ಫೋನಿನಲ್ಲಿ ಅವರ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇನ್ನೊಮ್ಮೆ ಖುದ್ದಾಗಿ ಭೇಟಿ ಮಾಡಿ ನಾನೇ ಜಗದೀಶ್​ ಶೆಟ್ಟರ್​​ ಜತೆ ಮಾತಾಡುತ್ತೇನೆ ಎಂದರು ಬಸವರಾಜ್​​ ಬೊಮ್ಮಾಯಿ.

ಇದನ್ನೂ ಓದಿ: ವಾಟ್ಸ್​​ಆ್ಯಪ್​ ಸೇಫ್​ ಅಂದುಕೊಂಡಿದ್ದೀರಾ? ಖಂಡಿತ ಇಲ್ಲ; ಯಾಕೇ ಗೊತ್ತೇ?

ಹುಬ್ಬಳ್ಳಿ ನನ್ನ ಪ್ರೀತಿಯ ಊರು. ನನ್ನ ಎಲ್ಲ ಶಿಕ್ಷಣ ಇಲ್ಲಿಯೇ ಮಾಡಿದ್ದು‌. ಮುಖ್ಯಮಂತ್ರಿಯಾಗಿ ನಾನು‌ ಹುಬ್ಬಳ್ಳಿಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ಹುಬ್ಬಳ್ಳಿ ರಾಜ್ಯದ ಎರಡನೇ ಅತೀದೊಡ್ಡ ನಗರ. ಹುಬ್ಬಳ್ಳಿ ಧಾರವಾಡವನ್ನ ಉತ್ತುಂಗಕ್ಕೆ‌ ತೆಗೆದುಕೊಂಡು ಹೋಗುತ್ತೇನೆ ಎಂದು ತಿಳಿಸಿದರು.

The post ಜಗದೀಶ್​ ಶೆಟ್ಟರ್​​ ನನ್ನ ಸ್ನೇಹಿತ; ಮಾಜಿ ಸಿಎಂ ಮುನಿಸಿಗೆ ತೆರೆ ಎಳೆದ ಬೊಮ್ಮಾಯಿ appeared first on News First Kannada.

Source: newsfirstlive.com

Source link